Breaking News
Home / Breaking News / ಮಸೀದಿಯಲ್ಲಿ ಪ್ರಾರ್ಥನೆ, ಪೋಲೀಸರಿಂದ ಲಾಠಿ ಚಾರ್ಜ….

ಮಸೀದಿಯಲ್ಲಿ ಪ್ರಾರ್ಥನೆ, ಪೋಲೀಸರಿಂದ ಲಾಠಿ ಚಾರ್ಜ….

ಬೆಳಗಾವಿ- ಮಸೀದಿಯಲ್ಲಿ ಸಾಮೂಹಿಕವಾಗಿ ನಮಾಜ್ ಮಾಡುತ್ತಿದ್ದವರನ್ನ ಹೊರ ಕರೆತಂದು ಲಾಠಿ ಚಾರ್ಜ್ ಮಾಡಿದ ಘಟನೆ

ಬೆಳಗಾವಿ ಜಿಲ್ಲೆಯ ಗೋಕಾಕ್ ಪಟ್ಟಣದ ಮಸೀದಿಯೊಂದರಲ್ಲಿ ನಡೆದಿದೆ.

ಲಾಕ್ ಡೌನ್ ಇದ್ದರು ಕ್ಯಾರೆ ಎನ್ನದೇ ನಮಾಜ್ ಗೆ ಜನ ಸೇರಿದ್ದಾರೆಂಬ ಮಾಹಿತಿ ಪಡೆದ ಪೋಲೀಸರು ಲಾಠಿ ಚಾರ್ಜ ಮಾಡಿ ಜನರನ್ನು ಚದುರಿಸಿದ್ದಾರೆ.

ಎರಡು ಮಸೀದಿಗಳಲ್ಲಿ ನಮಾಜ್ ಮಾಡುತ್ತಿದ್ದ ಮೂವತ್ತಕ್ಕೂ ಅಧಿಕ ಜನರನ್ನು ಮಸೀದಿಯಿಂದ ಹೊರಗೆ ಕರೆದು ಪೋಲೀಸರು ಲಾಠಿ ರುಚಿ ತೋರಿಸಿದ್ದಾರೆ.

ಗೋಕಾಕ್ ಶಹರ ಪೊಲೀಸರಿಂದ ಲಾಠಿ ಚಾರ್ಜ್ ಮಾಡಲಾಗಿದ್ದು ಲಾಠಿ ಏಟು ಬೀಳುತ್ತಿದ್ದಂತೆ ಓಡೊಡಿ ಮನೆ ಸೇರಿಕೊಂಡು ಕೆಲವರು.
ಮಸೀದಿ ಮುಖಂಡರನ್ನ ಪೋಲೀಸರು ವಶಕ್ಕೆ ಪಡೆದಿದ್ದಾರೆ.

About BGAdmin

Check Also

ಮತ್ತೆ ಇಬ್ಬರಿಗೆ ಸೊಂಕು ,ಬೆಳಗಾವಿಯಲ್ಲಿ 10 ಕ್ಕೇರಿದ ಕೊರೋನಾ ಸೊಂಕಿತರ ಸಂಖ್ಯೆ

ಬೆಳಗಾವಿಯಲ್ಲಿ 10 ಕ್ಕೇರಿದ ಕೊರೋನಾ ಸೊಂಕಿತರ ಸಂಖ್ಯೆ ಬೆಳಗಾವಿ – ಬೆಳಗಾವಿ ಜಿಲ್ಲೆಯಲ್ಲಿ ಮತ್ತಿಬ್ಬರ ಶಂಕಿತರ ರಿಪೋರ್ಟ್ ಪಾಸಿಟೀವ್ ಬಂದಿದ್ದು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