ಬೆಳಗಾವಿ
– ಬೆಳಗಾವಿ ಡಿಸಿಸಿ ಬ್ಯಾಂಕ್ ಅಧ್ಯಕ್ಷ ಸ್ಥಾನಕ್ಕೆ ಗುದ್ದಾಟ ನಡೆಯುತ್ತದೆಯೋ ಇಲ್ಲವೋ ಗೊತ್ತಿಲ್ಲ,ಆದ್ರೆ ಖಾನಾಪೂರ ಕ್ಷೇತ್ರದ ಪಿಕೆಪಿಎಸ್ ಪ್ರತಿನಿಧಿಯಾಗಲು ಗುದ್ದಾಟ ಈಗಲೂ ನಡೆಯುತ್ತಿದೆ.
ಡಿಸಿಎಂ ಲಕ್ಷ್ಮಣ ಸವದಿ ಇವತ್ತು ಬೆಳಿಗ್ಗೆಯಿಂದಲೇ ಬಿ.ಕೆ ಮಾಡೆಲ್ ಹೈಸ್ಕೂಲ್ ಎದುರು ಐನಾಕ್ಸ್ ಚಿತ್ರಮಂದಿರದ ಎದುರು,ಖರ್ಚಿ ಹಾಕಿ ಕುಳಿತುಕೊಂಡು ಖಾನಾಪೂರ ಕ್ಷೇತ್ರದ ಮತದಾನದ ಮೇಲೆ ವಿಶೇಷ ಗಮನ ಹರಿಸಿದ್ದರು.
ಡಿಸಿಎಂ ಲಕ್ಷ್ಮಣ ಸವದಿ ಅವರ ಜೊತೆ ಗುರುತಿಸಿಕೊಂಡಿರುವ ಮಹಾಂತೇಶ ಕವಟಗಿಮಠ, ಸಂಸದ ಅಣ್ಣಾಸಾಹೇಬ್ ಜೊಲ್ಲೆ ಲಕ್ಷ್ಮಣ ಸವದಿ ಅವರ ಜೊತೆಗಿದ್ದರು.
ಖಾನಾಪೂರ ಕ್ಷೇತ್ರದ 50 ಮತಗಳ ಪೈಕಿ 48 ಮತಗಳು ಚಲಾವಣೆಯಾಗಿವೆ,ಇಬ್ಬರು ಮತದಾರರು ಕೋರ್ಟ್ ಮೊರೆ ಹೋಗಿದ್ದು ನಾಲ್ಕು ಗಂಟೆಯ ಒಳಗೆ ಕೋರ್ಟ್ ಆದೇಶ ಪಡೆದು ಅವರೂ ಮತದಾನ ಮಾಡುವ ಸಾಧ್ಯತೆ ಇದೆ.
ನಾಲ್ಕು ಗಂಟೆಯ ನಂತರ ಮತ ಎಣಿಕೆ ಶುರುವಾಗಲಿದ್ದು ಈಗ ಸದ್ಯ ಬೆಳಗಾವಿಯ ಸರ್ಕ್ಯುಟ್ ಹೌಸ್ ನಲ್ಲಿ ಬೆಳಗಾವಿ ಜಿಲ್ಲೆಯ ರಾಜಕಾರಣ ವನ್ನೇ ಉಲ್ಟಾ ಪಲ್ಟಾ ಮಾಡುವ ಬೆಳವಣಿಗೆಗಳು ನಡೆದಿವೆ.ಡಿಸಿಎಂ ಲಕ್ಷ್ಮಣ ಸವದಿ,ಜಿಲ್ಲಾ ಉಸ್ತುವಾರಿ ಸಚಿವ ರಮೇಶ್ ಜಾರಕಿಹೊಳಿ ಅವರು ಸಮಾಲೋಚಣೆ ನಡೆಸಿದ್ದು,ಸರ್ಕ್ಯುಟ್ ಹೌಸ್ ಗೆ ಖಾನಾಪೂರ ಶಾಸಕಿ ಅಂಜಲಿ ನಿಂಬಾಳ್ಕರ್ ಆಗಮಿಸಿದರೆ,ಎಂಈಎಸ್ ಮಾಜಿ ಶಾಸಕ ಅರವಿಂದ್ ಪಾಟೀಲ್ ಸರ್ಕ್ಯುಟ್ ಹೌಸ್ ನಿಂದ ಜಾಗ ಖಾಲಿ ಮಾಡಿದ್ದಾರೆ.
ಈ ಎಲ್ಲ ಬೆಳವಣಿಗೆಗಳ ಮೇಲೆ ಕಣ್ಣಲ್ಲಿ ಕಣ್ಣಿಟ್ಟು ಗಮನಿಸಿದರೆ,ಖಾನಾಪೂರದಲ್ಲಿ ಅಂಜಲಿ ಗೆಲವು ಸಾಧಿಸಬಹುದು ಎಂದು ಗೊತ್ತಾಗುತ್ತಿದೆ.
ಶಾಸಕಿ ಅಂಜಲಿ ನಿಂಬಾಳ್ಕರ್ ಜಿಲ್ಲಾ ಉಸ್ತುವಾರಿ ಸಚಿವ ರಮೇಶ್ ಜಾರಕಿಹೊಳಿ ಅವರನ್ನು ಭೇಟಿಯಾಗಿ ಚರ್ಚೆ ಮಾಡುತ್ತಿದ್ದು,ನಾಲ್ಕು ಗಂಟೆಯ ಬಳಿಕ ಫಲಿತಾಂಶ ಹೊರಬೀಳಲಿದೆ.ಆವಾಗಲೇ ಸ್ಪಷ್ಡ ಚಿತ್ರಣ ಗೊತ್ತಾಗಲಿದೆ.