Breaking News

ಜಾರಕಿಹೊಳಿ ಮಿಶನ್ …ಒನ್ ಡಜನ್ ಇನ್ 2018 ಇಲೆಕ್ಷನ್….!!!!

ಬೆಳಗಾವಿ- ಜಿಲ್ಲಾ ಉಸ್ತುವಾರಿ ಸಚಿವ ರಮೇಶ ಜಾರಕಿಹೊಳಿ ,2018 ರ ವಿಧಾಸಭೆ ಚುನಾವಣೆಯಲ್ಲಿ ಬೆಳಗಾವಿ ಜಿಲ್ಲೆಯ ಹದಿನೆಂಟು ವಿಧಾನಸಭಾ ಕ್ಷೇತ್ರಗಳ ಪೈಕಿ ಹನ್ನೆರಡು ವಿಧಾನಸಭಾ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳನ್ನು ಗೆಲ್ಲಿಸುವ ಸಂಕಲ್ಪ ಮಾಡಿದ್ದಾರೆ

ಜಿಲ್ಲಾ ಉಸ್ತುವಾರಿ ಸಚಿವ ರಮೇಶ ಜಾರಕಿಹೊಳಿ ಅವರ 2018 ರ ಚುನಾವಣೆ ಯಲ್ಲಿ ಶ್ಲೋಘನ್ ಒಂದೇ ಆಗಿದೆ ಮಿಶನ್..ಒನ್ ಡಜನ್ ಇನ್ 2018 ಇಲೆಕ್ಷನ್
ಅದಕ್ಕಾಗಿ ರಮೇಶ ಜಾರಕಿಹೊಳಿ ಯಾವ ಯಾವ ಕ್ಷೇತ್ರದಲ್ಲಿ ಏನೇನು ಪ್ಲ್ಯಾನ್ ಮಾಡಿಕೊಂಡಿದ್ದಾರೆ ಯಾರ್ಯಾರು ಕಾಂಗ್ರೆಸ್ ಪಕ್ಷ ಸೇರುತ್ತಾರೆ ಅನ್ನೋದು ಈಗ ಕುತುಹಲದ ಪ್ರಶ್ನೆ ಆಗಿದೆ

ಕಳೆದ ವಿಧಾಸಭೆ ಚುನಾವಣೆಯಲ್ಲಿ ಅತ್ಯಲ್ಪ ಮತಗಳಿಂದ ಪರಾಭವಗೊಂಡಿದ್ದ ಜೆಡಿಎಸ್ ಪಕ್ಷದ ಸ್ಟ್ರಾಂಗ್ ಅಭ್ಯರ್ಥಿ ಶ್ರೀಮಂತ ಪಾಟೀಲರನ್ನು ಕಾಂಗ್ರೆಸ್ ತೆಕ್ಕೆಗೆ ಸೆಳೆದುಕೊಳ್ಳುವಲ್ಲಿ ಮಂತ್ರಿ ರಮೇಶ್ ಜಾರಕಿಹೊಳಿ ಯಶಸ್ವಿಯಾಗಿದ್ದಾರೆ

