ಬೆಳಗಾವಿ- ಗಡಿಭಾಗದ ಬೆಳಗಾವಿಯಲ್ಲಿ ಎಂಈಎಸ್ ಮುಖಂಡ ಶುಭಂ ಸಾಳುಂಕೆ ಅವರು ಕನ್ನಡಿಗರ ವಿರುದ್ಧ ಮಾಡಿರುವ ಪ್ರಚೋದನಕಾರಿ ಭಾಷಣದ ಅಸಲಿ ಸಿಡಿ ಯನ್ನು ಕರವೇ ಕಾರ್ಯಕರ್ತರು ಡಿಸಿಪಿ ವಿಕ್ರಂ ಅಮಟೆ ಅವರಿಗೆ ಹಸ್ತಾಂತರ ಮಾಡಿ ಶುಭಂ ಸಾಳುಂಕೆ ವಿರುದ್ಧ ದೂರು ನೀಡಿದ್ದಾರೆ.
ಬೆಳಗಾವಿ ಗಡಿಯಲ್ಲಿ ಎಂಇಎಸ್ ಮುಖಂಡ ಶುಭಂ ಸಿಳಕೆ ಯಿಂದ ಕನ್ನಡಿಗರಿಗೆ ಧಮ್ಕಿ ಹಾಕಿದ ಪ್ರಕರಣ ಈಗ ಬೆಳಗಾವಿಯ ವಿವಿಧ ಪೋಲೀಸ್ ಠಾಣೆಗಳ ಮೆಟ್ಟಲೇರಿದ್ದು,ಎಂಇಎಸ್ ಮುಖಂಡ ಶುಭಂ ಸಿಳಕೆ ವಿರುದ್ಧ ದೂರು ನೀಡಲಾಗಿದೆ.
ಶುಭಂ ವಿರುದ್ಧ ಬೆಳಗಾವಿ ಕಮಿಷನರ್ ತ್ಯಾಗರಾಜನ್ ಗೆ ದೂರ ದಾಖಲಿಸಿದ ಕನ್ನಡಪರ ಹೋರಾಟಗಾರು.ಕರವೇ ಅಧ್ಯಕ್ಷ ದೀಪಕ್ ಗುಡಗನಟ್ಟಿ, ಕರವೇ ರಾಜ್ಯ ಮುಖಂಡ ಮಹಾದೇವ ತಳವಾರ್ ನೇತೃತ್ವದಲ್ಲಿ ಕನ್ನಡ ಸಂಘಟನೆಗಳಿಂದ ದೂರು ದಾಖಲು ಮಾಡಿದ್ದಾರೆ.
ಕೆಂಪು ಹಳದಿ ಬಣ್ಣದ ಶಾಲು ಹಾಕಿಕೊಂಡು ಅಡ್ಡಾಡಿದ್ರೆ ಅಟ್ಟಾಡಿಸಿ ಹೊಡಿಯುತ್ತೇವೆ ಎಂದು ಧಮ್ಕಿ ಹಾಕಿದ್ದ ಶುಭಂ,ಬೆಳಗಾವಿ ಗಡಿಯಲ್ಲಿ ಭಾಷಾ ವೈಷಮ್ಯ ಬಿತ್ತಿ, ಶಾಂತಿ ಕದಡಸಿ , ಮುಗ್ಧ ಮರಾಠಿಗರನ್ನ ಪ್ರಚೋದಿಸುವ ಶುಭಂ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು,ಶುಭಂ ಅವರನ್ನು ಗಡಿಪಾರು ಮಾಡುವಂತೆ ಆಗ್ರಹಿಸಿ ಕಮಿಷನರ್ ಕಚೇರಿಯಲ್ಲಿ ಕರವೇ ಕಾರ್ಯಕರ್ತರು ಶುಭಂ ಸಾಳುಂಕೆ ಮಾಡಿರುವ ಪ್ರಚೋದನಕಾರಿ ಹೇಳಿಕೆಯ ಸಿಡಿ ಜೊತೆಗೆ ದೂರು ನೀಡಿದ್ದಾರೆ……