ಬೆಳಗಾವಿ-ಬಡವರ ಅನ್ನಭಾಗ್ಯದ ಅಕ್ಕಿಯನ್ನು ಆಕ್ರಮವಾಗಿ ಸಾಗಿಸುತ್ತಿದ್ದ ಜಾಲವನ್ನು ಬೆಳಗಾವಿ ಪೋಲೀಸರು ಪತ್ತೆ ಹಚ್ಚಿದ್ದು,ಬರೊಬ್ಬರಿ 31 ಟನ್ ಪಡಿತರ ಅಕ್ಕಿಯನ್ನು ವಶಪಡಿಸಿಕೊಂಡಿದ್ದಾರೆ.
ಬೆಳಗಾವಿ ಗ್ರಾಮೀಣ ಪೊಲೀಸರಿಂದ ಸುಮಾರು 7 ಲಕ್ಷ ಮೌಲ್ಯದ 31 ಟನ, 320 ಕ್ವಿಂಟಲ ಅಕ್ರಮ ಪಡಿತರ ಅಕ್ಕಿ ವಶಕ್ಕೆ ಪಡೆದಿರುವ ಪೋಲೀಸರು ತನಿಖೆ ಶುರು ಮಾಡಿದ್ದಾರೆ.
ಮೇಲಾಧಿಕಾರಿಗಳ ಮಾರ್ಗದರ್ಶನದಲ್ಲಿ ಪಿಐ ಬೆಳಗಾವಿ ಗ್ರಾಮೀಣ ಠಾಣೆ ಹಾಗೂ ಸಿಬ್ಬಂದಿಯವರು ದಾಳಿ ಮಾಡಿ 1) ವಾಸಿಮ ಮುಜಾವರ ಸಾ. ಹುಂಚ್ಯಾನಟ್ಟಿ 2) ಸಂಜಯ ಭೋಸಲೆ ಸಾ. ಪೀರಣವಾಡಿ ಇವರನ್ನು ವಶಕ್ಕೆ ಪಡೆದು ಅವರು ಅಕ್ರಮವಾಗಿ ಸಂಗ್ರಹಿಸಿಟ್ಟ ರೂ.7,21,050/- ಮೌಲ್ಯದ 31 ಟನ, 320 ಕ್ವಿಂಟಲ ಅಕ್ರಮ ಪಡಿತರ ಅಕ್ಕಿ ಜಪ್ತಿ ಪಡೆಸಿಕೊಂಡು ಆರೋಪಿತರ ವಿರುದ್ಧ ಕಾನೂನು ಕ್ರಮ ಜರುಗಿಸಿದ್ದಾರೆ.
ದಾಳಿ ಕೈಗೊಂಡ ಪಿಐ ಗ್ರಾಮೀಣ ಮತ್ತು ಅವರ ತಂಡವನ್ನು ಪೊಲೀಸ ಆಯುಕ್ತರು, ಡಿಸಿಪಿ ರವರುಗಳು ಶ್ಲಾಘಿಸಿರುತ್ತಾರೆ…
ಬೆಳಗಾವಿ ಸುದ್ದಿ | Belagavi Suddi | Belagavi News ಸಮಸ್ಯಗೆ ಸ್ಪಂದನೆ