ಬೆಳಗಾವಿ-ಬೆಳಗಾವಿಯ ಕಿಲ್ಲಾ ಕೆರೆಯಲ್ಲಿ ಮುಳುಗುತ್ತಿದ್ದ ಮಹಿಳೆಯನ್ನು ನೋಡಿದ ತಕ್ಷಣ ಉತ್ತರ ಸಂಚಾರ ಪೊಲೀಸ್ ಠಾಣೆಯ ಸಿಬ್ಬಂದಿ ಕಾಶಿನಾಥ ಇರಗಾರ ಬ.ನಂ 1769 ರವರು ಒಂದು ಕ್ಷಣವೂ ಯೋಚಿಸದೇ ಕೆರೆಯಲ್ಲಿ ಜಿಗಿದು ಯುವತಿಯ ಪ್ರಾಣ ರಕ್ಷಿಸಿದ್ದಾರೆ.
ಬೆಳಗಾವಿಯ ಅಶೋಕ ವೃತ್ತದಲ್ಲಿ ಕರ್ತವ್ಯದಲ್ಲಿದ್ದ ಟ್ರಾಫಿಕ್ ಪೋಲೀಸ್ ಕಾಶಿನಾಥ್ ಜೀವದ ಹಂಗು ತೊರೆದು ಕೆರೆಯಲ್ಲಿ ಜಿಗಿದು ಮಹಿಳೆಯನ್ನು ರಕ್ಷಣೆ ಮಾಡುವ ಮೂಲಕ ಜನ ಮೆಚ್ಚುಗೆಗೆ ಪಾತ್ರನಾಗಿದ್ದಾನೆ.
ಸಿಬ್ಬಂದಿಯ ಸಮಯಪ್ರಜ್ಞೆಯಿಂದ ಸಾರ್ವಜನಿಕ ವಲಯದಲ್ಲಿ ಇಲಾಖೆಯ ವರ್ಚಸ್ಸು ಇಮ್ಮಡಿ ಆಗಿದ್ದು, ಈ ಶ್ಲಾಘನೀಯ ಕಾರ್ಯವನ್ನು ಮಾನ್ಯ ಪೊಲೀಸ್ ಆಯುಕ್ತರು ಮುಕ್ತಕಂಠದಿಂದ ಪ್ರಶಂಸಿಸಿ ನಗದು ಬಹುಮಾನ ಘೋಷಿಸಿದ್ದಾರೆ.
ಬೆಳಗಾವಿ ಸುದ್ದಿ | Belagavi Suddi | Belagavi News ಸಮಸ್ಯಗೆ ಸ್ಪಂದನೆ