ಬೆಳಗಾವಿ- ರಾಜ್ಯದ ಎರಡನೇಯ ರಾಜಧಾನಿ ಗಡಿನಾಡ ಗುಡಿಗೆ ಈಗ ಮತ್ತೊಂದು ಅಭಿವೃದ್ಧಿಯ ಕಿರೀಟ ದಕ್ಕಿದೆ,ಸಂಸದ ಸುರೇಶ ಅಂಗಡಿ ಅವರ ಸತತ ಪ್ರಯತ್ನ ಫಲ ನೀಡಿದ್ದು ಬೆಳಗಾವಿ ನಗರಕ್ಕೆ ವಿದೇಶಾಂಗ ಸಚಿವಾಲಯ ಪಾಸ್ ಪೋರ್ಟ ಸೇವಾ ಕೇಂದ್ರಕ್ಕೆ ಸಮ್ಮತಿ ಸೂಚಿಸಿದೆ
ಈ ಕುರಿತು ಬೆಳಗಾವಿ ಸುದ್ಧಿ ಡಾಟ್ ಕಾಮ್ ಜೊತೆ ಮಾತನಾಡಿದ ಸಂಸದ ಸುರೇಶ ಅಂಗಡಿ ಕೇಂದ್ರದ ವಿದೇಶಾಂಗ ಸಚಿವಾಲಯ ಬೆಳಗಾವಿಗೆ ಪಾಸ್ ಪೋರ್ಟ ಸೇವಾ ಕೇಂದ್ರ ಪೋಸ್ಟ್ ಆಫೀಸ್ ಮಂಜೂರು ಮಾಡಿದೆ ಶೀಘ್ರದಲ್ಲಿಯೇ ಕಾರ್ಯಾರಂಭ ಮಾಡಲಿದೆ ಎಂದು ಅಂಗಡಿ ತಿಳಿಸಿದ್ದಾರೆ
ಪಾಸ್ ಪೋರ್ಟ ಸೇವಾ ಕೇಂದ್ರ ಬೆಳಗಾವಿಯಲ್ಲಿ ತೆರೆಯಲು ವಿದೇಶಾಂಗ ಸಚಿವೆ ಸುಶ್ಮಾ ಸ್ವರಾಜ ಅವರನ್ನು ಭೇಟಿಯಾಗಿ ಮನವಿ ಅರ್ಪಿಸಲಾಗಿತ್ತು ಅದಕ್ಕೆ ಸ್ಪಂದಿಸಿದ್ದ ಸಚಿವೆ ಸುಶ್ಮಾ ಆರಂಭದಲ್ಲಿ ಬೆಳಗಾವಿಯಲ್ಲಿ ಪಾಸ್ ಪೋರ್ಟ್ ಸೇವಾ ಕೇಂದ್ರದ ಕ್ಯಾಂಪ್ ನಡೆಸಲು ಸೂಚಿಸಿ ಈಗ ಪಾಸ್ ಪೋರ್ಟ ಸೇವಾ ಕೇಂದ್ರಕ್ಕೆ ಮಂಜೂರಾತಿ ನೀಡಿದ್ದಾರೆ ಎಂದು ಸುರೇಶ ಅಂಗಡಿ ಹರ್ಷ ವ್ಯೆಕ್ತ ಪಡಿಸಿದ್ದಾರೆ
ಈ ಕುರಿತು ಸುಶ್ಮಾ ಸ್ವರಾಜ ಅವರನ್ನು ಶೀಘ್ರದಲ್ಲಿಯೇ ಭೇಟಿಯಾಗಿ ಬೆಳಗಾವಿ ಜಿಲ್ಲೆಯ ಜನತೆಯ ಪರವಾಗಿ ಧನ್ಯವಾದ ಹೇಳಿ ಪಾಸ್ ಪೋರ್ಟ ಸೇವಾ ಕೇಂದ್ರಕ್ಕೆ ಅಗತ್ಯವಿರುವ ಎಲ್ಲ ಮೂಲಭೂತ ಸೌಲಭ್ಯಗಳನ್ನು ತ್ವರಿತ ಗತಿಯಲ್ಲಿ ಪೂರೈಸಲಾಗುವದು ಎಂದು ಸಚೆವೆ ಸುಶ್ಮಾ ಅವರಿಗೆ ತಿಳಿಸಲಾಗುವದು ಎಂದು ಅಂಗಡಿ ಹೇಳಿದ್ದಾರೆ
ಪಾಸ್ ಪೋರ್ಟಗಾಗಿ ಬೆಳಗಾವಿ ಜಿಲ್ಲೆಯ ಜನ ಹುಬ್ಬಳ್ಳಿಗೆ ಹೋಗಬೇಕಾದ ಅನಿವಾರ್ಯತೆ ಇತ್ತು ಕರ್ನಾಟಕ ,ಗೋವಾ,ಮಹಾರಾಷ್ಟ್ರ ಮೂರು ರಾಜ್ಯಗಳ ಸಂಪರ್ಕದ ಕೊಂಡಿ ಆಗಿರುವ ಬೆಳಗಾವಿಗೆ ಪಾಸ್ ಪೋರ್ಟ್ ಸೇವಾ ಕೇಂದ್ರದ ಅಗತ್ಯವಿತ್ತು ಹಲವಾರು ವರ್ಷಗಳಿಂದ ನಡೆದಿರುವ ಹೋರಾಟಕ್ಕೆ ಕೇಂದ್ರ ಸರ್ಕಾರ ಸ್ಪಂದಿಸಿದೆ ಎಂದು ಅಂಗಡಿ ತಿಳಿಸಿದ್ದಾರೆ
Check Also
ವೀಕ್ಲಿ ಮ್ಯಾರೇಜ್,ಇದು ಲಕ್ಷ ಲಕ್ಷ ರೂಗಳ ಪ್ಯಾಕೇಜ್ ಹುಡುಗರ ಲೈಫ್ ಡ್ಯಾಮೇಜ್ …..!!!
ಬೆಳಗಾವಿ – ಹೆಣ್ಣು ಮಕ್ಕಳ ಮಾರಾಟ ಆಯ್ತು,ಹನಿ ಟ್ರ್ಯಾಪ್ ಗೋಳಾಟ ಆಯ್ತು ಈಗ ಹೊಸದೊಂದ ಆಟ ಶುರುವಾಗಿದೆ ಇದು ಮದ್ಯ …