ಬೆಳಗಾವಿ ಜಿಲ್ಲೆಯಲ್ಲಿ ಅನಂತಕುಮಾರ್ ಹೆಗಡೆ ಜಾದೂ…‌!!!!

ಬೆಳಗಾವಿ- ಬೆಳಗಾವಿ ಜಿಲ್ಲೆಯಲ್ಲಿ ಜಿಲ್ಲಾ ಮಂತ್ರಿ ರಮೇಶ್ ಜಾರಕಿಹೊಳಿ ಡಜನ್ ಶಾಸಕರನ್ನು ಗೆಲ್ಲಿಸುವ ಹಿಡನ್ ಅಜೆಂಡಾದೊಂದಿಗೆ ಜಿಲ್ಲೆಯಲ್ಲಿ ಓಡಾಡುತ್ತಿದ್ದರೆ ಕೇಂದ್ರ ಸಚಿವ ಅನಂತಕುಮಾರ್ ಹೆಗಡೆ ಸದ್ದಿಲ್ಲದೇ ಬೆಳಗಾವಿ ಜಿಲ್ಲೆಯಲ್ಲಿ ತಮ್ಮದೇ ಆದ ಚಾನಾಕ್ಷ ನೀತಿಯನ್ನು ಅನುಸರಿಸಿ ಜಿಲ್ಲೆಯಲ್ಲಿ ಬಿಜೆಪಿ ಸಾಮ್ರಾಜ್ಯ ಸ್ಥಾಪನೆಗೆ ತಯಾರಿ ನಡೆಸಿದ್ದಾರೆ

ಬೆಳಗಾವಿ ಜಿಲ್ಲೆಯ ಹದಿನೆಂಟು ವಿಧಾನಸಭಾ ಕ್ಷೇತ್ರಗಳಲ್ಲಿ ಹಿಂದುತ್ವದ ಪರವಾಗಿರುವ ಹಿಂದುತ್ವವನ್ನು ಪ್ರತಿಪಾದಿಸುವ ಗೆಲ್ಲುವ ಕುದುರೆಗಳ ಹುಡುಕಾಟಕ್ಕೆ ಬೆಳಗಾವಿ ಜಿಲ್ಲೆಯಲ್ಲಿ ಸದ್ದಿಲ್ಲದೇ ಸಮೀಕ್ಷೆ ಆರಂಭಿಸಿ ಗೆಲ್ಲುವ ಕುದುರೆಗಳಿಗೆ ಗಾಳ ಹಾಕುವ ಕಸರತ್ತು ನಡೆಸಿದ್ದಾರೆ
ಬಿಜೆಪಿ ಸಾರಥಿ ಅಮೀತ ಷಾ ಸೂಚನೆ ಮೇರೆಗೆ ಕರ್ನಾಟಕ ಬಿಜೆಪಿ ಯಡಿಯೂರಪ್ಪ ಬಣ,ಈಶ್ವರಪ್ಪ ಬಣ, ಅನಂತಕುಮಾರ ಬಣ,ಬಾಲಚಂದ್ರ ಬಣ,ಎಲ್ಲ ಬಣಗಳನ್ನು ಬದಿಗೊತ್ತಿ ಕೇವಲ ಹಿಂದುತ್ವದ ಮಂತ್ರ ಜಪಿಸುವ ಅಭ್ಯರ್ಥಿಗಳನ್ನು ಹುಡುಕಾಟ ಶುರು ಮಾಡಿದ್ದಾರೆ
ಕಿತ್ತೂರ ಮತ್ತು ಖಾನಾಪೂರ ಕ್ಷೇತ್ರದ ಜನರೊಂದಿಗೆ ಎರಡು ದಶಕಗಳಿಂದ ಒಡನಾಟ ಹೊಂದಿರುವ ಕೇಂದ್ರ ಸಚಿವ ಅನಂತಕುಮಾರ ಹೆಗಡೆ ಕಿತ್ತೂರ ಕ್ಷೇತ್ರದಲ್ಲಿ ಸಂಘಟನೆ ಮಾಡಿ ತಮ್ಮದೇ ಆದ ಸಾಮ್ರಾಜ್ಯ ಕಟ್ಟಿಕೊಂಡಿರುವ ಶಾಸಕ ಡಿಬಿ ಇನಾಮದಾರ ಅವರ ಹತ್ತಿರದ ಸಮಂಧಿ ಬಾಬಾಸಾಹೇಬ್ ಇನಾಮದಾರ ಅವರನ್ನು ದೂರವಾಣಿ ಮೂಲಕ ಸಂಪರ್ಕಿಸಿ ಸಮಾಲೋಚನೆ ನಡೆಸಿ ಬಿಜೆಪಿ ಸೇರುವಂತೆ ಅಹ್ವಾನ ನೀಡಿದ್ದಾರೆ ಎಂಬ ಸುದ್ಧಿ ಈಗ ಗೌಪ್ಯವಾಗಿ ಉಳಿದಿಲ್ಲ
ಖಾನಾಪೂರ ಕ್ಷೇತ್ರದಲ್ಲಿಯೂ ಹಿಂದುತ್ವವನ್ನು ಪ್ರತಿಪಾದಿಸುವ ಸ್ಟ್ರಾಂಗ್ ಅಭ್ಯರ್ಥಿಯನ್ನು ಅನಂತಕುಮಾರ್ ಹೆಗಡೆ ಫೈನಲ್ ಮಾಡಿದ್ದಾರೆ ಎಂದು ಹೆಳಲಾಗುತ್ತಿದ್ದು ಈ ಬಾರಿ ಪ್ರಲ್ಹಾದ ರೇಮಾಣಿಗೆ ಅನಂತಕುಮಾರ್ ಹೆಗಡೆ ಶಾಕ್ ನಿಡೋದು ಗ್ಯಾರಂಟಿ ಎಂದು ಖಾನಶಪೂರದ ಬಿಜೆಪಿ ನಾಯಕರೇ ಹೇಳಿಕೊಳ್ಳುತ್ತಿದ್ದಾರೆ

