ಬೆಳಗಾವಿ
ಪೊಲೀಸ್ ಕಾನ್ಸ್‌ಟೇಬಲ್ ಪರಿಕ್ಷಣಾರ್ಥಿಗಳ ನಿರ್ಗಮನ ಪಂಥ ಸಂಚಲನ ಬೆಳಗಾವಿಯಲ್ಲಿ ನಡೆಯಿತು ಗೃಹ ಸಚಿವ ರಾಮಲಿಂಗಾ ರಡ್ಡಿ ನಿರ್ಗಮನ ಪಥ ಸಂಚಲನದಲ್ಲಿ ಬಾಗಿಯಾದ್ರು
೧೨ ಪರಿಕ್ಷಣಾರ್ಥಿಗಳ ತಂಡದಿಂದ ಗೌರವ ವಂದನೆ ಸ್ವೀಕಾರ ಮಾಡಿದ್ರು
ಬೆಳಗಾವಿ ಕೆ ಎಸ್ ಆರ್ ಪಿ ಪೊಲೀಸ್ ಮೈದಾನದಲ್ಲಿ ಪಥಸಂಚಲನ ಕಾರ್ಯಕ್ರಮ ನಡೆಯಿತು ಆರಕ್ಷಕ ಮಹಾ ನಿರಕ್ಷಕರಾದ ನಿಲಮಣಿ ಎನ್ ರಾಜು ಕಾರ್ಯಕ್ರಮ ದಲ್ಲಿ ಭಾಗಿಯಾಗಿದ್ದರು
ಕಾರ್ಯಕ್ರಮದ ಬಳಿಕ ಮಾದ್ಯಮಗಳ ಜೊತೆ ಮಾತನಾಡಿದ ಗೃಹ ಸಚಿವ ರಾಮಲಿಂಗಾರೆಡ್ಡಿ ನಾಲ್ಕುವರೆ ವರ್ಷದಲ್ಲಿ 28 ಸಾವಿರ ಪೊಲೀಸ್ ಸಿಬ್ಬಂದಿ ಭರ್ತಿ ಮಾಡಲಾಗಿದೆ. ಒಂದು ಲಕ್ಷಕಿಂತಲೂ ಹೆಚ್ಚು ಪೊಲೀಸ್ ಸಿಬ್ಬಂದಿ ಕಾರ್ಯ ನುರ್ವಹಿಸುತ್ತಿದ್ದಾರೆ ದೇಶದಲ್ಲಿ ಉತ್ತಮ ಪೊಲೀಸ್ ವ್ಯವಸ್ಥೆ ಇದ್ದು ಕರ್ನಾಟಕದ ಪೋಲೀಸ್ ದೇಶದಲ್ಲಿಯೇ ನಂಬರ್ ಒನ್ ಅಂತ ಗೃಹ ಸಚಿವರು ಹೇಳಿದರು
ನಾವು ಸಾಕಷ್ಟು ಪೊಲೀಸ್ ಇಲಾಖೆ ವ್ಯವಸ್ಥೆಯನ್ನ ಸುಧಾರಿಸುತ್ತಿದ್ದೇವೆ. ನಾಲ್ಕುವರೆ ವರ್ಷದಲ್ಲಿ ವಸತಿ ವ್ಯವಸ್ಥೆ ಕಲ್ಪಿಸಲು ಆದ್ಯತೆ ನೀಡಿದ್ದೇವೆ ನಮ್ಮ ಸರ್ಕಾರ 11 ಸಾವಿರ ಮನೆಗಳನ್ನು ನಿರ್ಮಿಸುವ ಗುರಿ ಹೊಂದಿತ್ತು ಅದರಲ್ಲಿ ಎರಡು ಸಾವಿರ ಮನೆಗಳು ನಿರ್ಮಾಣ ಮಾಡಲಾಗಿದೆ ಇನ್ನೆರಡು ಸಾವಿರ ಮನೆಗಳ ಕಾಮಗಾರಿ ಮುಗಿಯುವ ಹಂತದಲ್ಲಿದೆ ಎಂದು ಹೇಳಿದ ಗೇಹ ಸಚಿವರು ಪೊಲೀಸ್ ಇಲಾಖೆ ಬಬಲಪಡಿಸುವ ಕೆಲಸ ಮಾಡಲಾಗುತ್ತಿದೆ ಎಂದರು
