Breaking News

ಬೆಳಗಾವಿ ಜಿಲ್ಲೆಗೆ ಮತ್ತೆ ಕೊರೋನಾ ಶಾಕ್, ಜಿಲ್ಲೆಯ 9 ಜನರಲ್ಲಿ ರಲ್ಲಿ ಮತ್ತೆ ಸೊಂಕು ಪತ್ತೆ

ಬೆಳಗಾವಿ- ಬೆಳಗಾವಿ ಜಿಲ್ಲೆಗೆ ಕೊರೋನಾ ವೈರಸ್ ಮತ್ತೆ ಶಾಕ್ ನೀಡಿದೆ.ಇಂದು ಗುರುವಾರ ಬಿಡುಗಡೆಯಾದ ಮಿಡ್ ಡೇ ಬುಲಿಟೀನ್ ನಲ್ಲಿ ಬೆಳಗಾವಿ ಜಿಲ್ಲೆಯ. 9 ಜನರಲ್ಲಿ ಸೊಂಕು ಪತ್ತೆಯಾಗಿದೆ

ಇಂದು ಪತ್ತೆಯಾಗಿರುವ ಕೊರೋನಾ ಸಂಕಿತರಿಂದಾಗಿ ಬೆಳಗಾವಿ ಜಿಲ್ಲೆಯಲ್ಲಿ ರಾಜ್ಯ ಹೆಲ್ತ್ ಬುಲಿಟೀನ್ ಪ್ರಕಾರ ಸೊಂಕಿತರ ಸಂಖ್ಯೆ 125  ಕ್ಕೇ ಏರಿದಂತಾಗಿದೆ.

ಬೆಳಗಾವಿ ಜಿಲ್ಲೆಯ ಬೈಲಹೊಂಗಲ ತಾಲೂಕಿನ ಸಂಪಗಾಂವ ಗ್ರಾಮದ 8 ಜನ ಅಜ್ಮೇರ್ ದರ್ಗಾ ದರ್ಶನ ಮಾಡಿ ಸಂಪಗಾಂವ ಮರಳಿದ್ದರು ಇವರನ್ನು ಸಂಪಗಾಂವ ಗ್ರಾಮದ ಹಾಸ್ಟೇಲ್ ನಲ್ಲಿ ಕ್ವಾರಂಟೈನ್ ಮಾಡಲಾಗಿತ್ತು 8 ಜನರಲ್ಲಿ ಇಬ್ಬರಿಗೆ ಸೊಂಕು ಇರುವದು ದೃಡವಾಗಿದ್ದು ಸಂಪಗಾಂವ ಗ್ರಾಮಕ್ಕೆ ಮಹಾಮಾರಿ ವೈರಸ್ ವಕ್ಕರಿಸಿದ್ದು ಸಂಪಗಾಂವ ಗ್ರಾಮದಲ್ಲಿ ಆತಂಕ ಮೂಡಿಸಿದೆ.

ಇಷ್ಟು ದಿನ ತಣ್ಣಗಾಗಿದ್ದ ಬೈಲಹೊಂಗಲ ತಾಲ್ಲೂಕಿನಲ್ಲಿ ಕೊರೋನಾ ವೈರಸ್ ಎಂಟ್ರಿಕೊಟ್ಟಿದೆ. ರಾಮದುರ್ಗ ತಾಲ್ಲೂಕಿನ ಕಲ್ಲೂರ ಗ್ರಾಮದ 7 ವರ್ಷದ ಮಗುವಿಗೂ ಸೊಂಕು ಇರುವದು ದೃಡವಾಗಿದೆ

Check Also

ಮೂವರ ಜೀವ ಉಳಿಸಿದ ಬಾಲಿಕಾಗೆ ಮಿನಿಸ್ಟರ್ ಶಹಬ್ಬಾಶ್….!

  ಬೆಳಗಾವಿ ಟಿಳಕವಾಡಿಯ ಕಾಂಗ್ರೆಸ್ ರಸ್ತೆಯ ಮೊದಲನೇ ರೇಲ್ವೆ ಗೇಟ್ ಬಳಿ ಆತ್ಮಹತ್ಯೆ ಮಾಡಿಕೊಳ್ಳಲು ಮುಂದಾಗಿದ್ದ ಮೂವರ ಜೀವ ಉಳಿಸಿ …

Leave a Reply

Your email address will not be published. Required fields are marked *

Sahifa Theme License is not validated, Go to the theme options page to validate the license, You need a single license for each domain name.