ಬೆಳಗಾವಿ- ಬೆಳಗಾವಿಯಲ್ಲಿ ಡಿವೈಎಸ್ಪಿ ಯಾಗಿ ಹೆಚ್ಚುವರಿ ಜಿಲ್ಲಾ ಪೋಲೀಸ್ ವರಿಷ್ಠಾಧಿಕಾರಿಯಾಗಿ ಬೆಳಗಾವಿ ಜಿಲ್ಲೆಯಲ್ಲಿ ಕರ್ತವ್ಯ ನಿಭಾಯಿಸಿದ್ದ ಕೃಷ್ಣಭಟ್ ಅವರು ಬೆಳಗಾವಿ ಪೋಲೀಸ್ ಆಯುಕ್ತರಾಗಿ ಬೆಳಗಾವಿಯಲ್ಲಿ ಎರಡು ವರ್ಷ ಸೇವೆ ಮಾಡುವ ಮೂಲಕ ಪೋಲೀಸ್ ಸೇವೆಯಿಂದ ವಿಶ್ರಾಂತಿ ಪಡೆದು ಇಂದು ಸೇವಾ ನಿವೃತ್ತಿ ಹೊಂದಿದ್ದಾರೆ
ಸೇವಾ ನಿವೃತ್ತಿ ಹೊಂದಿದ ಪೋಲೀಸ್ ಆಯುಕ್ತ ಕೃಷ್ಣ ಭಟ್ ಅವರಿಗೆ ಇಂದು ಬೆಳಿಗ್ಗೆ ನಗರ ಪೋಲೀಸ್ ರಿಂದ ಪರೇಡ್ ನಡೆಸಿ ಗೌರವ ವಂದನೆ ಸಲ್ಲಿಸಲಾಯಿತು
ಗೌರವ ವಂದನೆ ಸ್ವೀಕರಿಸಿ ಭಾವುಕರಾದ ಕೃಷ್ಣ ಭಟ್ ಮಾತನಾಡಿ ಬೆಳಗಾವಿ ನಗರ ಶಾಂತಿಯ ನೆಲ ಈ ನೆಲದಲ್ಲಿ ನಾನು ಅನೇಕ ಹುದ್ದೆಗಳಲ್ಲಿ ಕಾರ್ಯ ನಿರ್ವಹಿಸಿದ್ದೇನೆ ಇಲ್ಲಿಯ ಜನ ಒಳ್ಳೆಯ ಜನ ಹೇಳಿದ್ದನ್ನು ಕೇಳುವ ಔಧಾರ್ಯತೆಯನ್ನು ಹೊಂದಿದವರು ಇಲ್ಲಿ ಸೇವೆ ಮಾಡುವ ಭಾಗ್ಯ ದೊರೆತಿದ್ದು ಪೂರ್ವ ಜನ್ಮದ ಪುಣ್ಯ ಎಂದು ಕೃಷ್ಣಭಟ್ ಹೇಳಿದರು
ತಮ್ಮ ಜೊತೆ ಕೆಲಸ ಮಾಡಿದ ಅನೇಕ ಜನ ಇಂದಿಗೂ ಇಲ್ಲಿ ಸೇವೆ ಮಾಡುತ್ತಿದ್ದಾರೆ ಬೆಳಗಾವಿಯ ಪೋಲೀಸ್ ಸಿಬ್ಭಂದಿ ಹಗಲು ರಾತ್ರಿ ಸೇವೆ ಮಾಡಿ ಬೆಳಗಾವಿಯಲ್ಲಿ ನಡೆದ ಎರಡು ಚಳಿಗಾಲದ ಅಧಿವೇಶನಗಳನ್ನು ಶಾಂತಿಯುತವಾಗಿ ನಡೆಯುವಂತೆ ಯಾವುದೇ ರೀತಿಯ ಅಹಿತಕರ ಘಟನೆಗಳು ನಡೆಯದಂತೆ ಶ್ರಮಿಸಿದ್ದಾರೆ ಇಲ್ಲಿ ಮಾಡಿದ ಸೇವೆಯನ್ನು ಎಂದಿಗೂ ಮರೆಯಲು ಸಾಧ್ಯವಿಲ್ಲ ಎಂದರು
ಎಲ್ಲ ಪೋಲೀಸ್ ಸಹದ್ಯೋಗಿಗಳಿಗೆ ನಾನು ಹೇಳುವದಷ್ಟೆ ಪಿರ್ಯಾದಿ ಕೊಡಲು ಠಾಣೆಗೆ ಬಂದವರನ್ನು ಗೌರವಯುತವಾಗಿ ನೋಡಿಕೊಳ್ಳಿ ಅವರ ಜೊತೆ ಪ್ರೀತಿಯಿಂದ ಮಾತನಾಡಿ ಅವರ ಸಮಸ್ಯೆಯನ್ನು ಕೇಳಿ ಅನ್ನೋದಷ್ಟೆ ನನ್ನ ಮನವಿ ಪೋಲೀಸರು ಒಮ್ಮೆ ಪಿರ್ಯಾದೆ ನೀಡುವವರ ಸ್ಥಾನದಲ್ಲಿ ನಿಂತು ಒಮ್ಮೆ ಫೀಲ್ ಮಾಡಿಕೊಳ್ಳಿ ಎಂದು ಕೃಷ್ಣಭಟ್ ಸಿಬ್ಬಂಧಿಗಳಿಗೆ ಕಿವಿಮಾತು ಹೇಳಿದರು
ಡಿಸಿಪಿ ಸೀಮಾ ಲಾಟ್ಕರ್ ಅಮರನಾಥ ರೆಡ್ಡಿ ಸೇರಿತದಂತೆ ಇತರ ಪೋಲೀಸ್ ಅಧಿಕಾರಿಗಳು ಉಪಸ್ಥಿತರಿದ್ದರು