ಬೆಳಗಾವಿ-ಗೋವಾ ಪಾಸಿಂಗ್ ಇರುವ ಕಾರುಗಳನ್ನು ಕಳ್ಳತನ ಮಾಡಿ ಬೆಳಗಾವಿಗೆ ತಂದು ಮಾರಾಟ ಮಾಡುತ್ತಿದ್ದ ದೊಡ್ಡ ಮೋಸದ ಜಾಲವನ್ನು ಪತ್ತೆ ಮಾಡಿರುವ ಬೆಳಗಾವಿ ಪೋಲಿಸರು ಇಬ್ಬರು ಆರೊಪಿಗಳನ್ನು ಬಂಧಿಸಿ ವಿವಿಧ ಕಂಪನಿಗಳ 37 ಕಾರುಗಳನ್ನು ವಶಪಡಿಸಿಕೊಂಡಿದ್ದಾರೆ
ಗೋವಾ ಪಾಸಿಂಗ್ ಇರುವ ಇನೋವಾ,ಸ್ಕಾರ್ಪಿಯೋ,ಸ್ವಿಪ್ಟ,ಸೇರಿದಂತೆ ಸುಮಾರು ಎರಡು ಕೋಟಿ 30 ಲಕ್ಷ ರು ಬೆಲೆಬಾಳುವ 37 ಕಾರುಗಳನ್ನು ವಶಪಡಿಸಿಕೋಡಿರುವ ಸಿಸಿಬಿ ಪೋಲಿಸರು ಈ ಮೋಸದ ದಂಧೆಯಲ್ಲಿ ತೊಡಗಿದ್ದ ಬೆಳಗಾವಿಯ ರವಿವಾರ ಪೇಠೆಯ ನವೀದ ನಜಫ್ ಅಲಿ ಖತೀಬ,ಮುದ್ದೇಬಿಹಾಲ ತಾಲೂಕಿನ ಪರಶರಾಮ ಮಾಂತಪ್ಪ ಕುಂಬಾರ ಎಂಬಾತರನ್ನು ಬಂಧಿಸಿ ನ್ಯಾಯಾಂಗ ವಶಕ್ಕೆ ವಪ್ಪಿಸಿದ್ದಾರೆ
ಪೋಲಿಸರು ವಶಪಡಿಸಿಕೊಂಡಿರುವ ಈ ವಾಹನಗಳನ್ನು ಗೋವಾದಿಂದ ತರಲಾಗಿದೆ ಇಲ್ಲಿ ಕಡಿಮೆ ದರದಲ್ಲಿ ಮಾರಾಟ ಮಾಡಲಾಗಿದೆ ಕೆಲವರಿಗೆ ಒಂದು ಲಕ್ಷ ಅಥವಾ ಎರಡು ಲಕ್ಷ ರೂ ಪಡೆದು ಲೀಜ್ ಮೇಲೆ ಕೊಡಲಾಗಿತ್ತು ಈ ಕಾರುಗಳನ್ನು ಕಳ್ಳತನ ಮಾಡಿ ಬೆಳಗಾವಿಗೆ ತರಲಾಗಿತ್ತೋ ಅಥವಾ ಬೇರೆ ವಾಮ ಮಾರ್ಗದಿಂದ ತರಲಾಗಿತ್ತೋ ಅನ್ನೋದು ತನಿಖೆಯಿಂದ ಗೊತ್ತಾಗಬೇಕಾಗಿದೆ ಈ ಕುರಿತು ಗೋವಾ ಪೋಲಿಸರನ್ನು ಸಂಪರ್ಕ ಮಾಡಿ ಮಾಹಿತಿ ಪಡೆಯಲಾಗುತ್ತಿದೆ ಎಂದು ನಗರ ಪೋಲಿಸ್ ಆಯುಕ್ತ ಕೃಷ್ಣಭಟ್ ತಿಳಿಸಿದರು.
ಸಿಸಿಬಿ ಸಿಪಿಐ ಬಿ ಆರ್ ಗಡ್ಡೇಕರ ಹಾಗು ಬೆಳಗಾವಿ ಸಿಸಿಬಿ ಪೋಲಿಸರ ತಂಡ ಮಿಂಚಿನ ಕಾರ್ಯಾಚರಣೆ ನಡೆಸಿ ಈ ಮೋಸದ ಜಾಲವನ್ನು ಪತ್ತೆ ಮಾಡಿದೆ ಕಾರ್ಯಾಚರಣೆಯಲ್ಲಿಎಸ್ ಎಲ್ ದೇಶನೂರ,ನಾಯ್ಕ ಮಾಳಗಿ, ಶಂಕರ ಪಾಟೀಲ, ವಿಜಯ ಬಡವನ್ನವರ ಮೊದಲಾದವರು ಭಾಗವಹಿಸಿದ್ದರು
Check Also
ವೀಕ್ಲಿ ಮ್ಯಾರೇಜ್,ಇದು ಲಕ್ಷ ಲಕ್ಷ ರೂಗಳ ಪ್ಯಾಕೇಜ್ ಹುಡುಗರ ಲೈಫ್ ಡ್ಯಾಮೇಜ್ …..!!!
ಬೆಳಗಾವಿ – ಹೆಣ್ಣು ಮಕ್ಕಳ ಮಾರಾಟ ಆಯ್ತು,ಹನಿ ಟ್ರ್ಯಾಪ್ ಗೋಳಾಟ ಆಯ್ತು ಈಗ ಹೊಸದೊಂದ ಆಟ ಶುರುವಾಗಿದೆ ಇದು ಮದ್ಯ …