ಬೆಳಗಾವಿ- ಬೆಳಗಾವಿಯಲ್ಲಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಕೋವೀಡ್ ಕುರಿತು ಮಹತ್ವದ ಹೇಳಿಕೆ ನೀಡಿದ್ದಾರೆ.
ಬೆಳಗಾವಿಯಲ್ಲಿ ಸುದ್ಧಿಗಾರರ ಜೊತೆ ಮಾತನಾಡಿದ ಅವರು, ಬೆಂಗಳೂರಿನಲ್ಲಿ ಹತ್ತು ಹೊಸ ಕೋವಿಡ್ ಸೆಂಟರ್ ತೆರೆಯಲು ತೀರ್ಮಾನಿಸಿದ್ದೇವೆ,ಹತ್ತು ಹೊಸ ಕೋವಿಡ್ ಸೆಂಟರ್ ನಲ್ಲಿ 1500 ಬೆಡ್ ವ್ಯವಸ್ಥೆ ಮಾಡ್ತಿದ್ದೇವೆ,ಬೆಂಗಳೂರು ಕೇಂದ್ರಿಕರಿಸಿ 1500 ಬೆಡ್ ವ್ಯವಸ್ಥೆ ಮಾಡಲಾಗುತ್ತಿದೆ,ಕೊರೊನಾ ಸೋಂಕು ತಡೆಗೆ ಸಾರ್ವಜನಿಕರ ಸಹಕಾರ ಅಗತ್ಯ,ಎಂದು ಸಿಎಂ ಹೇಳಿದರು.
ಲೋಕಸಭೆ ಉಪಚುನಾವಣೆ ಪ್ರಚಾರಾರ್ಥ ಇವತ್ತು ಗೋಕಾಕ, ಅರಬಾಂವಿಗೆ ಹೊರಟಿದ್ದೇನೆ,ಜಾರಕಿಹೊಳಿ ಬ್ರದರ್ಸ್ ಸಹಕಾರ ಕೊಡ್ತಿದ್ದಾರೆ,4 ಲಕ್ಷ ಹೆಚ್ಚು ಅಂತರದಿಂದ ಬಿಜೆಪಿ ಅಭ್ಯರ್ಥಿ ಗೆಲುವು ದಾಖಲಿಸಲಿದ್ದಾರೆ,ಎಂದು ವಿಶ್ವಾಸ ವ್ಯೆಕ್ತಪಡಿಸಿದ ಸಿಎಂ ಕೊರೊನಾ ಟಫ್ ರೂಲ್ಸ್ ಬಗ್ಗೆ ಸರ್ವಪಕ್ಷ ಸಭೆಯ ಬಳಿಕವಷ್ಟೇ ತೀರ್ಮಾನಿಸುತ್ತೇವೆ,ಸಭೆಯಲ್ಲಿ ಎಚ್.ಡಿ ಕುಮಾರಸ್ವಾಮಿ ಉತ್ತರ ಕೊಡುತ್ತೆನೆ, ಎಂದು ಸಿಎಂ ಯಡಿಯೂರಪ್ಪ ಹೇಳಿದರು.
ಬೆಳಗಾವಿ ಸುದ್ದಿ | Belagavi Suddi | Belagavi News ಸಮಸ್ಯಗೆ ಸ್ಪಂದನೆ