ಬೆಳಗಾವಿ–ಇತ್ತೀಚಿಗೆ ಬೆಳಗಾವಿ ನಗರದ ಶಿವಬಸವ ನಗರದ ಸ್ಪಂದನ ಆಸ್ಪತ್ರೆ ಬಳಿ ಮೂವರು ಜನ ಯುವಕರು ಬೈಕ್ ಮೇಲೆ ಬಂದು ಯುವಕನನ್ನು ಕಲ್ಲಿನಿಂದ ಜಜ್ಜಿ ಕೊಲೆ ಮಾಡಿದ ಹಂತಕರ ಬಗ್ಗೆ ಪೋಲೀಸರಿಗೆ ಸುಳಿವು ಸಿಕ್ಕಿದೆ ಎಂದು ತಿಳಿದು ಬಂದಿದೆ.
ಬೆಳಗಾವಿಯ ನಾಗರಾಜ್ ಗಾಡಿವಡ್ಡರ್ ಎಂಬ ಯುವಕಕನ್ನು ಮೊನ್ನೆ ರಾತ್ರಿ ಬರ್ಬರವಾಗಿ ಹತ್ಯೆ ಮಾಡಲಾಗಿತ್ತು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ ಮಾಳಮಾರುತಿ ಠಾಣೆಯ ಪೋಲೀಸರು ತ್ವರಿತಗತಿಯ ವಿಚಾರಣೆ ಮಾಡಿ ಆರೋಪಿಗಳನ್ನು ಪತ್ತೆ ಮಾಡಿದ್ದಾರೆ ಎಂಬ ಮಾಹಿತಿ ಬೆಳಗಾವಿ ಸುದ್ದಿ ಡಾಟ್ ಕಾಮ್ ಗೆ ಸಿಕ್ಕಿದೆ.
ಮಾಳಮಾರುತಿ ಸಿಪಿಐ ಕಾಳಿಮಿರ್ಚಿ ಅವರ ನೇತ್ರತ್ವದ ಪೋಲೀಸರ ತಂಡ ಅಲ್ಪಾವಧಿಯಲ್ಲೇ ಕೊಲೆ ಪ್ರಕರಣವನ್ನು ಭೇದಿಸಿದ್ದಾರೆ ಎಂದು ನಂಬಲರ್ಹ ಮೂಲಗಳಿಂದ ಗೊತ್ತಾಗಿದೆ.
ಯುವಕನ ಕೊಲೆ ಮಾಡಿದ ಹಂತಕರು ಬೆಳಗಾವಿಯಿಂದ ಪರಾರಿಯಾಗಿದ್ದರು ಈ ಹಂತಕರನ್ನು ಪಕ್ಕದ ಮಹಾರಾಷ್ಡ್ರದಲ್ಲಿ ಮಾಳಮಾರುತಿ ಪೋಲೀಸರು ವಶಕ್ಕೆ ಪಡೆದಿದ್ದಾರೆ ಎಂದು ಹೇಳಲಾಗುತ್ತಿದೆ.ಈ ಕುರಿತು ಅಧಿಕೃತ ಮಾಹಿತಿ ಸಿಗುವದಷ್ಟೇ ಬಾಕಿ ಇದೆ.
ಬೆಳಗಾವಿ ಸುದ್ದಿ | Belagavi Suddi | Belagavi News ಸಮಸ್ಯಗೆ ಸ್ಪಂದನೆ