ಬೆಳಗಾವಿ- ಡಿಸಿಪಿ ವಿಕ್ರಮ್ ಅಮಟೆ ಅವರು ಬೆಳಗಾವಿಗೆ ಬಂದ ಬಳಿಕ,ನಗರದಲ್ಲಿ ಪೋಲೀಸ್ ಖದರ್ ಕಾಣಿಸುತ್ತಿದೆ.
ಬೆಳಗಾವಿ ಮಹಾನಗರ ಮತ್ತು ಜಿಲ್ಲೆಯಾದ್ಯಂತ ನಿರಂತರವಾಗಿ ಗಾಂಜಾ ಮಾರಾಟಗಾರರ ಮೇಲೆ ದಾಳಿಗಳು ನಡೆಯುತ್ತಿವೆ,ನಿನ್ನೆ ರಾತ್ರಿ ಬೆಳಗಾವಿಯ ಖಂಜರ್ ಗಲ್ಲಿಯಲ್ಲಿ ಹಲವಾರು ವರ್ಷಗಳಿಂದ ನಡೆಯುತ್ತಲೇ ಬಂದಿರುವ ಮಟಕಾ ಅಡ್ಡೆಯ ಮೇಲೆ ಡಿಸಿಪಿ ವಿಕ್ರಮ್ ಅಮಟೆ ಖುದ್ದಾಗಿ ದಾಳಿ ಮಾಡಿ,ಬರೋಬ್ಬರಿ 23 ಜನರನ್ನು ವಶಕ್ಕೆ ಪಡೆದುಕೊಳ್ಳುವ ಮೂಲಕ ಪೋಲೀಸರು ಮಟಕಾ ಬುಕ್ಕಿಗಳಿಗೆ ಖಡಕ್ ಸಂದೇಶ ರವಾನಿಸಿದ್ದಾರೆ.
ಬೆಳಗಾವಿ ಮಹಾನಗರದಲ್ಲಿ ಗಾಂಜಾ ಮಾರಾಟಗಾರರ ಮೇಲೂ ದಾಳಿಗಳು ನಡೆದಿವೆ,ಹಲವಾರು ಜನರನ್ನು ಬಂಧಿಸಲಾಗಿದ್ದು,ಆಕ್ರಮ ದಂಧೆಗಳಿಂದ ಬೆಳಗಾವಿ ಮಹಾನಗರವನ್ನು ಸಂಪೂರ್ಣವಾಗಿ ಮುಕ್ತಗೊಳಿಸಲು ಬೆಳಗಾವಿ ಪೋಲೀಸರು ಕಾರ್ಯಾಚರಣೆ ಆರಂಭಿಸಿರುವದು ಸ್ವಾಗತಾರ್ಹ ಸಂಗತಿಯಾಗಿದೆ.
ಡಿಸಿಪಿ ವಿಕ್ರಮ್ ಅಮಟೆ ಅವರು ಖುದ್ದಾಗಿ ದಾಳಿಗಳನ್ನು ಮಾಡುತ್ತಿದ್ದಾರೆ,ಅದು ಅವರ ಕಳಕಳಿಯನ್ನು ತೋರಿಸುತ್ತದೆ.ಬೆಳಗಾವಿಯಲ್ಲಿ ಮಾಂಜಾ,ಮಾರಾಟದ ಬಗ್ಗೆ ಮಾದ್ಯಮಗಳಲ್ಲಿ ವರದಿ ಬಂದ ನಂತರ ಅದಕ್ಕೆ ಬೆಳಗಾವಿ ಪೋಲೀಸರು ತಕ್ಷಣ ಸ್ಪಂದಿಸಿ ಅಂಗಡಿಗಳ ಮೇಲೆ ದಾಳಿ ಮಾಡಿ ಅಪಾರ ಪ್ರಮಾಣದ ಮಾಂಜಾ ವಶ ಪಡಿಸಿಕೊಂಡಿದ್ದಾರೆ.
ನಿನ್ನೆ ರಾತ್ರಿ ಡಿಸಿಪಿ ವಿಕ್ರಮ್ ಅಮಟೆ ನಡೆಸಿರುವ ದಾಳಿ,ಬೆಳಗಾವಿ ಮಹಾನಗರದಲ್ಲಿ ಮಟಕಾ ಬುಕ್ಕಿಗಳ ಪಾಲಿಗೆ ಅದು ಬಿರುಗಾಳಿಯೇ ಆಗಿದೆ,ಬೆಳಗಾವಿ ಮಹಾನಗರದಲ್ಲಿ ಹಲವಾರು ವರ್ಷಗಳಿಂದ ಮಟಕಾ ದಂಧೆ ಮಾಡುತ್ತಿರುವ ಹಲವಾರು ಜನ ಬುಕ್ಕಿಗಳು ಇದ್ದಾರೆ,ಡಿಸಿಪಿ ವಿಕ್ರಮ್ ಅಮಟೆ ಅವರು,ಖಂಜರ್ ಗಲ್ಲಿಯ ಮಾದರಿಯಲ್ಲೇ ಉಳಿದ ಬುಕ್ಕಿಗಳನ್ನು ಸರಳವಾಗಿ ಪತ್ತೆ ಮಾಡಬಹುದಾಗಿದೆ
ಬೆಳಗಾವಿ ಮಹಾನಗರದಲ್ಲಿ ಯುವಕರು ಗಾಂಜಾ ಚಟಕ್ಕೆ ಬಲಿಯಾಗುತ್ತಿದ್ದಾರೆ.ನಗರದಲ್ಲಿ ಗಾಂಜಾ ಮಾರಾಟದ ಪ್ರಕರಣಗಳು ದಾಖಲಾದರೂ ಸಹ ಈ ದಂಧೆ ನಿರಂತರವಾಗಿ ನಡೆಯುತ್ತಲೇ ಇದೆ,ಗಾಂಜಾ ದಂಧೆಯನ್ನು ಸಂಪೂರ್ಣವಾಗಿ ಸಮಾಧಿ ಮಾಡುವದು ಅತ್ಯಗತ್ಯವಾಗಿದ್ದು ಡಿಸಿಪಿ ವಿಕ್ರಮ್ ಅಮಟೆ ಅವರು ಈ ಪುಣ್ಯದ ಕೆಲಸ ಮಾಡಬಹುದು ಎನ್ನುವ ವಿಶ್ವಾಸ ಮೂಡಿದೆ.
ನಿನ್ನೆ ಬೆಳಗಾವಿಯ ಖಂಜರ್ ಗಲ್ಲಿಯಲ್ಲಿ ವಶಕ್ಕೆ ಪಡೆದಿರುವ 23 ಬುಕ್ಕಿಗಳ ಹೆಸರುಗಳನ್ನು ಪೋಲೀಸರು ಬಹಿರಂಗಪಡಿಸುವದು ಅಗತ್ಯ,ಯಾಕಂದ್ರೆ ಯಾರು,ಎಲ್ಲಿ ಮಟಕಾ ದಂಧೆ ಮಾಡುತ್ತಿದ್ದಾರೆ ಅನ್ನೋದು ಎಲ್ಲರಿಗೂ ಗೊತ್ತಾಗಲಿ.