ಬೆಳಗಾವಿ- ಬೆಳಗಾವಿ ಮಹಾ
ನಗರ ವ್ಯಾಪ್ತಿಯಲ್ಲಿ ಮಾದಕ ವಸ್ತುಗಳನ್ನು ಮಾರಾಟ ಮಾಡುವ ಜಾಲದ ವಿರುದ್ಧ ಬೆಳಗಾವಿ ಪೋಲೀಸರು ಸಮರ ಸಾರಿದ್ದಾರೆ.
ಹಿರೇಬಾಗೇವಾಡಿ ಪೊಲೀಸರಿಂದ ಇಬ್ಬರು ಗಾಂಜಾ ಮಾರಾಟಗಾರರ ಬಂಧನ ಮಾಡಲಾಗಿದ್ದು 32580 ಮೌಲ್ಯದ ಗಾಂಜಾ ಹಾಗೂ ಇತರೆ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ.
ಬೆಳಗಾವಿ ನಗರದ ಹಿರೆಬಾಗೇವಾಡಿ ಪೊಲೀಸ್ ಠಾಣಾ ಹದ್ದಿಯ ಮುತ್ನಾಳ ಗ್ರಾಮದ ಹತ್ತಿರ ಗಾಂಜಾ ಮಾರಾಟ ಮಾಡಲು ಬಂದ ಇಬ್ಬರು ಆರೋಪಿತರ ಮೇಲೆ ಹಿರೇಬಾಗೇವಾಡಿ ಪೊಲೀಸರು ದಾಳಿ ಮಾಡಿದ್ದಾರೆ. ಪೊಲೀಸ್ ಇಸ್ಪೆಕ್ಟರ್ ಗುರುಶಾಂತ ದಾಶ್ಯಾಳ ನೇತ್ರತ್ವದಲ್ಲಿ ಸಿಬ್ಬಂದಿಯವರು ದಾಳಿ ಮಾಡಿದ್ದು ಆರೋಪಿತರಾದ,
1)ಭೀಮಪ್ಪ ಮರನಿಂಗಪ್ಪ ಕಲಕೇರಿ (26) ಸಾ. ಕಲ್ಲೂರ ತಾ.ಧಾರವಾಡ2).ಶಿವಾನಂದ ನಾಗಪ್ಪ ಬುಡ್ರಕಟ್ಟಿ (21) ಸಾ. ಕಲ್ಲೂರ ತಾ.ಧಾರವಾಡಇವರನ್ನು ಬಂಧಿಸಿ ಅವರಿಂದ ಒಟ್ಟು 2480ರೂ. ಮೌಲ್ಯದ 248 ಗ್ರಾಂ. ಗಾಂಜಾ ಹಾಗೂ 100 ರೂಪಾಯಿ ರೋಖ ಹಣ ಹಾಗೂ 20,000 ಮೌಲ್ಯದ ಎರಡು ಮೋಬೈಲ, ಕೃತ್ಯಕ್ಕೆ ಬಳಸಿದ ಮೋಟರ್ ಸೈಕಲ್ ಒಂದು ಅ.ಕಿ. 10,000 ಹೀಗೆ ಒಟ್ಟು -32580 ಮೌಲ್ಯದ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ.
ಹಿರೇಬಾಗೇವಾಡಿ ಪೋಲೀಸರ ಕಾರ್ಯವನ್ನು ಪೋಲಿಸ ಆಯುಕ್ತರು ಶ್ಲಾಘಿಸಿರುತ್ತಾರೆ.
ಬೆಳಗಾವಿ ಸುದ್ದಿ | Belagavi Suddi | Belagavi News ಸಮಸ್ಯಗೆ ಸ್ಪಂದನೆ