ಬೈಲಹೊಂಗಲದ ಬಿಜೆಪಿಯ ಮಾಜಿ ಶಾಸಕ ಜಗದೀಶ್ ಮೆಟಗುಡ್ ಅವರನ್ನು ಕೈ ಪಾಳೆಯದಲ್ಲಿ ಸೆಳೆಯಲು ಮಂತ್ರಿ ರಮೇಶ್ ಈಗಾಗಲೇ ಬಲೆ ಬೀಸಿದ್ದು ಜಗದೀಶ ಮೆಟಗುಡ್ ಮಾತ್ರ ಬಿಜೆಪಿ ಟಿಕೆಟ್ ಸಿದಿದ್ದರೆ ಕೈ ಹಿಡಿಯೋಣ ಅನ್ನೋ ನಿರ್ಧಾರಕ್ಕೆ ಬಂದಿದ್ದು ಈಶ್ವರಪ್ಪ ಬನದಲ್ಲಿ ಗುರುತಿಸಿ ಕೊಂಡಿರುವ ಜಗದೀಶ್ ಮೆಟಗುಡ್ ಕಾದು ನೋಡುವ ತಂತ್ರವನ್ಬು ಅನುಸರಿಸುತ್ತಿದ್ದಾರೆ
ಮಂತ್ರಿ ರಮೇಶ್ ಕಿತ್ತೂರ ವಿಧಾಸಭಾ ಕ್ಷೇತ್ರದಿಂದ ಡಿ ಬಿ ಇನಾಮದಾರ ಸಮಂಧಿ ಬಾಬಾಸಾಹೇಬ್ ಪಾಟೀಲರಿಗೆ ಕಾಂಗ್ರೆಸ್ ಟಿಕೆಟ್ ಕೊಡಿಸಿ ಈ ಕ್ಷೇತ್ರವನ್ನು ಉಳಿಸಿಕೊಳ್ಳುವ ಪ್ಲ್ಯಾನ್ ಮಾಡಿದ್ದಾರೆ ಎಂಬ ವಿಷಯ ಈಗ ಕಿತ್ತೂರ ಕಟ್ಟೆಯ ಮೇಲಿನ ಮುಖ್ಯ ಚರ್ಚೆಯಾಗಿದೆ ಆದ್ರೆ ಬಾಬಾಸಾಹೇಬ್ ಪಾಟೀಲ್ ರನ್ನು ಎದುರಿಸಿ ಪುನಹ ಟಿಕೆಟ್ ಪಡೆದು ಮತ್ತೆ ಗೆದ್ದು ಬರಲು ಡಿಬಿ ಇನಾಮದಾರ ಕಿತ್ತೂರ ಕ್ಷೇತ್ರದ ಕೆರೆಗಳನ್ನು ತುಂಬಿಸಲು ಓಡಾಡುತ್ತಿರುವದು ವಿಶೇಷವಾಗಿದೆ
ಖಾನಾಪೂರ ವಿಧಾನಸಭಾ ಕ್ಷೇತ್ರದಿಂದ ಅಂಜಲಿ ನಿಂಬಾಳ್ಕರ್ ಅವರಿಗೆ ಈ ಬಾರಿ ಕಾಂಗ್ರೆಸ್ ಟಿಕೆಟ್ ಕೊಡಿಸಲು ಮಾಜಿ ಮಂತ್ರಿ ಸತೀಶ ಜಾರಕಿಹೊಳಿ ಪ್ರಯತ್ನದಲ್ಲಿದ್ದಾರೆ
ಹೀಗೆ ಕಾಂಗ್ರೆಸ್ ಗೆಲವು ಸಾಧಿಸಲು ಸಾಧ್ಯವಿರುವ ಕ್ಷೇತ್ರಗಳಲ್ಲಿ ಪ್ರಬಲ ಅಭ್ಯರ್ಥಿಗಳನ್ನು ನಿಲ್ಲಿಸಿ ಬೆಳಗಾವಿ ಜಿಲ್ಲೆಯಿಂದ ಒಟ್ಟು ಡಜನ್ ಅಭ್ಯರ್ಥಿಗಳನ್ನು ಗೆಲ್ಲಿಸೋದು ಮಂತ್ರಿ ರಮೇಶ್ ಜಾರಕಿಹೊಳಿ ಅವರ ಪ್ಲಾನ್ ಆಗಿದೆ
ಸವದತ್ತಿ ಯಲ್ಲಮ್ಮನ ಕ್ಷೇತ್ರದಲ್ಲಿ ಕಾಂಗ್ರೆಸ್ ಕಿತ್ತಾಟ ಜೋರಾಗಿದೆ ಕಾಂಗ್ರೆಸ್ ಟಿಕೆಟ್ ಪಡೆಯಲು ಪಂಚನಗೌಡ್ರು ಮತ್ತು ಚೋಪ್ರಾ ಇಬ್ಬರು ಜೋರ್ ದಾರ್ ಲಾಭಿ ನಡೆಸಿದ್ದು ಸವದತ್ತಿಯ ಗುಂಪುಗಾರಿಕೆ ಕಾಂಗ್ರೆಸ್ ನಾಯಕರಿಗೆ ತೆಲೆ ನೋವಾಗಿದ್ದು ಈ ಕ್ಷೇತ್ರದಿಂದ ಲಖನ್ ಜಾರಕಿಹೊಳಿ ಅವರನ್ನು ಕೊನೆ ಘಳಿಗೆಯಲ್ಲಿ ಕಣಕ್ಕಿಳಿಸುವದು ರಮೇಶ ಜಾರಕಿಹೊಳಿ ಅವರ ತಂತ್ರವಾಗಿದೆ ಅನ್ನೋ ವಿಷಯ ಈಗ ಗುಟ್ಟಾಗಿ ಉಳಿದಿಲ್ಲ

