ಬೆಳಗಾವಿ- ಬೆಳಗಾವಿ ನಗರದಲ್ಲಿ ರಸ್ತೆ ಅಗಲೀಕರಣ ಕಾಮಗಾರಿ ನಡೆದಾಗ ಅಧಿಕಾರಿಗಳು ಯಾವುದೇ ಮುಲಾಜಿಲ್ಲದೇ ಬಡವರ ಮನೆಗಳ ಮೇಲೆ ಬೋಲ್ಡೇಝರ್ ಚಲಾಯಿಸಿದರು ಬಡವರ ಅಂಗಡಿಗಳಲ್ಲಿ ಜೆಸಿಬಿ ಸೊಂಡೆಯಿಂದ ಅತೀಕ್ರಮಣ ತೆರವು ಮಾಡಿ ರಸ್ತೆ ಅಗಲೀಕರಣ ಮಾಡಿದ್ದು ಬೆಳಗಾವಿಯ ಇತಿಹಾಸ
ಬೆಳಗಾವಿ ಖಾನಾಪೂರ ರಸ್ತೆಯಲ್ಲಿ ಬಸವೇಶ್ವರ ಸರ್ಕಲ್ ನಿಂದ ಪೀರನವಾಡಿ ವರೆಗಿನ ರಸ್ತೆ ಅಗಲೀಕರಣ ಕಾಮಗಾರಿ ನಡೆಯಿತು ಈ ರಸ್ತೆ ಕಾಮಗಾರಿಯನ್ನು ಆಗಿನ ಮಹಾಪೌರರಾಗಿದ್ದ ಕಿರಣ ಸೈನಾಯಕ ಅವರೇ ಉದ್ಘಾಟಿಸಿದ್ದರು ಅದಕ್ಕೆ ಆಗಿನ ಜಿಲ್ಲಾ ಉಸ್ತುವಾರಿ ಸಚಿವ ಸತೀಶ ಜಾರಕಿಹೊಳಿ ಕೂಡ ಸಾಕ್ಷಿಯಾಗಿದ್ದರು
ಬೆಳಗಾವಿ ಖಾನಾಪೂರ ರಸ್ತೆಯಲ್ಲಿದ್ದ ಬಡವರ ಅಂಗಡಿಗಳನ್ನು ಕಿತ್ತೆಸೆಯಲಾಯಿತು ಆದರೆ ಕಾಮಗಾರಿ ಆರಂಭಿಸಿದ್ದ ಕಿರಣ ಸೈನಾಯಕ ಅವರೇ ತಮಗೆ ಸೇರಿದ ಅಂಗಡಿಗಳನ್ನು ತೆರವು ಮಾಡದೇ ಅಭಿವೃದ್ಧಿ ಕಾರ್ಯಕ್ಕೆ ಅಡ್ಡಿ ಮಾಡಿದ ವಿಷಯ ಬೆಳಗಾವಿಯ ಜನತೆಗೆ ಗೊತ್ತಿರುವ ಸಂಗತಿಯಾಗಿದೆ
ಬೆಳಗಾವಿ- ಖಾನಾಪೂರ ರಸ್ತೆಯಲ್ಲಿದ್ದ ಕುಎಣ ಸೈನಾಯಕ ಹಾಗು ಕೆಲವು ಪ್ರಭಾವಿ ಅಂಗಡಿಕಾರರು ತಮ್ಮ ಪ್ರಭಾವ ಬೆಳೆಸಿ ತಮ್ಮ ಅಂಗಡಿಗಳನ್ನು ತೆರವು ಮಾಡದೇ ಹೈಕೋರ್ಟ ಮೊರೆ ಹೋಗಿದ್ದರು ಅದಕ್ಕಾಗಿ ಅಧಿಕಾರಿಗಳು ಅಂಗಡೀಕಾರರು ಕೋರ್ಟ ಮೊರೆ ಹೋಗಿದ್ದಾರೆ ನಾವೇನು ಮಾಡಲು ಸಾಧ್ಯವಿಲ್ಲ ಎಂದು ಪ್ರಭಾವಿ ಅಂಗಡೀಕಾರರನ್ನು ರಕ್ಷಿಸುತ್ತಲೇ ಬಂದಿದ್ದರು
