ಬೆಳಗಾವಿ-ಬೆಳಗಾವಿ ಗಡಿಭಾಗ,ಮಹಾರಾಷ್ಟ್ರ ,ಗೋವಾ ,ಕರ್ನಾಟಕ ರಾಜ್ಯಗಳ ಸಂಸ್ಕೃತಿಯ ಸಂಗಮ.ಕ್ರಿಸ್ ಮಸ್ ಹಬ್ಬ ಶುರುವಾದ್ರೆ ಸಾಕು,ಇಲ್ಲಿ ಸಂಬ್ರಮ ಶುರುವಾಗುತ್ತದೆ.
ಕೊರೋನಾ ರೂಪಾಂತರಗೊಂಡ ಹಿನ್ನಲೆಯಲ್ಲಿ ರಾಜ್ಯ ಸರ್ಕಾರ ಇವತ್ತಿನಿಂದ ಜನೇವರಿ 2 ರವರೆಗೆ ನೈಟ್ ಕರ್ಫ್ಯು ಜಾರಿ ಮಾಡಿದ್ದು ಕ್ರಿಸ್ ಮಸ್ ,ಹ್ಯಾಪೀ ನ್ಯು ಇಯರ್ ಸಂಬ್ರಮಕ್ಕೆ ಬ್ರೇಕ್ ಬಿದ್ದಿದೆ.
ಇವತ್ತಿನಿಂದ ರಾತ್ರಿ 10 ಗಂಟೆಯಿಂದ ಬೆಳಗಿನ 6 ಗಂಟೆಯವರೆಗೆ ನೈಟ್ ಕರ್ಫ್ಯು ಜಾರಿಗೆ ಬರಲಿದೆ. ಹೀಗಾಗಿ ಬಾರ್ ಆ್ಯಂಡ ರೆಸ್ಟೋರೆಂಟ್,ಮತ್ತು ಹೊಟೇಲ್ ಉದ್ಯಮಕ್ಕೆ ಬಿಗ್ ಶಾಕ್ ತಟ್ಟಿದೆ.
ದೊಡ್ಡ ದೊಡ್ಡ ಹೊಟೇಲ್ ಮತ್ತು ಬಾರ್ ಆ್ಯಂಡ ರೆಸ್ಟೋರೆಂಟ್ ಗಳಲ್ಲಿ ಕ್ರಿಸ್ ಮಸ್ ಮತ್ತು ಹೊಸ ವರ್ಷಾಚರಣೆಯ ವಿಶೇಷ ಪಾರ್ಟಿಗಳನ್ನು ಆಯೋಜಿಸಲು ಭರದ ಸಿದ್ಧತೆ ನಡೆದಿರುವಾಗಲೇ ಸರ್ಕಾರ ನೈಟ್ ಕರ್ಫ್ಯು ಜಾರಿ ಮಾಡಿದೆ.ಹೊಸ ವರ್ಷದ ಸಂಬ್ರಮಾಚರಣೆಯ ಸಂಧರ್ಭದಲ್ಲಿ ರಾತ್ರಿ 12 ಗಂಟೆಗೆ ಬೆಳಗಾವಿಯಲ್ಲಿ ಓಲ್ಡ್ ಮ್ಯಾನ್ ಪ್ರತಿಕೃತಿ ದಹಿಸುವ ವಿಶೇಷ ಸಂಪ್ರದಾಯವಿದ್ದು,ಇದಕ್ಕೂ ಬ್ರೇಕ್ ಬಿದ್ದಂತಾಗಿದೆ.
ಬೆಳಗಾವಿಯ ಕ್ಯಾಂಪ್ ಪ್ರದೇಶದಲ್ಲಿ ಆಕರ್ಷಕವಾದ ಓಲ್ಡ್ ಮ್ಯಾನ್ ಪ್ರತಿಕೃತಿ ಗಳನ್ನು ನಿರ್ಮಿಸಿ ಮಾರಾಟ ಮಾಡಲು ಎಲ್ಲ ರೀತಿಯ ಸಿದ್ಧತೆಗಳು ನಡೆದಿರುವಾಗಲೇ ಸರ್ಕಾರ ಓಲ್ಡ್ ಮ್ಯಾನ್ ಗೂ ಶಾಕ್ ಕೊಟ್ಟಿದೆ.
ಕೊರೋನಾ ಸೊಂಕು ರೂಪಾಂತರಗೊಂಡಿರುವ ಸೊಂಕು ಪತ್ತೆಯಾದ ಹಿನ್ನಲೆಯಲ್ಲಿ ಸರ್ಕಾರ ಜನರ ಆರೋಗ್ಯದ ಕುರಿತು ವಿಶೇಷ ಕಾಳಜಿ ವಹಿಸಿ ನೈಟ್ ಕರ್ಫ್ಯು ಜಾರಿ ಮಾಡಿದ್ದು ಸ್ವಾಗತಾರ್ಹ ಎಂದು ಸಾಮಾಜಿಕ ಕಳಕಳಿವುಳ್ಳವರು ಅಭಿಪ್ರಾಯ ಪಟ್ಟಿದ್ದಾರೆ.