ಬೈಲಹೊಂಗಲದ ಮಾಜಿ ಶಾಸಕ ಜಗದೀಶ ಮೆಟಗುಡ್ ಜೊತೆ ಸಂಪರ್ಕದಲ್ಲಿರುವ ಅನಂತಕುಮಾರ್ ಹೆಗಡೆ ತುರಾತುರಿಯ ನಿರ್ಧಾರ ಕೈಗೊಳ್ಳದೇ ಬಿಜೆಪಿಯಲ್ಲೇ ಉಳಿಯುವಂತೆ ಸೂಚನೆ ನೀಡಿದ್ದಾರೆ ಎಂದು ಹೇಳಲಾಗುತ್ತಿದೆ ಜೊತೆಗೆ ಬೆಳಗಾವಿ ಉತ್ತರ ಕ್ಷೇತ್ರ ದಲ್ಲಿ ಶ್ರೀರಾಮ ಸೇನೆಯ ಜಿಲ್ಲಾ ಪ್ರಮುಖ ರಾಮಾಕಾಂತ ಕುಂಡಸ್ಕರ್ ಬೆಳಗಾವಿ ಉತ್ತರದಲ್ಲಿ ಸಂಚಲನ ಮೂಡಿಸಿ ಶ್ರೀರಾಮ ಸೇನೆವಚನ ಪಡೆಯನ್ನು ಬಲಿಷ್ಠಗೊಳಿಸಿ ಉತ್ತರದಲ್ಲಿ ಅನೇಕ ಸಾಮಾಜಿಕ ಕಾರ್ಯಕ್ರಮಗಳನ್ನು ಆಯೋಜಿಸುತ್ತಿದ್ದು ಬಿಜೆಪಿಯ ಇತರ ಆಕಾಂಕ್ಷಿಗಳಿಗೆ ಕುಂಡಸ್ಕರ್ ಓಡಾಟ ನಡುಕ ಹುಟ್ಟಿಸಿದೆ

