ಬೆಳಗಾವಿ- ಬೆಳಗಾವಿ ಜಿಲ್ಲಾ ಪೊಲೀಸ್ ಇಲಾಖೆಯಿಂದ ಅಪರಾಧ ತಡೆ ತ್ರೈಮಾಸಿಕ ಮಾಸಾಚರಣೆ ಮುಕ್ತಾಯ ಸಮಾರಂಭ ನಡೆಯಿತು
.೦೧ ನೇ ಡಿಸೆಂಬರ್ ೨೦೧೬ ರಿಂದ ೨೮ ನೇ ಫೆಬ್ರವರಿ ೨೦೧೭ರ ವರೆಗೆ ಮೂರು ತಿಂಗಳಲಿನಲ್ಲಿ ವಿವಿಧ ಪ್ರಕರಣ ಪತ್ತೆ ಹಚ್ಚಿ , ಕಳ್ಳರಿಂದ. ವಶಪಡಿಸಿಕೊಂಡ ಆಭರಣಗಳನ್ನು ವಾರಸುದಾರರಿಗೆ ಮರಳಿ ನೀಡಲಾಯಿತು
ನಗರದ ಕುಮಾರ ಗಂಧರ್ವ ಹಾಲ್ ನಲ್ಲಿ ನಡೆದ ಕಾರ್ಯಕ್ರಮದಲ್ಲಿ ನೂರಾರು ಜನ ವಾರಸದಾರರಿಗೆ ಕಳುವಾಗಿದ್ದ ಆಭರಣಗಳನ್ನು ಮರಳಿ ನೀಡಲಾಯಿತು
ಬೆಳಗಾವಿ ಜಿಲ್ಲೆಯ ವಿವಿಧ ಠಾಣೆಗಳ ವ್ಯಾಪ್ತಿಗಳಲ್ಲಿ ನಡೆದ ನೂರಾರು ಕಳ್ಳತನದ ಪ್ರಕರಣಗಳನ್ನು ಬೇಧಿಸಿ ಕಳ್ಳರಿಂದ ರಿಕವರಿ ಮಾಡಿದ ಚಿನ್ನಾಭರಣಗಳನ್ನು ಮತ್ತು ಬೆಳ್ಳಿಯ ಆಭರಣಗಳನ್ನು ವಾರಸದಾರರಿಗೆ ಮರಳಿ ನೀಡಲಾಯಿತು