ಬೆಳಗಾವಿ- ರಾಜ್ಯದ 30 ನೇಯ ಮುಖ್ಯಮಂತ್ರಿಯಾಗಿ ಬಸವರಾಜ್ ಬೊಮ್ಮಾಯಿ ಪ್ರಮಾಣ ವಚನ ಸ್ವೀಕರಿಸಿದ ಬೆನ್ನಲ್ಲಿಯೇ ಬೆಳಗಾವಿಯಲ್ಲಿ ಹೊಸ ರಾಜಕೀಯ ಬಿರುಗಾಳಿ ಬೀಸುತ್ತಿದೆ.ಹೊಸ ಸಿಎಂ ಆಯ್ಕೆಯ ಬಳಿಕ ಯಾವ ಮಂತ್ರಿ ಔಟ್ ಆಗ್ತಾರೆ.ಈ ಬಾರಿ ಮತ್ತೆ ಯಾರಿಗೆ ಗೂಟದ ಕಾರು ಸಿಗುತ್ತದೆ ಎನ್ನುವ ಹೊಸ ಲೆಕ್ಕಾಚಾರ ಬೆಳಗಾವಿ ಜಿಲ್ಲೆಯಲ್ಲಿ ಶುರುವಾಗಿದೆ.
ಹೊಸ ಸಿಎಂ ಹೊಸ ಸಚಿವ ಸಂಪುಟ ರಚನೆ ಮಾಡಲಿದ್ದಾರೆ. ಜೊತೆಗೆ ಬುಡಾ,ಕಾಡಾ,ಅಲ್ಪಸಂಖ್ಯಾತರ ನಿಗಮ ಸೇರಿದಂತೆ ಎಲ್ಲ ನಿಗಮ ಮಂಡಳಿಗಳು ಯಡಿಯೂರಪ್ಪ ಅವರ ರಾಜೀನಾಮೆ ಬಳಿಕ ಸಹಜವಾಗಿ ವಿಸರ್ಜನೆಗೊಂಡಿವೆ. ಹೊಸ ಸಿಎಂ ಹಳೆಯ ಮಂತ್ರಿಗಳನ್ನು ಮುಂದುವರೆಸ್ತಾರಾ..? ಅಥವಾ,ಹೊಸಬರನ್ನು ಆಯ್ಕೆ ಮಾಡ್ತಾರಾ ? ಎನ್ನುವ ಪ್ರಶ್ನೆಗಳು ಕ್ಷಣ ಕ್ಷಣಕ್ಕೂ ಬಿಜೆಪಿ ನಾಯಕರನ್ನು,ಕಾರ್ಯಕರ್ತರನ್ನು ಕಾಡುತ್ತಿವೆ.
ಬೆಳಗಾವಿ ಜಿಲ್ಲೆ ರಾಜಕೀಯ ಭವಿಷ್ಯ ನಿರ್ಧರಿಸುವ ಜಿಲ್ಲೆಯಾಗಿದೆ.ಹೊಸ ಮುಖ್ಯಮಂತ್ರಿಯ ಹೊಸ ಸಚಿವ ಸಂಪುಟದಲ್ಲಿ ಬೆಳಗಾವಿ ಜಿಲ್ಲೆಯ ಯಾವ ಶಾಸಕರು ಮಂತ್ರಿ ಆಗ್ತಾರೆ ,ಯಾರು ಇನ್ ? ಯಾರು ಔಟ್..? ಅನ್ನೋದೆ ಈಗ ಎಲ್ಲರಲ್ಲಿ ತೀವ್ರ ಕುತೂಹಲ ಕೆರಳಿಸಿದೆ.
