ಬೆಳಗಾವಿ: ಹಿರೇಕೋಡಿಯ ನಂದಿ ಪರ್ವತದ ಕಾಮಕುಮಾರ ನಂದಿ ಮಹಾರಾಜರ ಹತ್ಯೆ ಆರೋಪಿ ನಾರಾಯಣ ಮಾಳೆ ಮನೆಗೆ ಪೊಲೀಸರು ಭದ್ರತೆ ಒದಗಿಸಿದ್ದು, ಬಂಧನ ಸುದ್ದಿ ತಿಳಿಯುತ್ತಿದ್ದಂತೆ ಕುಟುಂಬಸ್ಥರು ಮನೆಯಿಂದ ಪರಾರಿಯಾಗಿದ್ದಾರೆ.
ಜೈನಮುನಿಯ ಹತ್ಯೆ ಪ್ರಕರಣದಲ್ಲಿ ಪೊಲೀಸರು ನಾರಾಯಣ ಮಾಳಿಯನ್ನು ವಶಕ್ಕೆ ಪಡೆಯುತ್ತಿದ್ದಂತೆಯೇ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಮುನ್ನೆಚ್ಚರಿಕೆ ಕ್ರಮವಾಗಿ ಜು.೭ರಂದು ಮನೆಗೆ ಕೆಎಸ್‌ಆರ್‌ಪಿ ಹಾಗೂ ಸಿವಿಲ್ ಪೊಲೀಸರಿಂದ ಭದ್ರತೆ ಒದಗಿಸಲಾಗಿದೆ.
ಸುದ್ದಿ ತಿಳಿಯುತ್ತಿದ್ದಂತೆ ಮಾಳಿ ಕುಟುಂಬಸ್ಥರು ಜಾನುವಾರುಗಳನ್ನು ಬಿಟ್ಟು ಪರಾರಿಯಾಗಿದ್ದಾರೆ. ಮನೆಯ ಪಕ್ಕದ ಶೆಡ್‌ನಲ್ಲಿ ಎರಡು ಆಕಳು, ಎರಡು ಎಮ್ಮೆ, ೪೦ಕ್ಕೂ ಹೆಚ್ಚು ಮೇಕೆಗಳು ಇವೆ. ಇವುಗಳ ಪೋಷಣೆ ಮಾಡಲು ಯಾರೊಬ್ಬರೂ ಇಲ್ಲ. ನೀರಡಿಕೆ, ಹಸಿವಿನಿಂದ ಜಾನುವಾರುಗಳು ಒದ್ದಾಡುತ್ತಿರುವುದನ್ನು ನೋಡಿದ ಪೊಲೀಸರು ತಾವೇ ಅವುಗಳಿಗೆ ಮೇವು ಹಾಗೂ ನೀರಿನ ವ್ಯವಸ್ಥೆ ಮಾಡುತ್ತಿದ್ದಾರೆ. ಮೂಕ ಪ್ರಾಣಿಗಳ ವೇದನೆ ಅರಿತು ಅವುಗಳ ಆರೈಕೆ ಮಾಡುತ್ತಿದ್ದು, ಪೊಲೀಸರ ಈ ಮಾನವೀಯ ಕಾರ್ಯಕ್ಕೆ ಗ್ರಾಮಸ್ಥರು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.
