Breaking News

ಬೆಳಗಾವಿಯ ನಕಲಿ ED ಖಿಲಾಡಿ,ಸಪಳೆ,ಸಪಡ್ಲೇ….!!

ಬೆಳಗಾವಿ-ಬೆಳಗಾವಿ ನಗರದ ವಿವಿಧ ಬ್ಯಾಂಕುಗಳಿಗೆ ನಕಲಿ ED ನೋಟೀಸ್ ಕಳಿಸಿ,ಇನ್ಸುರೆನ್ಸ್ ಪಾಲಿಸಿಗಳ ಪ್ರಿಮಿಯಂ ಹಣ ತನ್ನ ಖಾತೆಗೆ ಜಮಾ ಮಾಡಿಸಿ,ಪಾಲಿಸಿದಾರರಿಗೆ ನಕಲಿ ರಸಿದಿ ನೀಡಿ ,ನೂರಾರು ಜನರಿಗೆ ಲಕ್ಷಾಂತರ ರೂಪಾಯಿ ಟೋಪಿ ಹಾಕಿದ ಖತರ್ನಾಕ್ ವಂಚಕನನ್ನು ಪತ್ತೆ ಮಾಡಿ,ಬೇಡಿ ಹಾಕುವಲ್ಲಿ ಬೆಳಗಾವಿಯ ಸೈಬರ್ ಪೋಲೀಸರು ಯಶಸ್ವಿಯಾಗಿದ್ದಾರೆ.

ಕಳೆದ ತಿಂಗಳು ಬೆಳಗಾವಿ ನಗರದ ಕೆಲವು ಬ್ಯಾಂಕುಗಳಿಗೆ ನಕಲಿ ED ನೋಟೀಸ್ ಬಂದಿರುವ ಬಗ್ಗೆ ಬೆಳಗಾವಿಯ ಸೈಬರ್ ಕ್ರೈಂ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ ಸೈಬರ್ ಠಾಣೆಯ ಇನೆಸ್ಪೆಕ್ಟರ್ ಬಿ.ಆರ್ ಗಡ್ಡೇಕರ,ನಕಲಿ ED ಕಳಿಸಿದ ಖಿಲಾಡಿ ಯಾರು ಎಂದು ಹುಡುಕಲು ಕಾರ್ಯಚರಣೆ ಆರಂಭಿಸಿದ್ದರು,ಪೋಲೀಸರು ನನ್ನನ್ನು ಹುಡುಕುತ್ತಿದ್ದಾರೆ ಎಂಬ ಮಾಹಿತಿ ಆ ಖಿಲಾಡಿಗೆ ಗೊತ್ತಾಗುತ್ತಿದ್ದಂತೆಯೇ ಈ ಖಲಾಡಿ ತನ್ನ ಮೋಬೈಲ್ ಮತ್ತು ಸುಮಾರು ಹತ್ತು ಸಿಮ್ ಕಾರ್ಡ್ ಗಳನ್ನು ಕೊಲ್ಹಾಪೂರದಲ್ಲಿ ಇಟ್ಟು ಆತ ಮುಂಬೈಯಲ್ಲಿ ಇದ್ದುಕೊಂಡು ಪೋಲೀಸರಿಗೆ ದಿಶಾಬೂಲ ಮಾಡಿದ್ದ.

ಇತನ ಮೋಬೈಲ್ ಕೊಲ್ಹಾಪೂರದಲ್ಲಿ ಆ್ಯಕ್ಟೀವ್ ಇದೆ ಅಂತಾ ಸೈಬರ್ ಪೋಲೀಸರು ಮೊದಲು ಕೊಲ್ಹಾಪೂರದಲ್ಲಿಯೇ ಖಿಲಾಡಿಯ ಪತ್ತೆಗೆ ಜಾಲ ಬೀಸೀದ್ಸರು,ಆದ್ರೆ ನಂತರ ಖಿಲಾಡಿಯ ನೈಜ ಆಟ ಪೋಲೀಸರಿಗೆ ಗೊತ್ತಾಗಿ,ಸೈಬರ್ ಪೋಲೀಸರ ತಂಡ ಇನೆಸ್ಪೆಕ್ಟರ್ ಗಡ್ಡೇಕರ ನೇತ್ರತ್ವದಲ್ಲಿ ಕಾರ್ಯಾಚರಣೆ ನಡೆಸಿ ಕೊನೆಗೂ ಈ ನಕಲಿ ED ಖಿಲಾಡಿಯನ್ನು ಬಂಧಿಸಿದ್ದಾರೆ.