ರಾಜ್ಯದಲ್ಲಿ ಕಾನೂನು ಸುವ್ಯೆವಸ್ಥೆ ಚನ್ನಾಗಿದೆ ಬಿಜೆಪಿ ನಾಯಕರು ಮತ ಬ್ಯಾಂಕ್ ಗಾಗಿ ಹುಣಸೂರು ಮತ್ತು ಚಿಕ್ಕಮಂಗಳೂರಿನ ಬಾಬಾ ಬುಡನ್ ಗಿರಿಯ ವಿಷಯವನ್ನು ಮುಂದಿಟ್ಟುಕೊಂಡು ರಾಜಕಾರಣ ಮಾಡುತ್ತಿದ್ದಾರೆ ಎಂದು ಆರೋಪಿಸಿದ ಗೃಹ ಸಚಿವ ರಾಮಲಿಂಗಾರೆಡ್ಡಿ ಇದು ಪ್ರಜಾ ಪ್ರಭುತ್ವ ವ್ಯೆವಸ್ಥೆ ಇಲ್ಲಿ ಯಾರ ಬೇಕಾದರೂ ಎಲ್ಲಿಯಾದರೂ ಬರಬಹುದು ಆದರೆ ಅವರ ನಡೆ ಮತ್ತು ನುಡಿ ಸಮಾಜದ ಶಾಂತಿ ಕದಡಬಾರದು ಜವಾಬ್ದಾರಿ ಸ್ಥಾನದಲ್ಲಿ ಇರುವರು ಎಚ್ಚರಿಕೆಯಿಂದ ಮಾತಾಡಬೇಕು ಎಂದು ಗೃಹ ಸಚೀವರು ಅಮೀತ ಷಾ ಭೇಟಿ ಕುರಿತು ಈ ರೀತಿ ಪ್ರತಿಕ್ರಿಯೆ ನೀಡಿದರು
ಹುಣಸೂರಿನಲ್ಲಿ ಜಿಲ್ಲಾಡಳಿತ ಸೂಚಿಸಿದ ಮಾರ್ಗಬಿಟ್ಟು ಪ್ರತಾಪಸಿಂಹ ತೆರಳಿದ್ದರಿಂದ ಅಲ್ಲಿಯ ಎಸ್ಪಿ ಕಾನೂನು ಸುವ್ಯೆವಸ್ಥೆ ಕಾಪಾಡುವ ನಿಟ್ಟಿನಲ್ಲಿ ಸೂಕ್ತ ಕ್ರಮ ಕೈಗೊಂಡಿದ್ದಾರೆ ಕಾನೂನಿಗಿಂತ ಯಾರೂ ದೊಡ್ಡವರಲ್ಲ ಕಾನೂನಿನ ಉಲ್ಲಂಘನೆ ಯಾರೇ ಮಾಡಿದರೂ ಅವರ ವಿರುದ್ಧ ಶಿಸ್ತಿನ ಕ್ರಮ ಕೈಗೊಳ್ಳುತ್ತೇವೆ ಎಂದು ಗೃಹ ಸಚಿವರು ಎಚ್ಚರಿಕೆ ನೀಡಿದ್ರು
ಬೆಳಗಾವಿ ಪೋಲೀಸ್ ಆಯುಕ್ತರ ತೆರವಾದ ಸ್ಥಾನ ತುಂಬೋದು ಯಾವಾಗ ಎಂದು ಮಾದ್ಯಮ ಪ್ರತಿನಿಧಿಗಳು ಪ್ರಶ್ನಿಸಿದಾಗ ರಾಜ್ಯದಲ್ಲಿ ಕೆಲವು ಹಿರಿಯ ಅಧಿಕಾರಿಗಳು ಮುಂದಿನ ತಿಂಗಳಲ್ಲಿ ಬಡ್ತಿ ಹೊಂದಲಿದ್ದಾರೆ ಬಡ್ತಿ ಪ್ರಕ್ರಿಯೆ ಮುಗಿದ ಬಳಿಕ ಹೊಸ ಪೋಲೀಸ್ ಆಯುಕ್ರರನ್ನು ನೇಮಿಸ್ತೀವಿ ಎಂದು ಹೇಳಿದ ಗೃಹ ಸಚಿವರು ಬೆಳಗಾವಿಯಲ್ಲಿ ಪೋಲೀಸ್ ಆಯುಕ್ತರ ಕಚೇರಿ ನಿರ್ಮಾಣಕ್ಕಾಗಿ ಎರಡು ಜಾಗೆಗಳನ್ನು ಗುರುತಿಸಲಾಗಿದೆ ಕಚೇರಿ ನಿರ್ಮಾಣಕ್ಕೆ ಅಗತ್ಯ ಅನುದಾನವನ್ನು ತೆಗೆದಿರಿಸಲಾಗಿದೆ. ಶೀಘ್ರದಲ್ಲಿಯೇ ಜಾಗೆಯನ್ನು ಅಂತಿಮ ಗೊಳಿಸಿ ಕಾಮಗಾರಿ ಆರಂಭಿಸಲಾಗುವದು ಎಂದು ಗೃಹ ಸಚಿವರು ಭರವಸೆ ನೀಡಿದ್ರು