ಬೆಳಗಾವಿಯ ಐಜಿ ಕಚೇರಿ ಎದುರು ನ್ಯಾಯಕ್ಕಾಗಿ ತಂದೆ ಮಗನ ಧರಣಿ
ಬೆಳಗಾವಿ-
ಸರ್ಕಾರಿ ಉದ್ಯೋಗ ಕೊಡಿಸುವುದಾಗಿ 31.5 ಲಕ್ಷ ರೂ. ವಂಚನೆ ಆರೋಪದ ಹಿನ್ನಲೆಯಲ್ಲಿ ನ್ಯಾಯಕ್ಕಾಗಿ ಆಗ್ರಹಿಸಿ ಬೆಳಗಾವಿ ಐಜಿಪಿ ಕಚೇರಿ ಬಳಿ ತಂದೆ, ಮಗ ಧರಣಿ ನಡೆಸಿದ್ದಾರೆ.
ನ್ಯಾಯ ಕೊಡಿಸದಿದ್ದರೆ ದಯಾಮರಣ ನೀಡುವಂತೆ ತಂದೆ ಮಗ ಆಗ್ರಹಿಸಿದ್ದು
ಪಿಎಸ್ಐ, ಸಬ್ ರಿಜಿಸ್ಟ್ರಾರ್ ಹುದ್ದೆ ಕೊಡಿಸುವುದಾಗಿ ವಂಚನೆ ಮಾಡಿದ ಆರೋಪದ ಹಿನ್ನಲೆಯಲ್ಲಿ ವಂಚಕರ ವಿರುದ್ಧ ಕ್ರಮ ಜರುಗಿಸುವಂತೆ ತಂದೆ ಮಗ ಆಗ್ರಹಿಸಿದರು
ಧಾರವಾಡ ಜಿಲ್ಲೆ ಅಳ್ನಾವರ್ ನಿವಾಸಿ ಸಂಗಪ್ಪ ರಾಚಪ್ಪ ಉಳವಿ ಸೇರಿ ಆರು ಜನರಿಂದ ವಂಚನೆ ಆರೋಪ
3 ವರ್ಷ ಹಿಂದೆ ಯಮನಪ್ಪ ಮಕ್ಕಳಿಗೆ ಸರ್ಕಾರಿ ಉದ್ಯೋಗ ಕೊಡಿಸುವುದಾಗಿ 52.5 ಲಕ್ಷ ಹಣ ಪಡೆದಿದ್ದ
ಯಮನಪ್ಪರಿಂದ ಸಂಗಪ್ಪ ಉಳವಿ 52.5ಲಕ್ಷ ರೂಪಾಯಿ ಹಣ ಪಡೆದಿದ್ದರಂತೆ
ಯಮನಪ್ಪ ಮಕ್ಕಳಾದ ಭರತೇಶ್, ಅನಿಲ್‌ಗೆ ಸರ್ಕಾರಿ ಉದ್ಯೋಗ ಕೊಡಿಸುವುದಾಗಿ ವಂಚನೆ ಮಾಡಿದ್ದು
ಯಮನಪ್ಪ ಮಕ್ಕಳಾದ ಭರತೇಶ್‌ಗೆ ಪಿಎಸ್ಐ, ಅನಿಲ್‌ಗೆ ಸಬ್‌ರಿಜಿಸ್ಟ್ರಾರ್ ಹುದ್ದೆ ಕೊಡಿಸುವುದಾಗಿ ವಂಚನೆ ಮಾಡಿದ ಆರೋಪ ಇದಾಗಿದೆ
ಒಟ್ಟು 52.5 ಲಕ್ಷ ಕೊಟ್ಟಿದ್ದು 21.5 ಲಕ್ಷ ವಾಪಸ್ ನೀಡಿದ್ದು, 31 ಲಕ್ಷ ಹಣ ನೀಡಬೇಕು
ಆದರೆ ಉಳಿದ ಹಣ ನೀಡದೆ ಸತಾಯಿಸುತ್ತಿದ್ದಾರೆ
ಆರೋಪಿಗಳ ವಿರುದ್ಧ ಸಿಇಎನ್ ಕ್ರೈಮ್ ಬ್ರ್ಯಾಂಚ್ ಬಾಗಲಕೋಟೆಯಲ್ಲಿ ಕೇಸ್ ದಾಖಲಾಗಿದೆ
ಆದರೂ ಪೊಲೀಸರು ನಿಷ್ಪಕ್ಷಪಾತವಾಗಿ ತನಿಖೆ ಕೈಗೊಳ್ಳುತ್ತಿಲ್ಲ
ಬಾಗಲಕೋಟೆಯ ಪೊಲೀಸ್ ಇಲಾಖೆ ಅಧಿಕಾರಿಗಳು ಇದರಲ್ಲಿ ಶಾಮೀಲಾಗಿದ್ದಾರೆಂದು ಧರಣಿ ನಿರತ ತಂದೆ ಮಗ ಆರೋಪ ಮಾಡಿದ್ದಾರೆ.
ಯಮನಪ್ಪ ಬಸಪ್ಪ ಧೂಪದಾಳ, ಮಗ ಭರತೇಶ್‌ರಿಂದ ಆರೋಪ ಮಾಡಲಾಗಿದೆ.