ಜಿಲ್ಲಾ ಮಂತ್ರಿ ರಮೇಶ ಜಾರಕಿಹೊಳಿ ಮಿಶನ್ ಒನ್ ಡಜನ್ ಯಾವ ಯಾವ ಕ್ಷೇತ್ರದಲ್ಲಿ..?
1) ಬೆಳಗಾವಿ ಉತ್ತರ
2) ಬೆಳಗಾವಿ ಗ್ರಾಮೀಣ
3) ಚಿಕ್ಕೋಡಿ ಸದಲಗಾ
4) ಬೈಲಹೊಂಗಲ
5) ಚ ಕಿತ್ತೂರು
6) ಗೋಕಾಕ್
7) ಕಾಗವಾಡ
8) ಯಮಕನಮರ್ಡಿ
9) ರಾಮದುರ್ಗ
10) ಖಾನಾಪೂರ
11) ನಿಪ್ಪಾನಿ
,೧೨) ಕುಡಚಿ

ಇವೆಲ್ಲ  ಕ್ಷೇತ್ರಗಳಲ್ಲಿ ಕಾಂಗ್ರೆಸ್ ಗೆಲ್ಲಬಹುದು ಅನ್ನೋ ಲೆಕ್ಕಾಚಾರ ಜಿಲ್ಲಾಮಂತ್ರಿ ರಮೇಶ ಜಾರಕಿಹೊಳಿ ಅವರದ್ದಾಗಿದೆ ಇವರ ಲೆಕ್ಕಾಚಾರ ಏನಾಗಬಹುದು ಅನ್ನೋದನ್ನ ಫಲಿತಾಂಶದ ವರೆಗೆ ಕಾಯಬೇಕಷ್ಟೆ

Check Also

ನಮ್ಮೂರಲ್ಲಿ ಹಂಗೇನಿಲ್ಲ,ರಸ್ತೆಯ ಮೇಲೆ ಗಿಡ ಹಚ್ತಾರೇ….!!!

ಬೆಳಗಾವಿ-ಬೆಳಗಾವಿಯಲ್ಲಿ ನಡು ರಸ್ತೆಯಲ್ಲೇ ತೆಂಗಿನಮರ,ಬಾಳೆಗಿಡ ನೆಟ್ಟು ದಿಢೀರ್ ಪ್ರತಿಭಟನೆ ನಡೆಸುವ ಮೂಲಕ ಗ್ರಾಮಸ್ಥರು ತಮ್ಮ ಆಕ್ರೋಶವನ್ಬು ಹೊರಹಾಕಿದ ಘಟನೆ ಬೆಳಗಾವಿಯಲ್ಲಿ …

Leave a Reply

Your email address will not be published. Required fields are marked *

Sahifa Theme License is not validated, Go to the theme options page to validate the license, You need a single license for each domain name.