ಬೆಳಗಾವಿಯಲ್ಲಿ ಅನವಶ್ಯಕವಾಗಿ ಸುತ್ತಾಡುವವರ ವಾಹನ ಸೀಜ್, ಜೊತೆಗೆ ಕ್ರಿಮಿನಲ್ ಕೇಸ್. ಹುಷಾರ್…..!!!

 

ಬೆಳಗಾವಿ-  ,ಬೆಳಗಾವಿ ನಗರವನ್ನು ಸಂಪೂರ್ಣವಾಗಿ ಲಾಕ್ ಡೌನ್ ಮಾಡಲಾಗಿದ್ದು,ನಗರದಲ್ಲಿ ಅನಗತ್ಯವಾಗಿ ಸುತ್ತಾಡುವ ಕಿಡಗೇಡಿಗಳ ವಾಹನಗಳನ್ನು ಸೀಜ್ ಮಾಡಿ ಅವರ ವಿರುದ್ಧ ಕ್ರಿಮಿನಲ್ ಕೇಸ್ ದಾಖಲು ಮಾಡಲಾಗುವದು ಎಂದು ನಗರ ಪೋಲೀಸ್ ಆಯುಕ್ತ ,ಬಿ.ಲೋಕೇಶ್ ಕುಮಾರ್ ಎಚ್ಚರಿಕೆ ನೀಡಿದ್ದಾರೆ.

ಬೆಳಗಾವಿಯ ಎಪಿಎಂಸಿ ಮಾರುಕಟ್ಟೆ ಕಚೇರಿಯಲ್ಲಿ ನಡೆದ ಜಿಲ್ಲಾಡಳಿತದ ಸಭೆಯ ಬಳಿಕ ಮಾದ್ಯಮಗಳ ಜೊತೆ ಮಾತನಾಡಿದ ಅವರು,ಬೆಳಗಾವಿ ನಗರ ನಿವಾಸಿಗಳು ಯಾರೂ ಮನೆಯಿಂದ ಹೊರಗೆ ಬರಬೇಡಿ,ಯಾರ ಮೇಲೂ ಬಲ ಪ್ರಯೋಗ ಮಾಡುವ ಇಚ್ಛೆ ನಮಗಿಲ್ಲ,ಎಲ್ಲ ಬಡಾವಣೆಗಳಲ್ಲಿ ,ತರಕಾರಿ,ಮತ್ತು ದಿನಸಿ ಸಾಮುಗ್ರಿಗಳನ್ನು ಮುಟ್ಟಿಸುವ,ವ್ಯೆವಸ್ಥೆ ಮಾಡಿದ್ದೇವೆ.ವಾಹನಗಳಲ್ಲಿ ಮೈಕ್ ಹಚ್ಚಿಕೊಂಡು ಮನೆ ಬಾಗಿಲಿಗೆ ಅಗತ್ಯ ವಸ್ತುಗಳನ್ನು ಮುಟ್ಟಿಸುತ್ತೇವೆ .ದಯವಿಟ್ಟು ಯಾರೊಬ್ಬರೂ ಮನೆಯಿಂದ ಹೊರಗೆ ಬರಬೇಡಿ,ಪೋಲೀಸರಿಗೆ ಸಹಕಾರ ಕೊಡಿ ಎಂದು ಪೋಲೀಸ್ ಆಯುಕ್ತರು ಸಾರ್ವಜನಿಕರಲ್ಲಿ ಮನವಿ ಮಾಡಿಕೊಂಡರು.

ಜಿಲ್ಲಾಧಿಕಾರಿ ಬೊಮ್ಮನಹಳ್ಳಿ ಮಾತನಾಡಿ,ಬೆಳಗಾವಿ ಜಿಲ್ಲೆಯ ಎಲ್ಲ ರೈತರು ಬೆಳಗಾವಿಯ ಎಪಿಎಂಸಿ ಮಾರುಕಟ್ಟೆಗೆ ಬರುತ್ತಿರುವದರಿಂದ,ಮಾರುಕಟ್ಟೆಯಲ್ಲಿ ರಶ್ ಆಗುತ್ತಿದೆ,ಅದಕ್ಕಾಗಿ ಆಯಾ ತಾಲ್ಲೂಕಿನ ರೈತರು ತಮ್ಮ ತಾಲ್ಲೂಕಾ ಎಪಿಎಂಸಿ ಮಾರುಕಟ್ಟೆಗೆ ಹೋಗಬೇಕು,ಅಲ್ಲಿಯೇ ರೈತರು ತಮ್ಮ ಫಸಲು ಮಾರಾಟ ಮಾಡುವದು ಒಳ್ಳೆಯದು ಎಂದು ಡಿಸಿ ಹೇಳಿದರು.

ಎಪಿಎಂಸಿ ಮಾರುಕಟ್ಟೆಯಲ್ಲಿ ಜನಜಂಗುಳಿ ತಡೆಯುವ ನಿಟ್ಟಿನಲ್ಲಿ ಜಿಲ್ಲಾಧಿಕಾರಿಗಳು ಎಪಿಎಂಸಿ ಕಚೇರಿಯಲ್ಲಿ ತುರ್ತು ಸಭೆ ನಡೆಸಿ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದರು.

Check Also

ಅನಾಹುತ ಮಳೆಗೆ ಗೋಡೆ ಕುಸಿದು ಮಹಿಳೆ ಸಾವು

ಗೋಕಾಕ: ಗೋಕಾಕದ ಸಂಗಮ ನಗರದ ಫರೀದಾ ಎಂಬ ಮಹಿಳೆ ಗೋಡೆ ಕುಸಿದ ಪರಿಣಾಮ ಮೃತಪಟ್ಟಿದ್ದಾರೆ. ಇವರು ತಮ್ಮ ಮಗ ರಿಯಾಜ್ …

Leave a Reply

Your email address will not be published. Required fields are marked *