ಕೀರ್ತಿಯ ಪುತ್ರರು ಎರಡು ರಾತ್ರಿ ರೈಲು ನಿಲ್ಧಾಣದಲ್ಲೇ ಕಳೆಯಬೇಕಾಯಿತು…….!!!
ಬೆಳಗಾವಿ-ನಮ್ಮ ನೆಲದ ಕೀರ್ತಿಯನ್ನು ರಾಷ್ಟ್ರಮತ್ತು ಅಂತರಾಷ್ಟ್ರೀಯ ಮಟ್ಟದಲ್ಲಿ ಬೆಳಗಿಸುವ ಪೈಲವಾನ್ ರ ಜೊತೆ ರಾಜ್ಯ ಸರ್ಕಾರ ಯಾವ ರೀತಿಯಲ್ಲಿ ನಡೆದುಕೊಳ್ಳುತ್ತಿದೆ ಎನ್ನುವ ಸ್ಟೋರಿ ಕೇಳಿದರೆ,ಈ ರಾಜ್ಯದ ಕ್ರೀಡಾ ಇಲಾಖೆಯ ಕಾರ್ಯವೈಖರಿಯ ಬಗ್ಗೆ ನಿಜವಾಗಿಯೂ ಆಕ್ರೋಶ ಹೊರ ಬರುವದರಲ್ಲಿ ಸಂಶಯವೇ ಇಲ್ಲ.
ಇತ್ತೀಚಿಗೆ ದೆಹಲಿಯ ನೋಯಿಡಾದಲ್ಲಿ ರಾಷ್ಟ್ರೀಯ ಕ್ರೀಡಾ ಉತ್ಸವ ನಡೆದಿತ್ತು ಈ ಉತ್ಸವದಲ್ಲಿ ಪಾಲ್ಗೊಳ್ಳಲು ಕರ್ನಾಟಕ ರಾಜ್ಯದಿಂದ ಕೇವಲ ಐದು ಜನ ಪೈಲವಾನರು ಭಾಗವಹಿಸಿದ್ದರು,ಟ್ರೇನ್ ಟಿಕೆಟ್ ಬುಕ್ ಮಾಡಿಸಿ ಈ ಪೈಲವಾನರನ್ನು ದೆಹಲಿಗೆ ಕಳುಹಿಸಿದ ರಾಜ್ಯ ಕುಸ್ತೀ ಪಟುಗಳ ಸಂಘ,ಯಾವುದೇ ರೀತಿಯ ಸವಲತ್ತುಗಳನ್ನು ಕಲ್ಪಸಿ ಕೊಡದೇ ಅವರನ್ನು ಅತ್ಯಂತ ಕಡೆಗೆಣಿಸಿರುವ ವಿಷಯ ಈಗ ಚರ್ಚೆಗೆ ಗುರಿಯಾಗಿದೆ.
ರಾಜ್ಯದಿಂದ ಕುಸ್ತಿ ಪಟುಗಳು ರಾಷ್ಟ್ರ ಮಟ್ಟದ ಸ್ಪರ್ದೆಯಲ್ಲಿ ಭಾಗವಹಿಸುವಾಗ ಅವರ ಜೊತೆ ಕಡ್ಡಾಯವಾಗಿ ಕೋಚ್ ಹೋಗಬೇಕು ಎನ್ನುವ ನಿಯಮ ಇದ್ದರೂ ರಾಜ್ಯದಿಂದ ದೆಹಲಿಗೆ ಹೋದ ಐದು ಜನ ಪೈಲವಾನ್ ರ ಜೊತೆ ಕೋಚ್ ಹೋಗಲಿಲ್ಲ.ಇವರಿಗೆ ಯಾವುದೇ ರೀತಿಯ ಅನಕೂಲತೆಗಳನ್ನು ಕಲ್ಪಿಸಿ ಕೊಟ್ಟಿಲ್ಲ ಎನ್ನುವದು ಬೆಳಗಾವಿ ಜಿಲ್ಲಾ ಕುಸ್ತಿ ಪಟುಗಳ ಸಂಘದ ಆರೋಪವಾಗಿದೆ.
ದೆಹಲಿಯಿಂದ ಮರಳುವಾಗ ಟ್ರೇನ್ ಟಿಕೆಟ್ ರದ್ದಾಗಿದ್ದರಿಂದ ಈ ಕುಸ್ತಿ ಪಟುಗಳು ಎರಡು ರಾತ್ರಿ ದೆಹಲಿಯ ರೇಲ್ವೆ ನಿಲ್ಧಾಣದಲ್ಲೇ ಕಾಯುವ ಪರಿಸ್ಥಿತಿ ಎದರರಾಯಿತು ಇದಕ್ಕೆಲ್ಲಾ ಕಾರಣವಾಗಿರುವ ರಾಜ್ಯ ಕುಸ್ತಿ ಸಂಘದ ಕಾರ್ಯದರ್ಶಿಯನ್ನು ತಕ್ಷಣ ಬದಲಾವಣೆ ಮಾಡಬೇಕೆಂದು ಬೆಳಗಾವಿ ಜಿಲ್ಲಾ ಕುಸ್ತಿ ಪಟುಗಳ ಸಂಘ ಬೆಳಗಾವಿ ಜಿಲ್ಲಾಧಿಕಾರಿಗಳಿಗೆ ಮನವಿ ಅರ್ಪಿಸಿದ್ದಾರೆ..