Breaking News
Home / Breaking News / ಬೆಳಗಾವಿಯಲ್ಲಿ ಸುಡಗಾಡ ಸಂತೆ..ಅಲ್ಲೇ ಊಟ..ಅಲ್ಲೇ ಜಾಗೃತಿಯ ಪಾಠ

ಬೆಳಗಾವಿಯಲ್ಲಿ ಸುಡಗಾಡ ಸಂತೆ..ಅಲ್ಲೇ ಊಟ..ಅಲ್ಲೇ ಜಾಗೃತಿಯ ಪಾಠ

December 6, 2017 Breaking News, LOCAL NEWS Leave a comment 2,628 Views

ಬೆಳಗಾವಿ- ಪ್ರತಿ ವರ್ಷದಂತೆ ಈ ವರ್ಷವೂ ಬೆಳಗಾವಿಯ ಸದಾಶಿವ ನಗರದ ಸ್ಮಶಾನದಲ್ಲಿ ಡಾ ಬಾಬಾ ಸಾಹೇಬ ಪರಿನಿರ್ವಾಣ ದಿನವನ್ನು ಮೌಡ್ಯ ವಿರೋಧಿ ಸಂಕಲ್ಪದ ದಿನವನ್ನಾಗಿ ಆಚರಿಸಲಾಯಿತು

ಮಾಜಿ ಸಚಿವ ಸತೀಶ ಜಾರಕಿಹೊಳಿ ಅವರ ಮಾನವ ಬಂಧುತ್ವ ವೇದಿಕೆ ಪ್ರತಿ ವರ್ಷ ಡಾ ಬಾಬಾಸಾಹೇಬ್ ಅಂಬೇಡ್ಕರ್ ಅವರ ಮಹಾ ಪರಿನಿರ್ವಾಣ ದಿನದಂದು ಬೆಳಗಾವಿಯ ಸ್ಮಶಾನದಲ್ಲಿ ಮೌಡ್ಯದ ವಿರುದ್ಧ ಸೆಡ್ಡು ಹೊಡೆದು ಸ್ಮಶಾನದಲ್ಲೇ ಊಟ ಮಾಡಿ ಸ್ಮಶಾನದಲ್ಲೇ ಮೌಡ್ಯದ ವಿರುದ್ಧ ಬುದ್ದಿಜೀವಿಗಳಿಂದ ಜಾಗೃತಿ ಮೂಡಿಸಿ ಸ್ಮಶಾನದಲ್ಲೇ ವಾಸ್ತವ್ಯ ಮಾಡುವ ಮೂಲಕ ಮೂಡನಂಬಿಕೆಗೆ ಸವಾಲ್ ಹಾಕುತ್ತಾ ಬಂದಿದ್ದು ಈ ವರ್ಷವೂ ಈ ಕಾರ್ಯಕ್ರಮ ನಡೆಯಿತು

ಮೌಡ್ಯದ ವಿರುದ್ಧ ನಡೆದ ಈ ಕಾರ್ಯಕ್ರಮದಲ್ಲಿ ಚಿತ್ರನಟ ಪ್ರಕಾಶ ರೈ ಅನೇಕ ಬುದ್ಧಿಜೀವಿಗಳು ಮಠಾಧಿಶರು ಮತ್ತು ಪ್ರಗತಿ ಪರ ಚಿಂತಕರು ಭಾಗವಹಿಸಿ ಸಮಾಜದಿಂದ ಮೌಡ್ಯವನ್ನು ಕುತ್ತೇಸೆಯುವ ಸಂಕಲ್ಪ ಮಾಡಿದರು

ಬೆಳಗಾವಿಯ ಸದಾಶಿವ ನಗರದ ಸ್ಮಶಾನದಲ್ಲಿ ಒಂದು ಕಡೆ ಮೌಡ್ಯದ ವಿರುದ್ಧ ಜಾಗೃತಿ ಮೂಡಿಸುವ ಕಾರ್ಯಕ್ರಮ ನಡೆದರೆ ಇನ್ನೊಂದು ಕಡೆ ಸ್ಮಶಾನದಲ್ಲಿ ಅಂತ್ಯಕ್ರಿಯೆಗಳು ನಡೆದವು ಸ್ಮಶಾನದಲ್ಲೇ ಊಟ ಮಾಡಿ ಜನ ಮೌಡ್ಯ ನಮಗೆ ಬೇಕಾಗಿಲ್ಲ ಮೂಡನಂಬಿಕೆಗೆ ನಾವು ಜೋತು ಬಿಡೋದಿಲ್ಲ ಎಂದು ಸಾಭೀತು ಪಡಿಸಿದರು

ರಾಜ್ಯದ ವಿವಿಧ ಜಿಲ್ಲೆಗಳಿಂದ ಮಾನವ ಬಂಧುತ್ವ ವೇದಿಕೆಯ ನೂರಾರು ಜನ ಕಾರ್ಯಕರ್ತರು ಮೌಡ್ಯ ವಿರೋಧಿ ಸಂಕಲ್ಪ ದಿನದ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು

