ಬೆಳಗಾವಿ-ಸಂಡೇ ಎಲ್ಲ ನಾಯಕರು ರಜಾ ಮೂಡ್ ನಲ್ಲಿದ್ದರು ಸಂಡೇ ಸಂಜೆ ಕರ್ನಾಟಕ ರಾಜ್ಯ ಬಿಜೆಪಿ ಉಸ್ತುವಾರಿ ಅರುಣ ಸಿಂಗ್ ಬೆಳಗಾವಿ ಪ್ರವಾಸಿ ಮಂದಿರಕ್ಕೆ ಬರುತ್ತಿದ್ದಂತೆಯೇ ಬೆಳಗಾವಿ ಜಿಲ್ಲೆಯ ಬಹುತೇಕ ಎಲ್ಲ ಬಿಜೆಪಿ ನಾಯಕರು ಅಲ್ಲಿಗೆ ದೌಡಾಯಿಸಿದರು.
ಸಂಜೆ 6 ಗಂಟೆಗೆ ಮಾಜಿ ಸಚಿವ ರಮೇಶ್ ಜಾರಕಿಹೊಳಿ ಅವರು ಬೆಳಗಾವಿಯ ಸರ್ಕ್ಯೂಟ್ ಹೌಸ್ ಗೆ ಬಂದ್ರು,ಅರುಣ್ ಸಿಂಗ್ ಅವರು ರಮೇಶ್ ಜಾರಕಿಹೊಳಿ ಅವರ ಜೊತೆ ಸುಮಾರು ಒಂದು ಗಂಟೆ ಕಾಲ ಪ್ರತ್ಯೇಕವಾಗಿ ಚರ್ಚೆ ಮಾಡಿದ್ರು,ಒಳಗಡೆ ಇಬ್ಬರು ನಾಯಕರ ಚರ್ಚೆ ನಡೆಯುತ್ತಿದ್ದರೆ, ಹೊರಗಡೆ ಹಾಲ್ ನಲ್ಲಿ, ಶಾಸಕ ಅನೀಲ ಬೆನಕೆ,ಮಹೇಶ್ ಕುಮಟೊಳ್ಳಿ,ಸಂಸದೆ ಮಂಗಲಾ ಅಂಗಡಿ,ಜಿಲ್ಲಾ ಉಸ್ತುವಾರಿ ಸಚಿವ ಗೋವಿಂದ್ ಕಾರಜೋಳ,ಎಂ.ಬಿ ಝಿರಲಿ,ಉಜ್ವಲಾ ಬಡವನ್ನಾಚೆ ಸೇರಿದಂತೆ ಹಲವಾರು ಜನ ಬಿಜೆಪಿ ನಾಯಕರು ಇದ್ದರು.
ಅರುಣ್ ಸಿಂಗ್ ರಮೇಶ್ ಜಾರಕಿಹೊಳಿ ಅವರ ಜೊತೆ ಚರ್ಚೆ ಮುಗಿಸಿ ಹೊರಗೆ ಬಂದ ಬಳಿಕ ಸಚಿವ ಗೋವೀಂದ್ ಕಾರಜೋಳ ಅವರನ್ನು ಕರೆದುಕೊಂಡು ಮತ್ತೆ ಒಳಗಡೆ ಹೋಗಿ ಕೆಲಕಾಲ ಚರ್ಚೆ ಮಾಡಿ ಹೊರಗೆ ಬಂದ್ರು.
ನಂತರ ಮಾದ್ಯಮಗಳ ಜೊತೆ ಮಾತನಾಡಿದ ಅರುಣ ಸಿಂಗ್ ಬೆಳಗಾವಿ ಜಿಲ್ಲೆಯ ಬಿಜೆಪಿ ನಾಯಕರಲ್ಲಿ ಯಾವುದೇ ಭಿನ್ನಾಭಿಪ್ರಾಯ ಇಲ್ಲ ಅಂತಾ ಹೇಳಿದ್ರು ಪತ್ರಿಕಾಗೋಷ್ಢಿ ಮುಗಿದ ಬಳಿಕ ಸರ್ಕ್ಯೂಟ್ ಹೌಸ್ ನಲ್ಲಿ ಮತ್ತೊಂದು ಸುತ್ತಿನ ಹೈ ವೋಲ್ಟೇಜ್ ಪಾಲಿಟೀಕ್ಸ್ ನಡೆಯಿತು.ಮಾಜಿ ಡಿಸಿಎಂ ಲಕ್ಷ್ಮಣ ಸವದಿ ಸರ್ಕ್ಯುಟ್ ಹೌಸ್ ಗೆ ಆಗಮಿಸಿ ಅರುಣ್ ಸಿಂಗ್ ಅವರ ಜೊತೆ ಚರ್ಚೆ ಮಾಡಿದ್ರು.
ಅರುಣ್ ಸಿಂಗ್ ಅವರ ಬೆಳಗಾವಿ ಭೇಟಿ, ಅವರು ಬಿಜೆಪಿ ನಾಯಕರ ಜೊತೆ ನಡೆಸಿದ ಗುಪ್ತ ಸಮಾಲೋಚನೆ,ಈ ಎಲ್ಲ ಸಂಗತಿಗಳನ್ನು ಗಮನಿಸಿದ್ರೆ ಬೆಳಗಾವಿ ಬಿಜೆಪಿಯಲ್ಲಿ ಮಹತ್ವದ ಬೆಳವಣಿಗೆಗಳು ನಡೆಯಬಹುದು ಎನ್ನುವ ಸಂಕೇತಗಳು ಕಾಣಿಸಿಕೊಂಡಿವೆ.
ಗೋಕಾಕ್ ಸಾಹುಕಾರ ರಮೇಶ್ ಜಾರಕಿಹೊಳಿ ಅವರು ಅರುಣ್ ಸಿಂಗ್ ಅವರನ್ನು ಭೇಟಿಯಾದ ಬಳಿಕ ಬೆಂಗಳೂರಿಗೆ ದೌಡಾಯಿಸಿದ್ದು ವಿಶೇಷ.