ಪೋಲೀಸರು ನಕಲಿ ED ನೋಟೀಸ್ ಖಿಲಾಡಿಯನ್ನು ಬಂಧಿಸಿ ವಿಚಾರಣೆ ಮಾಡಿದ ಬಳಿಕ ಪೋಲೀಸರಿಗೆ ಅಚ್ಚರಿ ಕಾದಿತ್ತು ಯಾಕಂದ್ರೆ ಈತ ಒಂದಲ್ಲ ಹತ್ತು ಹಲವು ವಂಚನೆ ಪ್ರಕರಣಗಳಲ್ಲಿ ಭಾಗಿಯಾಗಿದ್ದ,ಖಾಸಗಿ ಇನ್ಸೂರೆನ್ಸ್ ಕಂಪನಿಯಲ್ಲಿ ಏಜಂಟನಾಗಿ ಕೆಲಸ ಮಾಡುತ್ತಿದ್ದ ಈತ ನೂರಾರು ಜನ ಪಾಲಿಸಿದಾರರ ಪ್ರೀಮೀಯಂ ಹಣವನ್ನು ತನ್ನ ಖಾತೆಗೆ ಜಮಾ ಮಾಡಿಕೊಂಡು ಗ್ರಾಹಕರಿಗೆ ಸುಮಾರು 30 ಲಕ್ಷ ರೂ ವಂಚಿಸಿದ್ದ,ಜೊತೆ ಬೇರೆಯವರ ಹೆಸರಿನಲ್ಲಿ ನ್ಯಾಯಾಧೀಶರಿಗೆ ನೋಟೀಸ್ ಕಳಿಸಿ,ತನಗೆ ಬೇಡವಾದವರಿಗೆ ಪೀಡೀಸುವದು ಸೇರಿದಂತೆ ಈತ ಮಾಡಿದ ಹತ್ತು ಹಲವು ಖತರ್ನಾಕ್ ಕೃತ್ಯಗಳು ಬಯಲಾಗಿವೆ.

ಹಾಗಾದ್ರೆ ಇಷ್ಟೆಲ್ಲಾ ಆಟವಾಡಿ ಮುಗ್ದ ಜನರಿಗೆ ಲಕ್ಷಾಂತರ ರೂಪಾಯಿ ಟೋಪಿ ಹಾಕಿದ ಖಿಲಾಡಿ ಬೆಳಗಾವಿಯ ಶಾಸ್ತ್ರೀ ನಗರದ ನಿವಾಸಿ,31 ವರ್ಷ ವಯಸ್ಸಿನ ಮಧುಕರ ವಿಲಾಸ ಸಪಳೆ, ಒಟ್ಟಾರೆ ಒಂದಲ್ಲಾ,ಎರಡಲ್ಲಾ ಹತ್ತು ಹಲವು ಪ್ರಕರಣಗಳಲ್ಲಿ ಭಾಗಿಯಾದ,ಸಪಳೆ ಕೊನೆಗೂ ಪೋಲೀಸರ ಕೈಗೆ ಸಪಡ್ಲೇ ಎನ್ನುವಂತಾಗಿದೆ.

ಬೆಳಗಾವಿಯ ವಿವಿಧ ಬ್ಯಾಂಕುಗಳಿಗೆ ಬಂದಿದ್ದ ನಕಲಿ ED ನೋಟೀಸ್ ಆಧರಿಸಿ,ಬೆಳಗಾವಿಯ ಸೈಬರ್ ಪೋಲೀಸರು ಅಸಲಿ ಖಿಲಾಡಿಯನ್ನು ಜೈಲಿಗೆ ಕಳುಹಿಸಿದ್ದಾರೆ,ಸೈಬರ್ ಪೋಲೀಸರ ಈ ಕಾರ್ಯಕ್ಕೆ ನಗರ ಪೋಲೀಸ್ ಆಯುಕ್ತರು ಬಹುಮಾನ ಘೋಷಿಸಿದ್ದಾರೆ.

Check Also

ವೆಲ್ಡಿಂಗ್ ಕಾರ್ಮಿಕನ ಮಗ ಲಕ್ ಪತಿ ಆಗಿದ್ದು ಹೇಗೆ ಎಲ್ಲಿ ಗೊತ್ತಾ…??

ಬಾಗಲಕೋಟೆ-ಸಾಧನೆಗೆ ಬಡತನ ಎಂದಿಗೂ ಅಡ್ಡಿಯಾಗದು. ಸತತ ಪ್ರಯತ್ನ, ಪರಿಶ್ರಮವಿದ್ದರೆ ಬೌದ್ಧಿಕ ಮಟ್ಟ ವೃದ್ಧಿಸಿಕೊಂಡು, ಎಂಥವರು ಸಾಧನೆ ಮಾಡಬಹುದು. ಜ್ಞಾನಕ್ಕೆ ಬೆಲೆ …

Leave a Reply

Your email address will not be published. Required fields are marked *