ಜು.೭ರಂದು ನಮ್ಮನ್ನು ಇಲ್ಲಿಗೆ ಭದ್ರತೆ ಒದಗಿಸಲು ಕಳಿಸಿಕೊಡಲಾಯಿತು. ನಾವು ಇಲ್ಲಗೆ ಬಂದು ನೋಡಿದಾಗ ಮನೆಯವರು ಖಾಲಿ ಮಾಡಿದ್ದರು. ಆಕಳು, ಎಮ್ಮೆ, ೪೦ಕ್ಕೂ ಅಧಿಕ ಮೇಕೆಗಳನ್ನು ಶೆಡ್‌ನಲ್ಲೇ ಬಿಟ್ಟುಹೋಗಿರುವುದು ಗಮನಕ್ಕೆ ಬಂತು. ಅವುಗಳ ಆರೈಕೆಗೆ ಯಾರೂ ಇಲ್ಲದ್ದರಿಂದ ನಾವೇ ಅವುಗಳಿಗೆ ಮೇವು, ನೀರಿನ ವ್ಯವಸ್ಥೆ ಮಾಡುತ್ತಿದ್ದೇವೆ. ಸಂಬAಧಿಕರು ಕೂಡಲೇ ಮನೆಗೆ ಬಂದು ಜಾನುವಾರುಗಳ ಆರೈಕೆ ನೋಡಿಕೊಳ್ಳಬೇಕೆಂದು ಬೆಳಗಾವಿ ಕೆಎಸ್‌ಆರ್‌ಪಿಯ ಪೇದೆಯೊಬ್ಬರು ಮಾಧ್ಯಮಗಳ ಮೂಲಕ ಮನವಿ ಮಾಡಿದ್ದಾರೆ.
ಮನೆ ಈಗ ಖಾಲಿಯಾಗಿದೆ. ನಾರಾಯಣ ಮಾಳೆ ಅರೆಸ್ಟ್ ಆಗುತ್ತಿದ್ದಂತೆ ಆತನ ಕುಟುಂಬಸ್ಥರು ಹೆದರಿ ತಮ್ಮ ಸಂಬAಧಿಕರ ಮನೆ ಸೇರಿದ್ದಾರೆ. ಕೊಲೆ ಆರೋಪದಲ್ಲಿ ಮಾಳೆ ಜೈಲು ಸೇರಿದ್ರೆ ಆತನ ಕುಟುಂಬಸ್ಥರು ಶೆಡ್ ನಲ್ಲಿರುವ ಎರಡು ಆಕಳು ಹಾಗೂ ಎರಡು ಎಮ್ಮೆ ಮತ್ತು ೪೦ ಕ್ಕೂ ಹೆಚ್ಚು ಮೇಕೆಗಳನ್ನು ಶೆಡ್ ನಲ್ಲಿಯೇ ಬಿಟ್ಟು ಹೊರಟು ಹೋಗಿದ್ದಾರೆ. ಮಾಳೆ ಮನೆಗೆ ಭದ್ರತೆಗೆ ಅಂತ ಜುಲೈ ೭ ರಂದು ನಿಯೋಜನೆಗೊಂಡಿದ್ದ ಕೆಎಸ್ಆರ್ಪಿ ಪೊಲೀಸರು ಹಾಗೂ ಚಿಕ್ಕೋಡಿ ಪೊಲೀಸರು ಕಳೆದ ನಾಲ್ಕು ದಿನಗಳಿಂದ ಮಾಳೆ ಸಾಕಿದ್ದ ಮೇಕೆ ಹಾಗೂ ಹಸು ಎಮ್ಮೆಗಳಿಗೆ ತಾವೇ ಮೇವು ಹಾಕಿ ನಿರುಣಿಸಿ ನೋಡಿಕೊಳ್ಳುತ್ತಿದ್ದಾರೆ. ಮಾಳೆ ಪಾಪಿಯಾದರೂ ಸಹ ಆತ ತಮ್ನ ಮನೆಯಲ್ಲಿ ಕಟ್ಟಿದ್ದ ಮೂಕ ಪ್ರಾಣಿಗಳ ರೋಧನೆ ನೋಡಲಾಗದೆ ಪೊಲೀಸರು ಅವುಗಳ ಲಾಲನೆ ಪಾಲನೆ ಮಾಡುತ್ತಿದ್ದಾರೆ. ಪೊಲೀಸರ ಈ ಮಾನವೀಯ ಕೆಲಸಕ್ಕೆ ಈಗ ಮೆಚ್ಚುಗೆ ವ್ಯಕ್ತವಾಗಿದೆ..