ಅನಂತಕುಮಾರ ಹೆಗಡೆ ಸದ್ದಿಲ್ಲದೇ ಬೆಳಗಾವಿ ಜಿಲ್ಲೆಯಲ್ಲಿ ಚುನಾವಣೆಯ ತಯಾರಿ ನಡೆಸಿದ್ದು ಜಿಲ್ಲೆಯ ಬಿಜೆಪಿ ಆಕಾಂಕ್ಷಿಗಳಿಗೆ ಒಂದೇ ಒಂದು ಪ್ರಶ್ನೆ ಕಾಡುತ್ತಿದೆ ಈ ಬಾರಿಯ ಚುನಾವಣೆಯಲ್ಲಿ ಬಿಜೆಪಿ ಬಿ ಫಾರ್ಮ ಯಾರು ಕೊಡಬಹುದು ಬಿ ಫಾರ್ಮಗಾಗಿ ಯಾರ ಕೈ ಮುಗಿಯಬೇಕು ಯಾರ ಬೆನ್ನ ಹತ್ತಬೇಕು? ಟಿಕೆಟ್ ಗಾಗಿ ಎಲ್ಲಿ ಲಾಭಿ ಮಾಡಬೇಕೋ ಅನ್ನೋದು ಬಿಜೆಪಿ ಆಕಾಂಕ್ಷಿಗಳಿಗೆ ಕನ್ ಫ್ಯುಸ್ ಆಗಿ ಬಿಟ್ಟಿದೆ

ಬೆಳಗಾವಿ ಜಿಲ್ಲೆಯ ಬಿಜೆಪಿ ಟಿಕೆಟ್ ಆಕಾಂಕ್ಷಿಗಳು ಕೇಳುತ್ತಿರುವ ಪ್ರಶ್ನೆ ಒಂದೇ.ಯಡಿಯೂರಪ್ಪ ಟಿಕೆಟ್ ಕೊಡ್ತಾರಾ? ಅಮೀತ ಷಾ ಕೊಡ್ತಾರಾ? ಸಮೀಕ್ಷೆ ಮಾಡ್ತಾರಾ ? ಟಿಕೆಟ್ ತಮಗೆ ಸಿಗಬೇಕಾದ್ರೆ ಏನು ಮಾಡಬೇಕು ಎನ್ನುವ ಪ್ರಶ್ನೆ ಬಿಜೆಪಿ ಟಿಕೆಟ್ ಆಕಾಂಕ್ಷಿಗಳಿಗೆ ಯಕ್ಷ ಪ್ರಶ್ನೆಯಾಗಿದೆ

ಹಿಂದುತ್ವದ ಪರವಾಗಿರುವ ಅಭ್ಯರ್ಥಿಗಳಿಗೆ ಮಾತ್ರ ಟಿಕೆಟ್ ಕೊಡ್ತಾರೆ ಎನ್ನುವ ವಿಷಯ ಆಕಾಂಕ್ಷಿಗಳಿಗೆ ಸ್ವಲ್ಪ ಮಟ್ಟಿಗೆ ಮನವರಿಕೆ ಆದಂತೆ ಕಾಣುತ್ತಿದೆ ಹೀಗಾಗಿ ಜಿಲ್ಲೆಯಲ್ಲಿ ಕೆಲವು ಬಿಜೆಪಿ ನಾಯಕರು ಹಿಂದುತ್ವದ ಮಂತ್ರವನ್ನು ಜಪಿಸಲು ಆರಂಭಿಸಿದ್ದಾರೆ ಸಾಮಾಜಿಕ ಜಾಲತಾಣಗಳಲ್ಲಿ ಹಿಂದುತ್ವದ ಪರವಾಗಿ ಕಾಮೆಂಟ್ ಮಾಡಲು ಶುರು ಮಾಡಿದ್ದಾರೆ