ರಮೇಶ್ ಜಾರಕಿಹೊಳಿ ಹೊಸ ಸಚಿವ ಸಂಪುಟದಲ್ಲಿ ಮಂತ್ರಿ ಆಗ್ತಾರೆ ಎನ್ನುವ ಸುದ್ಧಿ ಹರಿದಾಡುತ್ತಿದೆ,ಆದ್ರೆ ಕೋರ್ಟ್ ಪ್ರಕ್ರಿಯೆ ಮುಗಿಯುವವರೆಗೂ ರಮೇಶ್ ಜಾರಕಿಹೊಳಿ ಕಾಯಬೇಕಾದ ಅನಿವಾರ್ಯತೆ ಎದುರಾಗಿದೆ.ಶಶಿಕಲಾ ಜೊಲ್ಲೆ ಮೊಟ್ಟೆ ಹಗರಣದ ಸುಳಿಯಲ್ಲಿ ಸಿಲುಕಿ ಮತ್ತೆ ಮಂತ್ರಿ ಆಗೋದು ಡೌಟು,ಕಾಗವಾಡ ಕ್ಷೇತ್ರದ ಶಾಸಕರಾಗಿ ,ಮಹಾರಾಷ್ಟ್ರದಲ್ಲಿ ಮನೆ ಮಾಡಿ ಮಹಾರಾಷ್ಟ್ರದಲ್ಲೇ ವಾಸ ಮಾಡುತ್ತಿರುವ ಶ್ರೀಮಂತ ಪಾಟೀಲ ಮತ್ತೆ ಮಂತ್ರಿಯಾದ್ರೆ,ಅಚ್ಚರಿ.
ಬೆಳಗಾವಿ ಜಿಲ್ಲೆಯಲ್ಲಿ ಶಶಿಕಲಾ ಜೊಲ್ಲೆ,ಶ್ರೀಮಂತ ಪಾಟೀಲ,ಮಂತ್ರಿ ಸ್ಥಾನ ಕಳೆದುಕೊಳ್ಳುತ್ತಾರೆ,ಎನ್ನುವ ಚರ್ಚೆ ದಟ್ಟವಾಗಿದೆ.ಗೋವೀಂದ್ ಕಾರಜೋಳ ಬೆಳಗಾವಿ ಜಿಲ್ಲೆಯ ಉಸ್ತುವಾರಿ ಸಚಿವರಾಗಿ ಮುಂದುವರೆಯುತ್ತಾರಾ..? ಉಮೇಶ್ ಕತ್ತಿ ಮತ್ತೆ ಮಂತ್ರಿ ಆಗ್ತಾರಾ…? ಎನ್ನುವ ಪ್ರಶ್ನೆಗೆ ಉತ್ತರ ಸಿಗೋದು ಯಾವಾಗ ? ಅನ್ನೋದು ಈಗ ಎಲ್ಲರಲ್ಲಿ ಕುತೂಹಲ ಕೆರಳಿಸಿದೆ.
ಬೆಳಗಾವಿ ದಕ್ಷಿಣ ಮತಕ್ಷೇತ್ರದ ಶಾಸಕ ಅಭಯ ಪಾಟೀಲ ,ಪಿ. ರಾಜೀವ ,ಆನಂದ ಮಾಮನಿ,ದುರ್ಯೋದನ ಐಹೊಳೆ ಮಂತ್ರಿ ಆಗಲು ಲಾಭಿ ನಡೆಸಿದ್ದಾರೆ.ಆದ್ರೆ ಶಾಸಕ ಅಭಯ ಪಾಟೀಲ ಮಾತ್ರ ನಾನು ಮಾಡಿರುವ ಅಭಿವೃದ್ಧಿ ನೋಡಿ ಮಂತ್ರಿ ಸ್ಥಾನ ಕೊಡಿ ಎಂದು ಪಟ್ಟು ಹಿಡಿದಿದ್ದಾರೆ.
ಒಟ್ಟಾರೆ ಹೊಸ ಮುಖ್ಯಮಂತ್ರಿಯ ಆಯ್ಕೆ ಬೆಳಗಾವಿ ಜಿಲ್ಲೆಯಲ್ಲಿ ಹೊಸ ಸಂಚಲನ ಮೂಡಿಸಿದೆ.