ಬೆಳಗಾವಿ- ಪಕ್ಕದ ಮಹಾರಾಷ್ಟ್ರದಿಂದ ಬೆಳಗಾವಿಗೆ ಮೂವರು ಜನ ಕೊರೋನಾ ಸೊಂಕಿತರು ಬೆಳಗಾವಿಗೆ ಆಕ್ರಮವಾಗಿ ನುಸುಳಿ ಬಂದು ಬೆಳಗಾವಿ ಬಸ್ ನಿಲ್ಧಾಣದಲ್ಲಿ ಪೋಲೀಸರ ಕೈಗೆ ಸಿಕ್ಕಿದ ಘಟನೆ ನಡೆದಿದೆ.
ಬೆಳಗಾವಿ ಬಸ್ ನಿಲ್ಧಾಣದಲ್ಲಿ ಕರ್ತವ್ಯ ನಿಭಾಯಿಸುತ್ತಿದ್ದ ಪೋಲೀಸ್ ಹವಾಲ್ದಾರ್ ಎಸ್ ಬಿ ಮಡಿವಾಳ ಅವರ ಸಮಯ ಪ್ರಜ್ಞೆಯಿಂದಾಗಿ ಮೂವರು ಜನ ಮಹಾರಾಷ್ಟ್ರದ ಶಂಕಿತರು ಬೆಳಗಾವಿ ಬಸ್ ನಿಲ್ಧಾಣದಲ್ಲಿ ಸಿಕ್ಕಿದ್ದಾರೆ.
ಬೆಳಗಾವಿಯ ಬಸ್ ನಿಲ್ಧಾಣದಲ್ಲಿ ಮೂವರ ಕೈಗೆ ಕ್ವಾರಂಟೈನ್ ಮುದ್ರೆ ಇರುವದನ್ನು ಗಮನಿಸಿದ ಹವಾಲ್ದಾರ್ ಎಸ್ ಬಿ ಮಡಿವಾಳರ ತಕ್ಷಣ ಮಾರ್ಕೆಟ್ ಠಾಣೆಯ ಸಿಪಿಐ ಸಂಗಮೇಶ್ ಶಿವಯೋಗಿ ಅವರ ಗಮನಕ್ಕೆ ತಂದ ಬಳಿಕ ತಕ್ಷಣ ಬಸ್ ನಿಲ್ಧಾಣಕ್ಕೆ ಆಗಮಿಸಿದ ಸಿಪಿಐ ಸಂಗಮೇಶ ಶಿವಯೋಗಿ ಮೂವರನ್ನು ವಶಕ್ಕೆ ಪಡೆದು ಅಂಬ್ಯುಲೆನ್ಸ ಕರೆಯಿಸಿ ಮಹಾರಾಷ್ಟ್ರದಿಂದ ಬೆಳಗಾವಿಗೆ ಆಕ್ರಮವಾಗಿ ಬಂದ ಮೂವರನ್ನು ಕ್ವಾರಂಟೈನ್ ಮಾಡಿಸಿದ್ದಾರೆ.
ಈ ಮೂವರಲ್ಲಿ ಒಬ್ಬ ಮಹಾರಾಷ್ಟ್ರದ ವೀಟಾ,ಮತ್ತೊಬ್ಬ ಪೂನಾ.ಇನ್ನೊಬ್ಬ ಗೀವಾದಿಂದ ಬೆಳಗಾವಿಗೆ ಆಕ್ರಮವಾಗಿ ಬಂದಿದ್ದರು ವೀಟಾದಿಂದ ಬಂದವನ ಬಾಡಿ ಟೆಂಪ್ರೇಚರ್ 103 ತೋರಿಸಿದೆ ಆತನಿಗೆ ವಿಪರೀತ ಜ್ವರ ಇತ್ತು ಎಂದು ತಿಳಿದು ಬಂದಿದೆ
ಮಾರ್ಕೆಟ್ ಸಿಪಿಐ ಸಂಗಮೇಶ ಶಿವಯೋಗಿ ಅವರು ಬಸ್ ನಿಲ್ಧಾಣದಲ್ಲಿ ಬಿಗಿ ಪೋಲೀಸ್ ಪಹರೆ ಏರ್ಪಡಿಸಿದ ಪರಿಣಾಮ, ಹವಾಲ್ದಾರ್ ಎಸ್ ಬಿ ಮಡಿವಾಳ ಅವರ ಸಮಯ ಪ್ರಜ್ಞೆ ಯಿಂದಾಗಿ ದೊಡ್ಡ ಅನಾಹುತವೇ ತಪ್ಪಿದಂತಾಗಿದೆ
ಮಹಾರಾಷ್ಟ್ರದ ವೀಟಾ ದಿಂದ ಬೆಳಗಾವಿಗೆ ಆಕ್ರಮವಾಗಿ ಬಂದ ಶಂಕಿತ ಖಾನಾಪುರ ತಾಲ್ಲೂಕಿನ ಬಡಸ ಗ್ರಾಮಕ್ಕೆ ತೆರಳುತ್ತಿದ್ದ ಎಂದು ಗೊತ್ತಾಗಿದೆ
ಇಂದಿನ ರಿಯಲ್ ಹಿರೋ ಹವಾಲ್ದಾರ್ ಎಸ್ ಬಿ ಮಡಿವಾಳ ಹ್ಯಾಟ್ಸ್ ಪ್ ಮಡಿವಾಳ ಸರ್….