ಬೆಳಗಾವಿ- ಒಂದು ಕಾಲದಲ್ಲಿ ಬೆಳಗಾವಿ ಗ್ಯಾಂಗ್ ವಾರ್ ಗೆ ಹೆಸರಾಗಿತ್ರು,ಯಾವಾಗ ಎನ್ ಕೌಂಟರ್ ಶುರುವಾಯಿತೋ ಅಂದಿನಿಂದ ಗ್ಯಾಂಗ್ ವಾರ್ ರೌಡಿಗಳ ಕಥೆ ಮುಗಿದು ಹೋಗಿತ್ತು, ಗ್ಯಾಂಗ್ ವಾರ್ ಗಳಿಂದು ನೊಂದು ಬೆಂದು ಹೋಗಿದ್ದ ಬೆಳಗಾವಿಗೆ ಗಾಂಜಾ ನಂಜು ಏರುತ್ತಿರುವದು ಅತ್ಯಂತ ಕಳವಳಕಾರಿ ಸಂಗತಿಯಾಗಿದೆ.
ಬೆಳಗಾವಿಯಲ್ಲಿ ಈಗ ಗಾಂಜಾ ಹೊಗೆ ಬಿಡುತ್ತಿದ್ದೆ,ಈ ವಿಷಕಾರಿ ಹೊಗೆಯ ಸುಳಿಯಲ್ಲಿ ಯುವಕರೇ ಸಿಗುತ್ತಿದ್ದು,ಗಾಂಜಾ ಮಾರಾಟಗಾರರ ಹಾರಾಟ ಬೆಳಗಾವಿಯಲ್ಲಿ ಜೋರಾಗಿಯೇ ನಡೆದಿದೆ ಎನ್ನುವದಕ್ಕೆ ನಿನ್ನೆ ರಾತ್ರಿ ನಡೆದ ಘಟನೆಯೇ ಅದಕ್ಕೆ ಸಾಕ್ಷಿ ಒದಗಿಸಿದೆ.
ಬೆಳಗಾವಿಯ ಶಿವಾಜಿ ನಗರದಲ್ಲಿ ನಿನ್ನೆ ರಾತ್ರಿ ದೊಡ್ಡ ಗಲಾಟೆಯೇ ನಡೆದಿದೆ,ಈ ಗಲಾಟೆಗೆ ಓರ್ವನಿಗೆ ಚೂರಿ ಇರಿತವಾಗಿ ಆತ ಆಸ್ಪತ್ರೆಗೂ ದಾಖಲಾಗಿದ್ದಾನೆ. ಈ ಗಲಾಟೆಗೂ ಗಾಂಜಾ ಮಾರಾಟಕ್ಕೂ ಲಿಂಕ್ ಇದೆ,ಈ ಗಲಾಟೆಯಲ್ಲಿ ಚೂರಿ ಇರಿತವಾಗಿರುವದು ಅತ್ಯಂತ ಕಳವಳಕಾರಿ ಸಂಗತಿಯಾಗಿದೆ.
ಬೆಳಗಾವಿ ಪೋಲೀಸರು ಕಳೆದ ಒಂದು ವರ್ಷದಿಂದ ಗಾಂಜಾ ವಹಿವಾಟವನ್ನು ಬೆಳಗಾವಿಯಲ್ಲಿ ಸಂಪೂರ್ಣವಾಗಿ ಶಮನಗೊಳಿಸುವ ಹಲವಾರು ರೀತಿಯ ಪ್ರಯತ್ನಗಳನ್ನು ಮಾಡಿದ್ದಾರೆ,ಹಲವಾರು ಗಾಂಜಾ ಪ್ರಕರಣಗಳನ್ನು ಪತ್ತೆ ಮಾಡಿ ನೂರಾರು ಜನರ ಮೇಲೆ ಕೇಸ್ ಹಾಕಿ ಜೈಲಿಗೆ ಕಳಿಸಿದರೂ ಈ ಗಾಂಜಾ ಬಳ್ಳಿ ಮತ್ತೆ ಚಿಗರುತ್ತಲೇ ಇದೆ.