ಆದರೆ ಹೈಕೋರ್ಟಿನಲ್ಲಿ ಅಂಗಡಿಗಳನ್ನು ತೆರವು ಮಾಡುವಂತೆ ಆದೇಶ ಹೊರ ಬಿದ್ದು ನಾಲ್ಕು ತಿಂಗಳು ಗತಿಸಿದರೂ ಲೋಕೋಪಯೋಗಿ ಇಲಾಖೆಯ ಅಧಿಕಾರಿಗಳು ಹೈಕೋರ್ಟ ಆದೇಶವನ್ನು ಕಚೇರಿಯಲ್ಲಿಟ್ಟು ಕವದಿ ಹೊತ್ತು ಮಲಗಿರುವದು ಯಾವ ನ್ಯಾಯ ಸ್ವಾಮಿ
ಬಡವರ ಅಂಗಡಿಗಳನ್ನು ಯಾವುದೇ ಮುಲಾಜಿಲ್ಲದೇ ಅವರಿಗೆ ಪರಿಹಾರ ನೀಡದೇ ಅಂಗಡಿಗಳನ್ನು ಬಡವರ ಮನೆಗಳನ್ನು ಕಿತ್ತು ಬೀಸಾಕ್ತೀರಾ. ಆದರೆ ಪ್ರಭಾವಿಗಳ ಅಂಗಡಿಗಳನ್ನು ತೆರವು ಮಾಡುವಂತೆ ಮಾನ್ಯ ಹೈಕೋರ್ಟ ಆದೇಶ ಮಾಡಿದ ಮೇಲೆಯೂ ಪ್ರಭಾವಿ ವ್ಯೆಕ್ತಿಗಳ ಅಂಗಡಿಗಳನ್ನು ತೆರವು ಮಾಡದ ಲೋಕೋಪಯೋಗಿ ಇಲಾಖೆಯ ಅಧಿಕಾರಿಗಳ ಧೋರಣೆ ಗೆ ಅದ್ಯಾವ ಶಬ್ದಗಳಿಂದ ನಿಂದಿಸಬೇಕೋ ಅನ್ನೋದು ತಿಳಿಯುತ್ತಿಲ್ಲ
ಹೈಕೋರ್ಟ ಆದೇಶ ಬಂದ ಮೇಲೆ ಈ ಅಂಗಡಿಕಾರರು ಸುಪ್ರೀಂ ಕೋರ್ಟ್ ಗೆ ಹೋಗಲು ಸಮಯ ಅವಕಾಶವನ್ನು ನೀಡಿದ ಅಧಿಕಾರಿಗಳು ಅಂಗಡೀಕಾರರಿಗೆ ಸುಪ್ರೀಂ ಕೋರ್ಟಿನಲ್ಲಿ ತಡೆಯಾಜ್ಞೆ ಸಿಕ್ಕಿಲ್ಲ ಅಧಿಕಾರಿಗಳಿಗೆ ನೋಟೀಸ್ ಕೂಡ ಬರದೇ ಇದ್ದರೂ ಅಧಿಕಾರಿಗಳು ಅತೀಕ್ರಮಣ ತೆರವು ಮಾಡದೇ ಇರುವದು ಈ ರಸ್ತೆಯಲ್ಲಿ ಅಂಗಡಿಗಳನ್ನು ಕಳೆದುಕೊಂಡಿರುವ ಬಡ ಅಂಗಡೀಕಾರರ ಕೆಂಗೆಣ್ಣಿಗೆ ಗುರಿಯಾಗಿದೆ
ರಿಗೆ ಒಂದು ನ್ಯಾಯ ರಾಜಕಾರಣಿಗಳಿಗೆ ಮತ್ತು ಪ್ರಭಾವಿ ವ್ಯೆಕ್ತಿಗಳಿಗೆ ಇನ್ನಂದು ನ್ಯಾಯಮಾಡಿ ಅನ್ಯಾಯ ಮಾಡುತ್ತಿರುವ ಲೋಕೋಪಯೋಗಿ ಇಲಾಖೆಯ ಅಧಿಕಾರಿಗಳಿಗೆ ದಿಕ್ಕಾರವಾಗಲಿ ಇದನ್ನು ನೋಡಿ ಜಾನ ಮೌನ ತಾಳಿರುವ ಸ್ಥಳೀಯ ಜನಪ್ರತಿನಿಧಿಗಳಿಗೂ ಹಿರಿಯ ಅಧಿಕಾರಿಗಳಿಗೂ ದಿಕ್ಕಾರ..ದಿಕ್ಕಾರ ದಿಕ್ಕಾರ