ಬೆಳಗಾವಿ- ಬೆಳಗಾವಿ ನಗರ ಪೋಲೀಸ್ ಇಲಾಖೆಯ ಅಧಿಕಾರಿಗಳು ತಮ್ಮ ಇಲಾಖೆಯನ್ನು ಇನ್ನಷ್ಟು ಜನಸ್ನೇಹಿಗೊಳಿಸಲು ಇವತ್ತು ನಗರದಲ್ಲಿ ವಿನೂತನ ಕಾರ್ಯಕ್ರಮ ನಡೆಸುವ ಮೂಲಕ ಎಲ್ಲರ ಗಮನ ಸೆಳೆದರು.
ಬೆಳಗಾವಿ ನಗರದ ಎಲ್ಲ ಪೊಲೀಸ್ ಠಾಣೆಗಳಲ್ಲಿ ಈ ದಿನ “ತೆರೆದ ಮನೆ” (Open House) ಕಾರ್ಯಕ್ರಮ ಕೈಗೊಂಡು ಶಾಲೆಯ ವಿದ್ಯಾರ್ಥಿಗಳನ್ನು ಠಾಣೆಗೆ ಬರಮಾಡಿಕೊಂಡು ಪೊಲೀಸ್ ಇಲಾಖೆಯ ಬಗ್ಗೆ ವಿವರವಾದ ಮಾಹಿತಿಯನ್ನು ನೀಡಲಾಯಿತು.
ಅಲ್ಲದೇ ಮಹಿಳೆ ಮತ್ತು ಮಕ್ಕಳ ಹಕ್ಕುಗಳು ಹಾಗೂ ಕಾಯ್ದೆಗಳ ಬಗ್ಗೆ ಶಾಲಾ ಮಕ್ಕಳಿಗೆ ಅರಿವು ಮೂಡಿಸಲಾಯಿತು.ಪೋಲೀಸರನ್ನು ಕಂಡರೆ ಮಕ್ಕಳಿಗೆ ಭಯ ಆದ್ರೆ ಪೋಲೀಸರು ಕೇವಲ ಅಪರಾಧಿಗಳನ್ನು ಮಾತ್ರ ಹೆದರಿಸುತ್ತಾರೆ. ಮುಗ್ದರ ಜೊತೆ ,ನಿರಪರಾಧಿಗಳ ಜೊತೆ ಪೋಲೀಸರು ಜನಸಾಮಾನ್ಯರಂತೆ ವರ್ತಿಸುತ್ತಾರೆ.ಪೋಲೀಸರ ಬಗ್ಗೆ ಎಲ್ಲರಿಗೂ ಭಯ ಬೇಡ ಎನ್ನುವ ತಿಳುವಳಿಕೆ ನೀಡುವದಕ್ಕಾಗಿಯೇ ಪೋಲೀಸರು ಇವತ್ತು ಬೆಳಗಾವಿ ನಗರದ ಎಲ್ಲ ಠಾಣೆಗಳಲ್ಲಿ ಶಾಲಾ ಮಕ್ಕಳನ್ನು ಕರೆಯಿಸಿ ಈ ವಿನೂತನ ಕಾರ್ಯಕ್ರಮಕ್ಕೆ ಚಾಲನೆ ನೀಡಿದ್ರು.
ಶಾಲಾ ಮಕ್ಕಳೂ ಸಹ ಇನೆಸ್ಪೆಕ್ಟರ್ ಗಳ ಜೊತೆ ಪೋಲೀಸ್ ಸಿಬ್ಬಂಧಿಗಳ ಜೊತೆ ಇವತ್ತು ನಿರ್ಭಿಡವಾಗಿ ಕೆಲವು ಗಂಟೆಕಾಲ ಕಾಲ ಕಳೆಯುವ ಮೂಲಕ ಎಂಜಾಯ್ ಮಾಡಿದ್ರು..