ಬೆಳಗಾವಿ – ಕೋವೀಡ್ ಹಿನ್ನಲೆಯಲ್ಲಿ ಕಳೆದ 6 ತಿಂಗಳಿನಿಂದ ಬಾಗಿಲು ಮುಚ್ಚಿಕೊಂಡಿದ್ದ ಬೆಳಗಾವಿಯ ಪಾಸ್ ಪೋರ್ಟ್ ಸೇವಾ ಕೇಂದ್ರ ಇಂದಿನಿಂದ ಮತ್ತೆ ಕಾರ್ಯಾರಂಭ ಮಾಡಿದೆ.
ಬೆಳಗಾವಿಯ ಪ್ರಧಾನ ಅಂಚೆ ಕಚೇರಿಯ ಎರಡನೇಯ ಮಹಡಿಯಲ್ಲಿ ಪಾಸ್ ಪೋರ್ಟ್ ಸೇವಾ ಕೇಂದ್ರ ಇತ್ತು ಆದ್ರೆ ಈಗ ಪ್ರಧಾನ ಅಂಚೆ ಕಚೇರಿಯ ಕ್ಯಾಂಟೀನ್ ಪಕ್ಕದ ಹೊಸ ಕಟ್ಟಡದ ನೆಲ ಮಹಡಿಯಲ್ಲಿಯೇ ಕೇಂದ್ರ ಶಿಪ್ಟ್ ಆಗಿದ್ದು ಹೊಸತನದೊಂದಿಗೆ ಇಂದಿನಿಂದ ಸೇವೆ ಆರಂಭಿಸಿದೆ
ಪ್ರತಿದಿನ ಕೇವಲ 25 ಜನರಿಗೆ ಮಾತ್ರ ಅಪಾಯಿನ್ಮೆಂಟ್ಸ್ ಕೊಡಲಾಗುತ್ತಿದೆ,ಪ್ರತಿ ದಿನ 25 ಜನರ ಅರ್ಜಿಗಳನ್ನು ಮಾತ್ರ ಪರಶೀಲನೆ ಮಾಡಲಾಗುತ್ತಿದೆ
ಬೆಳಗಾವಿಗೆ ಪಾಸ್ ಪೋರ್ಟ್ ಸೇವಾ ಕೇಂದ್ರವನ್ನು ದಿವಂಗತ ಸುರೇಶ್ ಅಂಗಡಿ ಅವರು ಮಂಜೂರು ಮಾಡಿಸಿದ್ದನ್ನು ನಾವಿಲ್ಲಿ ಸ್ಮರಿಸಬಹುದಾಗಿದೆ.ಪಾಸ್ ಪೋರ್ಟ್ ಸೇವಾ ಕೇಂದ್ರ ಸುರೇಶ ಅಂಗಡಿ ಅವರು ಬೆಳಗಾವಿಗೆ ನೀಡಿದ ಮುಖ್ಯ ಕೊಡುಗೆಗಳಲ್ಲಿ ಒಂದಾಗಿದೆ.
ಬೆಳಗಾವಿ ಸುದ್ದಿ | Belagavi Suddi | Belagavi News ಸಮಸ್ಯಗೆ ಸ್ಪಂದನೆ