ತೆರೆದ ಡ್ರೈನೆಜ್ ರಿಪೇರಿ ಮಾಡುವಂತೆ ಆಗ್ರಹಿಸಿ ಬೆಳಗಾವಿಯಲ್ಲಿ ಮಾಜಿ ಮೇಯರ್ ವಿಜಯ ಮೋರೆ ವಿಭಿನ್ನ ರೀತಿಯಲ್ಲಿ ಪ್ರತಿಭಟನೆ ಮಾಡಿದ್ದಾರೆ. ನಗರದ ಬಿಮ್ಸ್ ಆಸ್ಪತ್ರೆಯ ತುರ್ತು ನಿಗಾ ಘಟಕದ ಮುಂಭಾಗದಲ್ಲಿಯೇ ಡ್ರೈನೆಜ್ ಓಪನ್ ಆಗಿದೆ. ಕಳೆದ ಅನೇಕ ದಿನಗಳಿಂದ ಡ್ರೈನೆಜ್ ಇದೇ ಸ್ಥಿತಿಯಲ್ಲಿ ಯಾವೊಬ್ಬ ಅಧಿಕಾರಿಯು ಇದನ್ನು ಗಮನಿಸಿರಲಿಲ್ಲ. ಇದರಿಂದ ಆಕ್ರೋಶಗೊಂಡ ವಿಜಯ ಮೋರೆ ಇಂದು ತೆರೆದ ಡ್ರೈನೆಜಗೆ ಕಾಯಿ ಒಡೆದು ಕರ್ಪೂರ್, ಊದಿನಕಡ್ಡಿ ಬೆಳಗಿ ಪೂಜೆ ಸಲ್ಲಿಸಿದ್ರು. ಈ ಮೂಲಕ ಬಿಮ್ಸ್ ಹಾಗೂ ಪಾಲಿಕೆಯ ಅಧಿಕಾರಿಗಳ ವಿರುದ್ಧ ತಮ್ಮ ಆಕ್ರೋಶ ಹೊರ ಹಾಕಿದ್ದರು. ಪಾಲಿಕೆ ಅನಾಹುತ ಸಂಭವಿಸುವ ಮೂಲಕ ಎಚ್ಚೆತ್ತು ತೆರೆದ ಡ್ರೈನೆಜ್ ರಿಪೇರಿ ಮಾಡಬೇಕಿದೆ ಎಂದು ಆಗ್ರಹಿಸಿದ್ರು.
Check Also
ಕರ್ನಾಟಕ ರಾಜ್ಯೋತ್ಸವ: ನಾಳೆ ಮಂಗಳವಾರ ಪೂರ್ವಭಾವಿ ಸಭೆ
ಬೆಳಗಾವಿ, -ಕರ್ನಾಟಕ ರಾಜ್ಯೋತ್ಸವ ದಿನಾಚರಣೆಯನ್ನು ನವಂಬರ್ 1, 2024 ರಂದು ಆಚರಿಸುತ್ತಿರುವ ಹಿನ್ನೆಲೆಯಲ್ಲಿ ಮಂಗಳವಾರ (ಅಕ್ಟೋಬರ್ 8) ಜಿಲ್ಲಾ ಪಂಚಾಯತ …