ಬೆಳಗಾವಿಯಲ್ಲಿ ಗ್ರಾಹಕರ ಕಣ್ಣಲ್ಲಿ ಕಾಂದಾ ಕಣ್ಣೀರು…..!!!
ಬೆಳಗಾವಿ- ಇತ್ತಿಚಿಗೆ ಮಹಾರಾಷ್ಟ್ರದಲ್ಲಿ ಬಂದು ಹೋದ ಮಹಾಪೂರದಲ್ಲಿ ಉಳ್ಳಾಗಡ್ಡಿ ಬೆಳೆ ಸಂಪೂರ್ಣವಾಗಿ ಜಲ ಸಮಾಧಿಯಾದ ಹಿನ್ನಲೆಯಲ್ಲಿ ಈ ಉಳ್ಳಾಗಡ್ಡಿ ಬೆಲೆ ಗ್ರಾಹಕರ ಕಣ್ಣಲ್ಲಿ ಕಣ್ಣೀರಿನ ಮಹಾಪೂರ ಬರುವಷ್ಟು ಖಾರವಾಗಿದೆ
ಭಾರತದಲ್ಲೇ ಅತೀ ಹೆಚ್ಚು ಉಳ್ಳಾಗಡ್ಡಿ ಬೆಳಿಯೋದು ಮಹಾರಾಷ್ಟ್ರದ ನಾಸೀಕ ಪ್ರದೇಶದಲ್ಲಿ ಇಲ್ಲಿಯ ಉಳ್ಳಾಗಡ್ಡಿ ಉತ್ಪನ್ನ ದೇಶದ ಬೇಡಿಕೆಯನ್ನು ಈಡೇರಿಸುತ್ತದೆ.
ಮಹಾಪೂರ ಬಂದು ಉಳ್ಳಾಗಡ್ಡಿ ಬೆಳೆಯನ್ನೇ ನುಂಗಿರುವಾಗ ಬೆಳಗಾವಿಗೆ ಉಳ್ಳಾಗಡ್ಡಿ ಆವಕ ಕಡಿಮೆಯಾಗಿ ,ಬೆಳಗಾವಿಯಲ್ಲಿ ಈಗ ಉಳ್ಳಾಗಡ್ಡಿ ಬೆಳೆ 200 ರೂ ಗಡಿ ದಾಟುವ ಹೊಸ್ತಿಲಲ್ಲಿದೆ.
ಇಂದು ಬೆಳಗಾವಿ ಕಾಂದಾ ಮಾರ್ಕೇಟ್ ನಲ್ಲಿ
ನಂ1ಉಳ್ಳಾಗಡ್ಡಿ-170 ಕೆಜಿ
ನಂ2 ಉಳ್ಳಾಗಡ್ಡಿ-130 ಕೆಜಿ
ನಂ 3 ಉಳ್ಳಾಗಡ್ಡಿ-110
ಬೆಳಗಾವಿ ಮಾರ್ಕೆಟ್ ನಲ್ಲಿ ಉಳ್ಳಾಗಡ್ಡಿಯನ್ನು ಗುಣಮಟ್ಟದಲ್ಲಿ ವಿಂಗಡಿಸಿ ನಂ1,ನಂ2,ನಂ3 ಎಂದು ವಿಂಗಡಿಸಿ ಮಾರಾಟ ಮಾಡಲಾಗುತ್ತಿದೆ ಮುಂದಿನ ಎರಡು ತಿಂಗಳು ಹೊಸ ಬೆಳೆ ಬರುವದಿಲ್ಲ ಹೊಸ ಉಳ್ಳಾಗಡ್ಡಿ ಬರುವಷ್ಟರಲ್ಲಿ ಉಳ್ಳಾಗಡ್ಡಿ ಬೆಲೆ ಗ್ರಾಹಕರ ಕೆಗೆಟುಕಲು ಸಾಧ್ಯವಾಗದಷ್ಟು ಏರುಕೆ ಆಗೋದು ಗ್ಯಾರಂಟಿ
ಉಳ್ಳಾಗಡ್ಡಿ ಬೆಲೆಯ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ಜೋಕ್ ಗಳು ಹರಿದಾಡುತ್ತಿವೆ ಆ ಜೋಕ್ ಗಳು ಹೇಗಿವೆ ನೋಡಿ ನಕ್ಕಿ ಆನಂದಿಸಿ
ರಿಕ್ಷಾದಲ್ಲಿ ಪ್ರಯಾಣಿಸುವಾಗ ಕೈಚೀಲಿನಿಂದ ಬಿದ್ದ ಉಳ್ಳಾಗಡ್ಡಿಯನ್ನು ಪ್ರಯಾಣಿಕರಿಗೆ ಮರಳಿಸಿ ಪ್ರಾಮಾಣಿಕತೆ ಮೆರೆದ ಅಟೋ ಚಾಲಕ
ರೈತನ ಮಗನಿಗೆ ಮೆಡಿಕಲ್ ಹುಡುಗಿಯನ್ನು ಕೊಟ್ಟು ಮದುವೆ ಮಾಡುವದಿಲ್ಲ ಎಂದಿದ್ದ ಹುಡುಗಿಯ ತಂದೆ ರೈತನ ಉಳ್ಳಾಗಡ್ಡಿ ಬೆಳೆಯನ್ನು ನೋಡಿ ತನ್ನ ಮಗಳ ಮದುವೆಯನ್ನು ರೈತನಗನೊಂದಿಗೆ ನಿಶ್ಚಿಯಿಸಿದ ಘಟನೆ ನಡೆದಿದೆ.
ಬಂದೀ ಏನವ್ವ ಚಂದಾ…
ಬರುವಾಗ ತಂದಿ ಏನವ್ವಾ ಕಾಂದಾ..
ರಕ್ತ ಕಣ್ಣೀರು ಚಿತ್ರದ ಹಾಗೆ ಕಾಂದಾ ಕಣ್ಣೀರು ಸಿನಿಮಾ ಮಾಡಲು ಹಿರಿಯ ಪತ್ರಕರ್ತ ದಿಲೀಪ ಕುರುಂದವಾಡೆ ನಿರ್ಧಾರ
ಕಾಂದಾ ಕಣ್ಣೀರು ಸಿನಿಮಾ ಗೆ ಬಂಡವಾಳ ಹೂಡಲು ಮುಂದಾದ ಉಮೇಶ್ ಕತ್ತಿ…..
ಉಳ್ಳಾಗಡ್ಡಿಯ ಬೆಲೆ ಏರಿಕೆ ಹೀಗೆ ಹಲವಾರು ಜೋಕ್ ಗಳಿಗೆ ಆಸ್ಪದ ಮಾಡಿ ಕೊಟ್ಟಿದ್ದು ಉಳ್ಳಾಗಡ್ಡಿ ಖರೀದಿ ಮಾಡದೇ ಹೋದರೂ ಜೋಕ್ ಓದಿ ಎಂಜಾಯ್ ಮಾಡಿ