ಬೆಳಗಾವಿ ಜಿಲ್ಲೆಯಲ್ಲಿ ಯಡಿಯೂರಪ್ಪ ಟಿಕೆಟ್ ಕೊಡ್ತಾರೆ ಎಂದು ನಂಬಿದ ಟಿಕೆಟ್ ಆಕಾಂಕ್ಷಿಗಳ ದೊಡ್ಡ ಪಟ್ಟಿಯೇ ಇದೆ ಅವರೆಲ್ಲರಿಗೂ ಇತ್ತಿಚಿನ ಬಿಜೆಪಿ ಬೆಳವಣಿಗೆ ಕಂಡು ಶಾಕ್ ಆಗಿದೆ ಅಮೀತ ಷಾ ನೇರವಾಗಿ ಟಿಕೆಟ್ ಹಂಚಿದ್ರೆ ನಾವೇನು ಮಾಡ್ಹೋದು ಎನ್ನುವ ಚಿಂತೆ ಯಡಿಯೂರಪ್ಪ ಬೆಂಬಲಿಗರಿಗೆ ಕಾಡುತ್ತಿದೆ

ಕೇಂದ್ರ ಸಚಿವರನ್ನು ಆಯ್ಕೆ ಮಾಡುವಾಗ ಬಿಜೆಪಿ ಹೈಕಮಾಂಡ್ ಯಡಿಯೂರಪ್ಪ ಅವರ ಶಿಫಾರಸ್ಸಿಗೆ ಮನ್ನಣೆ ಕೊಡಲಿಲ್ಲ ಸುರೇಶ ಅಂಗಡಿ ಮಂತ್ರಿ ಆಗಲಿಲ್ಲ ಇದೇ ಪರಿಸ್ಥಿತಿ ಟಿಕೆಟ್ ಹಂಚುವಾಗ ಎದುರಾದರೆ ನಮ್ಮ ಗತಿ ಏನು ಅನ್ನೋದು ವಿವಿಧ ಬಣಗಳಲ್ಲಿ ಗುರುತಿಸಿಕೊಂಡವರ ಟಿಕೆಟ್ ಆಕಾಂಕ್ಷಿಗಳ ಚಿಂತೆಯಾಗಿದೆ

ಕೇಂದ್ರ ಸಚಿವ ಅನಂತಕುಮಾರ್ ಹೆಗಡೆ ಬೆಳಗಾವಿ ಸೇರಿದಂತೆ ಉತ್ತರ ಕರ್ನಾಟಕದ ಜಿಲ್ಲೆಗಳಲ್ಲಿ ಸಂಚಲನ ಮೂಡಿಸಿದ್ದು ಸದ್ದಿಲ್ಲದೇ ಕೇಸರಿ ಸಾಮ್ರಾಜ್ಯ ಸ್ಥಾಪನೆಗೆ ಜೋರ್ ದಾರ್ ತಯಾರಿ ನಡೆಸಿದ್ದಾರೆ

Check Also

ಗಣೇಶ್ ಪ್ರತಿಷ್ಠಾಪನೆ ಮಾಡಿದ ಬೆಳಗಾವಿ ಡಿಸಿ ಮಹ್ಮದ್ ರೋಷನ್…..!

ಬೆಳಗಾವಿ – ತೆಲೆಯ ಮೇಲೆ ಗಾಂಧಿ ಟೊಪ್ಪಗಿ,ಹಣೆಯ ಮೇಲೆ ನಾಮ, ಕೇಸರಿ ಝುಬ್ಬಾ ಹಾಕಿಕೊಂಡು ಗಣೇಶ ಮೂರ್ತಿಗೆ ಆರತಿ ಬೆಳಗಿ …

Leave a Reply

Your email address will not be published. Required fields are marked *

Sahifa Theme License is not validated, Go to the theme options page to validate the license, You need a single license for each domain name.