ಮೌಡ್ಯ ವಿರೋಧಿ ಸಂಕಲ್ಪ ದಿನವನ್ನು ಉದ್ಘಾಟಿಸಿ ಮಾತನಾಡಿದ ಬಹು ಭಾಷಾ ನಟ ಪ್ರಕಾಶ ರೈನನಗೆ ಜಾತಿಯಿಲ್ಲ ನನಧರ್ಮವಿಲ್ಲ.
ನಮ್ಮವ್ವ ಗದಗಿನಕಿ ನನ್ನ ತಾಯಿ ಅನಾಥೆ. ನನ್ನ ತಾಯಿ ಬೆಳಗಾವಿಯಲ್ಲಿ ಓದಿ ಬೆಂಗಳೂರಿಗೆ ಬಂದ್ಲು ನನ್ನ ತಾಯಿ ಕಷ್ಟ ನೋಡಿದ್ದಾಳೆ. ಪ್ರತಿಯೊಬ್ಬ ಗಂಡಸಿನೊಳಗೊ ತಾಯಿತನ ಇರಬೇಕು‌ ಎಂದು ಪ್ರಕಾಶ ರೈ ಹೇಳಿದರು
ಮೌಡ್ಯದ ವಿರುದ್ಧ  ಬಸವಣ್ಣನವರ ಕಾಲದಿಂದ ಜಾಗೃತಿ ನಡೆತುತ್ತಿದೆ ಅದು ಬೆಳೆಯಬೇಕಿತ್ತು.
ಆದ್ರೆ ಹಿಂದೆ ಬಂದಿದ್ದೇವೆ.ನಮ್ಮವರೆಲ್ಲ ಮುಗ್ಧತೆಯಲ್ಲಿ ಮೌಡ್ಯ ಬೆಳೆಯುತ್ತದೆ. ಹೊಸ ಮೂಡನಂಬಿಕೆ ದೇಶದಲ್ಲಿ ತರುತ್ತಿದ್ದಾರೆ ಎಂದು ಪ್ರಕಾಶ ರೈ ಕಳವಳ ವ್ಯೆಕ್ತಪಡಿಸಿದರು

ರಾಷ್ಟ್ರೀಯತೆ ಮತ್ತು ಹಿಂದುತ್ವ ಎರಡು ಒಂದೆ ಅಂತಿದ್ದಾನೆ. ಕೇಂದ್ರ ಸಚಿವ ಉಡಪಿಯಲ್ಲಿ ನಿಂತು ಹೇಳ್ತಾರೆ. ಇವೆರಡನ್ನ ಧಮನಿಸಬೇಕಾಗಿದೆ‌. ಅದಕ್ಕೆ ಅವರು ನನ್ನ ಹೆದರಿಸುತ್ತಿದ್ದಾರೆ.. ಆದ್ರೆ ಇಂತವುದಕ್ಕೆಲ್ಲ ನಾನು ಹೆದರುವುದುಲ್ಲ..ಅವರು ಕಳ್ಳರು, ಪುಕ್ಕಲರು, ಹೇಡಿಗಳು ಅದಕ್ಕೆ ಹೆದರಿಸುತ್ತಿದ್ದಾರೆ ಎಂದು ಪ್ರಕಾಶ ರೈ ಕೇಂದ್ರ ಸಚಿವ ಅನಂತಕುಮಾರ್ ಹೆಗಡೆ ಅವರ ಹೆಸರು ಹೇಳದೇ ಅವರ ವಿರುದ್ಧ ವಾಗ್ದಾಳಿ ನಡೆಸಿದರು

ನನ್ನ ವ್ಯಂಗ್ಯದ ಹಿಂದೆ, ಆತಂಕದ ಹಿಂದೆ ದೊಡ್ಡ ನೋವಿದೆ. ಇದಕ್ಕೆ ನಾವು ಹೆದರುವುದು ಬೇಡಾ ಎಂದು ಪ್ರಕಾಶ ರೈ ಹೇಳಿದರು

 

About BGAdmin

Check Also

ವಿಟಿಯು ಅವ್ಯೆವಹಾರ..ಪ್ರೋಫೆಸರ್ ಯೋಗಾನಂದ ಅರೆಸ್ಟ್

ಬೆಳಗಾವಿ: ಇಲ್ಲಿನ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವ ವಿದ್ಯಾಲಯದಲ್ಲಿ (ವಿಟಿಯು)ಲ್ಯಾಬ್ ಸಾಧನ ಖರೀದಿಯಲ್ಲಿ ನಡೆದಿದೆ ಎನ್ನಲಾದ ಅವ್ಯವಹಾರಕ್ಕೆ ಸಂಬಂಧಿಸಿದಂತೆ ವಿವಿ ಉಪನ್ಯಾಸಕ …

Leave a Reply

Your email address will not be published. Required fields are marked *