ಬೆಳಗಾವಿ-ಇಸ್ರೋದ ಬಹು ನಿರೀಕ್ಷಿತ ಚಂದ್ರಯಾನ ಯಶಸ್ವಿ ಹಿಂದೆ ಬೆಳಗಾವಿ ಪಾತ್ರ ಮುಖ್ಯವಾಗಿತ್ತು.ಬೆಳಗಾವಿಯ ಸರ್ವೋ ಕಂಟ್ರೋಲ್ಸ್ ಏರೋಸ್ಪೇಸ್ ಇಂಡಿಯಾ ಪ್ರೈ. ಲಿ ಕೊಡುಗೆ ಅಪಾರವಾಗಿದೆ.
ಚಂದ್ರಯಾನಕ್ಕೆ ತೆರಳಿರುವ ವಿಕ್ರಮ ಲ್ಯಾಂಡರ್‌ನ ಬಿಡಿಭಾಗ ತಯಾರಾಗಿದ್ದೇ ಬೆಳಗಾವಿಯಲ್ಲಿ ಅನ್ನೋದು ಬೆಳಗಾವಿಯ ಜನ ಹೆಮ್ಮೆ ಪಡುವ ವಿಚಾರವಾಗಿದೆ.ಚಂದ್ರಯಾನ ಸಕ್ಸಸ್ ಕುರಿತು ಬೆಳಗಾವಿ ಸುದ್ದಿ ಡಾಟ್ ಕಾಮ್ ಗೆ ಸರ್ವೋ ಕಂಟ್ರೋಲ್ಸ್‌ನ ಮಾಲೀಕ ದೀಪಕ್ ದಡೂತಿ ಪ್ರತಿಕ್ರಿಯೆ ನೀಡಿದ್ದಾರೆ.ಪ್ರಜ್ಞಾನ ರೋವರ್ ಹಾಗೂ ಲ್ಯಾಂಡರ್ ಸೋಲಾರ್ ಪ್ಯಾನಲ್ ಕಂಟ್ರೋಲ್ ಮಾಡುವ ಬಿಡಿಭಾಗ ನಾವೇ ರೆಡಿ ಮಾಡಿದ್ದೇವೆ ಎನ್ನುವ ಹೆಮ್ಮೆಯ ಸಂಗತಿಯನ್ನು ಮಾದ್ಯಮಗಳ ಜೊತೆ ಹಂಚಿಕೊಂಡಿದ್ದಾರೆ.
ಚಂದ್ರಯಾನ ಮೂರು ಯಶಸ್ವಿ ಆಗಿರುವುದಕ್ಕೆ ಖುಷಿ ಆಗಿದೆ.ಈಗ ಚಂದ್ರನ ಅಧ್ಯಯನ ಆರಂಭವಾಗಿದ್ದು, ನಮ್ಮ ಬಿಡಿಭಾಗದ ಪಾತ್ರವೂ ಮುಖ್ಯವಿದೆ.ಈ ಹಿಂದೆಯೂ ಮಂಗಳಯಾನ, ಚಂದ್ರಯಾನ-2ಗೂ ನಾವು ಕೆಲಸ ಮಾಡಿದ್ದೇವೆ.ಇಸ್ರೋದ ಗಗನಯಾನಕ್ಕೂ ನಾವು ಕೆಲಸ ಮಾಡುತ್ತಿರುವುದಕ್ಕೆ ಖುಷಿ ಇದೆ.ಕಳೆದ 15 ವರ್ಷಗಳಿಂದ ಇಸ್ರೋ ಜೊತೆಗೆ ನಾವು ಕೆಲಸ ಮಾಡುತ್ತಿದ್ದೇವೆ ದೀಪಕ ದಡೂತಿ ಹೇಳಿದ್ದಾರೆ
ಮಾನವ ಸಹಿತ ಚಂದ್ರಯಾನದ ಪ್ರೊಜೆಕ್ಟ್‌ಗೂ ನಾವು ಕೆಲಸ ಮಾಡಲು ಉತ್ಸುಕರಾಗಿದ್ದೇವೆ ಎಂದು ದೀಪಕ್ ದಡೂತಿ ಮಾಹಿತಿ ನೀಡಿದ್ದಾರೆ. ಒಟ್ಟಾರೆ ಚಂದ್ರಯಾನದಲ್ಲೂ ಕ್ರಾಂತಿಯ ನೆಲ ಬೆಳಗಾವಿಯ ಪಾತ್ರ ಇರೋದು ಬೆಳಗಾವಿ ಜಿಲ್ಲೆಯ ಜನ ಹೆಮ್ಮೆ ಪಡುವ ಸಂಗತಿಯಾಗಿದೆ.