ಬೆಳಗಾವಿಯ ಶಿವಾಜಿ ನಗರದಲ್ಲಿರುವ ರಿಮಾಂಡ್ ಹೋಮ್ ಛತ್ತು ಗಾಂಜಾ ಮಾರಾಟಗಾರರ,ಗಾಂಜಾ ವ್ಯೆಸನಿಗಳ ಅಡ್ಡಾ..ಈ ಅಡ್ಡಾದಿಂದ ಗಾಂಜಾ ಹೊಗೆ ಬರುತ್ತಿರುವದನ್ನು ಗಮನಿಸಿದ ಸ್ಥಳೀಯರು ಅದಕ್ಕೆ ವಿರೋಧ ವ್ಯಕ್ತ ಪಡಿಸಿದ್ದಾರೆ, ನಮ್ಮ ಏರಿಯಾಕ್ಕೆ ಬೇರೆ ಏರಿಯಾದ ಹುಡುಗರು ಬಂದು ಇಲ್ಲಿಯ ಮಕ್ಕಳನ್ನು ದುಶ್ಚಟಕ್ಕೆ ತಳ್ಳಬೇಡಿ ಎಂದು ಬುದ್ದಿವಾದ ಹೇಳುವಾಗ ನಿನ್ನೆ ರಾತ್ರಿ ಶಿವಾಜಿ ನಗರದ ರಿಮಾಂಡ್ ಹೋಮ್ ಬಳಿ ಗಲಾಟೆ ಆಗಿದ್ದು ಬೆಳಗಾವಿಯ ಮಾರ್ಕೇಟ್ ಪೋಲೀಸರು ಕೆಲವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ.ಈ ಗಲಾಟೆಯಲ್ಲಿ ಗಾಂಜಾ ವ್ಯೆಸನಿಗೆ ಚೂರಿ ಇರಿತದಿಂದ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿ ,ಇಂದು ಬೆಳಿಗ್ಗೆ ಆಸ್ಪತ್ರೆಯಿಂದ ಡಿಸ್ಚಾರ್ಜ್ ಕೂಡಾ ಆಗಿದ್ದಾನೆ.
ನಿನ್ನೆ ರಾತ್ರಿ ಬೆಳಗಾವಿಯ ಶಿವಾಜಿ ನಗರದಲ್ಲಿ ಗಾಂಜಾ ವಿರುದ್ಧ ಜನಾಂದೋಲನ ಆರಂಭವಾಗಿದ್ದು ಬೆಳಗಾವಿಯಲ್ಲಿ ಗಾಂಜಾ ದಂಧೆಯನ್ನು ಸಂಪೂರ್ಣವಾಗಿ ಶಮನ ಮಾಡಲು ಪೊಲೀಸ್ ಇಲಾಖೆ ವಿಶೇಷ ಫೋರ್ಸ್ ನೇಮಿಸಿ ಗಾಂಜಾ ಮಾರಾಟಗಾರರನ್ನು ಗಡಿಪಾರು ಮಾಡದಿದ್ದರೆ, ಬೆಳಗಾವಿಯಲ್ಲಿ ಗಾಂಜಾ ಹೊಗೆ ಬೆಳಗಾವಿಯ ಯುವಕರನ್ನು ದುಶ್ಚಟದ ಹೊಂಡಕ್ಕೆ ತಳ್ಳುವದರಲ್ಲಿ ಸಂದೇಹವೇ ಇಲ್ಲ .
ನಿನ್ನೆ ರಾತ್ರಿ ಮಾರ್ಕೆಟ್ ಪೋಲೀಸರು ಸಕಾಲಕ್ಕೆ ಸ್ಥಳಕ್ಕೆ ದೌಡಾಯಿಸಿ ದೊಡ್ಡ ಅನಾಹುತವನ್ನು ತಪ್ಪಿಸಿದ್ದಾರೆ,ಕೆಲವರನ್ನು ವಶಕ್ಕೆ ಪಡೆದು ಗಾಂಜಾ ದಂಧೆಗೆ ಬ್ರೆಕ್ ಹಾಕುವ ಕಾರ್ಯಾಚರಣೆ ಆರಂಭಿಸಿದ್ದಾರೆ.