ಬೆಳಗಾವಿ- ಬ್ಯಾಂಕ್ ಲೂಟಿ ಮಾಡಿದ ದರೋಡೆಕೋರನೊಬ್ಬ ಕೇವಲ ಫಿಂಗರ್ ಪ್ರಿಂಟ್ ಸುಳಿವಿನ ಮೇಲೆ ಸಿಕ್ಕಿಬಿದ್ದಿದ್ದಾನೆ.
ಈತ ಆರುವರೆ ಲಕ್ಷ ರೂ.ಕಿಮ್ಮತ್ತಿನ,ಹೈಟೇಕ್ ಹಾರ್ಲೇ ಡೆವಿಡ್ ಸನ್ಸ್ ಕಂಪನಿಯ ಬೈಕ್ ಹತ್ತಿ ಓಡಾಡುತ್ತಿದ್ದ ಬೆಳಗಾವಿಯ ಮಹಾಂತೇಶ ನಗರದಲ್ಲಿರುವ ಕಿತ್ತೂರು ಚನ್ನಮ್ಮಾ ಕೋ ಆಪರೇಟೀವ್ ಅರ್ಭನ್ ಬ್ಯಾಂಕನ್ನು ಲೂಟಿ ಮಾಡಿದ್ದ,ಕೇವಲ ಫಿಂಗರ್ ಪ್ರೀಂಟ್ ಆಧಾರದ ಮೇಲೆ ಬೆಳಗಾವಿಯ ಮಾಳಮಾರುತಿ ಠಾಣೆಯ ಪೋಲೀಸರು ಯಶಸ್ವಿಯಾಗಿದ್ದಾರೆ.
ಮುಜಫರ್ ಮಹ್ಮದ ಶೇಖ ಈತ ಮೂಲತಹ ದಾಂಡೆಲಿ,ಬೆಳಗಾವಿಯ ಸುಭಾಷ ನಗರ ಹಾಲಿ ಈತನ ಅಡ್ರೆಸ್ ಇತ ಇತ್ತೀಚಿಗೆ ಮಹಾಂತೇಶ ನಗರದ ಕೋ ಆಪರೇಟೀವ್ ಸೊಸೈಟಿಯಲ್ಲಿ ಬಾಗಿಲು ಮುರಿದು ಕಳ್ಳತನ ಮಾಡಿದ್ದ ಫಿಂಗರ್ ಪ್ರೀಂಟ್ ಆಧಾರದ ಮೇಲೆ ಆರೋಪಿಯನ್ನು ಬಂಧಿಸಿರುವ ಪೋಲೀಸರು ಆರುವರೆ ಲಕ್ಷ ರೂ ಕಿಮ್ಮತ್ತಿನ ಹಾರ್ಲೇ ಬೈಕ್,,ಹದಿನೈದು ಲಕ್ಷ ₹ ಕಿಮ್ಮತ್ತಿನ ಚಿನ್ನಾಭರಣ,ಒಂದು ಲಕ್ಷಕ್ಕೂ ಹೆಚ್ವು ನಗದು ಹಣವನ್ನು ವಶಪಡಿಸಿಕೊಂಡಿದ್ದಾರೆ.