ಯಮಕನಮರ್ಡಿ-
ಸ್ನೇಹಿತರ ನಡುವಿನ ಜಗಳ ಕೊಲೆಯಲ್ಲಿ ಅಂತ್ಯವಾಗಿದೆ.
ಅಂಕಲಿ ಗ್ರಾಮದ ಹೊರವಲಯದಲ್ಲಿ ಈ ಘಟನೆ ನಡೆದಿದೆ.
ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲೂಕಿನ ಅಂಕಲಿ ಗ್ರಾಮದ ಪ್ರದೇಶದಲ್ಲಿ ಹುಸೇನಸಾಬ್ ದಸ್ತಗಿರ ಪರೀಟ್(25) ಕೊಲೆಯಾದ ದುರ್ದೈವಿಯಾಗಿದ್ದು
ಇಮ್ತಿಯಾಜ್ ಶೇಗಡಿ(25) ಕೊಲೆ ಮಾಡಿರುವ ಆರೋಪಿಯಾಗಿದ್ದಾನೆ.
ಹುಸೇನ್ ಸಾಬ್ ಹಾಗೂ ಇಮ್ತಿಯಾಜ್ ಶೇಗಡಿ ಇಬ್ಬರು ಯಮಕನಮರಡಿ ಗ್ರಾಮದವರಾಗದ್ದು,
ಯಮಕನಮರಡಿ ಯಿಂದ ಅಂಕಲಿ ಗ್ರಾಮದ ಕಡೆ ಬೈಕ್ ಮೆಲೆ ತೆರಳುವಾಗ, ಇಬ್ಬರ ನಡುವೆ ಹಣಕಾಸಿನ ವಿಚಾರಕ್ಕೆ ಜಗಳ ಆಗಿದೆ ಇಬ್ಬರ ನಡುವಿನ ವಾಗ್ವಾದ ತಾರಕಕ್ಕೇರಿ ಕೊಲೆಯಲ್ಲಿ ಅಂತ್ಯವಾಗಿದೆ.
ಸ್ಥಳಕ್ಕೆ ಅಂಕಲಿ ಪೊಲೀಸರ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.ಅಂಕಲಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.