Breaking News

ಬೆಳಗಾವಿಯಲ್ಲೂ ಹೇರಾಯಿನ್ ಡ್ರಗ್ಸ್ ಮಾರಾಟದ ಜಾಲ ಪತ್ತೆ…

ಬೆಳಗಾವಿ- ಕುಂದಾನಗರಿ ಬೆಳಗಾವಿಯಲ್ಲಿ,ಗಾಂಜಾ, ಪಿನ್ನಿ ಸೇರುದಂತೆ ಹಲವಾರು ಮಾದಕವಸ್ತುಗಳ ಮಾರಾಟ ಮತ್ತು ಸೇವನೆ ವ್ಯಾಪಕವಾಗಿ ನಡೆಯುತ್ತಿರುವ ಬೆನ್ನಲ್ಲಿಯೇ ಬೆಳಗಾವಿಯಲ್ಲಿ ಈಗ ಹೇರಾಯಿನ್ ಡ್ರಗ್ಸ್ ಮಾರಾಟ ಜಾಲವನ್ನು ಬೆಳಗಾವಿ ಪೋಲೀಸರು ಪತ್ತೆ ಮಾಡಿದ್ದಾರೆ.

ಬೆಳಗಾವಿಯಲ್ಲಿ ಗಾಂಜಾ ಸೇರಿದಂತೆ ಇನ್ನಿತರ ಮಾದಕ ವಸ್ತುಗಳ ಮಾರಾಟದ ವಿಚಾರವನ್ನು ಗಂಭೀರವಾಗಿ ಪರಗಣಿಸಿರುವ ಬೆಳಗಾವಿ ನಗರ ಪೋಲೀಸ್ ಆಯುಕ್ತ ಮಾರ್ಟಿನ್ ಅವರು ನಗರದಲ್ಲಿ ವಿಶೇಷ ಕಾರ್ಯಾಚರಣೆ ನಡೆಸಿದ್ದಾರೆ.

ಹಲವಾರು ದಿನಗಳಿಂದ ಡ್ರಗ್ಸ್ ಮಾಫಿಯಾ ವಿರುದ್ಧ ಸಮರ ಸಾರಿರುವ ಬೆಳಗಾವಿ ಪೋಲೀಸರು ಇಂದು ಹೇರಾಯಿನ್ ಡ್ರಗ್ಸ್ ಮಾರಾಟದ ಜಾಲವನ್ನು ಪತ್ತೆ ಮಾಡಿರುವ ಬೆಳಗಾವಿಯ ತಿಲಕವಾಡಿ ಠಾಣೆಯ ಪೋಲೀಸರು 5 ಗ್ರಾಂ 50 ಮೀ ಹೇರಾಯಿನ್ ಪತ್ತೆ ಮಾಡಿ,ಇದನ್ನು ಮಾರಾಟ ಮಾಡುತ್ತಿದ್ದ ಐದು ಜನ ಆರೋಪಿಗಳನ್ನು ಬಂಧಿಸಿದ್ದಾರೆ.

ಆರೋಪಿಗಳಾದ,ಪ್ರಫುಲ್ ಗಜಾನನ ಪಾಟೀಲ,ಸುಶಾಂತ ಗೋವೀಂದ್ ಕಂಗ್ರಾಳಕರ್,ನಾರಾಯಣ ಬಾಬುರಾವ್ ಪಾಟೀಲ,ಸುನೀಲ ಬೈರು ಅಸಲ್ಕರ್,ಸಲ್ಮಾನ್ ಬಬ್ಬರ್ ಮೊಕಾಶಿ ಇವರನ್ನು ಬಂಧಿಸಲಾಗಿದ್ದು,ಬಂಧಿತ ಐದು ಜನ ಆರೋಪಿಗಳು ಬೆಳಗಾವಿಯ ಅನಿಗೋಳ ಪ್ರದೇಶದ ನಿವಾಸಿಗಳಾಗಿದ್ದಾರೆ.

ತಿಲಕವಾಡಿ ಠಾಣೆಯ ಇನೆಸ್ಪೆಕ್ಟರ್  ಪರುಶರಾಮ್ ಪೂಜಾರಿ    ನೇತ್ರತ್ವದ ತಂಡ ಕಾರ್ಯಾಚರಣೆ ನಡೆಸಿ ಡ್ರಗ್ಸ್ ಮಾರಾಟ ಜಾಲವನ್ನು ಪತ್ತೆ ಮಾಡುವಲ್ಲಿ ಯಶಸ್ವಿಯಾಗಿದೆ.

Check Also

ನಾನು ಗಟ್ಟಿಯಾಗಿದ್ದೇನೆ ಎಂದು ಹೊರಗಡೆ ಇದ್ದೇನೆ- ರಮೇಶ್ ಜಾರಕಿಹೊಳಿ

ಅಥಣಿ-ಬಿಜೆಪಿ ಶಾಸಕ ಮುನಿರತ್ನ ಅರೆಸ್ಟ್ ವಿಚಾರಅಥಣಿಯಲ್ಲಿ ರಮೇಶ್ ಜಾರಕಿಹೊಳಿ ಪ್ರತಿಕ್ರಿಯೆ ನೀಡಿದ್ದು,ದಲಿತರಿಗೆ ಒಕ್ಕಲಿಗರಿಗೆ ಬೈದರಿಯುವದು ಇನ್ನೂ ಪ್ರೂವಾಗಿಲ್ಲ.ಇದನ್ನು ಸಿಡಿ ಶಿವು …

Leave a Reply

Your email address will not be published. Required fields are marked *

Sahifa Theme License is not validated, Go to the theme options page to validate the license, You need a single license for each domain name.