Breaking News

ಬೆಳಗಾವಿಯಲ್ಲಿ ATM ಮುಂದೆ ಸರದಿ ಸಾಲು..ಗ್ರಾಹಕರ ದಿಕ್ಕಾಪಾಲು

ಬೆಳಗಾವಿ- ಬೆಳಗಾವಿ ನಗರದ ಎಟಿಎಂ ಗಳ ಮುಂದೆ ಮತ್ತೆ ಸರದಿಯಲ್ಲಿ ನಿಂತು ಹಣ ಪಡೆಯಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ ನಗರದ ಕೆಲವು ಕಡೆ ಎಟಿಎಂ ಗಳ ಮುಂದೆ ಜನ ಕ್ಯು ನಿಂತಿರುವದನ್ನು ಕಂಡರೆ ಇನ್ನು ಕೆಲವು ಕಡೆ ನೋ ಕ್ಯಾಶ್ ಎನ್ನುವ ಫಲಕಗಳು ಕಾಣಿಸುತ್ತಿವೆ

ಕೇಂದ್ರ ಸರ್ಕಾರ 500 ಹಾಗು ಸಾವಿರ ಮುಖ ಬೆಲೆಯ ನೋಟುಗಳನ್ನು ರದ್ದು ಮಾಡಿದ ಬಳಿಕ ಬ್ಯಾಂಕಿನ ಗ್ರಾಹಕರು ಹಲವಾರು ರೀತಿಯ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ ಅಂದಿನಿಂದ ಇಂದಿನವರೆಗೆ ಎಟಿಎಂ ಗಳಲ್ಲಿ ಗ್ರಾಹಕರಿಗೆ ಸರಿಯಾದ ಸೇವೆ ಲಭಿಸುತ್ತಲೇ ಇಲ್ಲ

ನಿಯಮಿತವಾಗಿ ಬೆಳಗಾವಿಯ ಎಟಿಎಂ ಗಳಲ್ಲಿ ಸಿಗುತ್ತಲೇ ಇಲ್ಲ ಕೆಲವು ಕಡೆ ರಿಪೇರಿ ಇದೆ ಅಂತ ಬೋರ್ಡ ಹಾಕುತ್ತಾರೆ ಇನ್ನೊಂದು ಕಡೆ ನೋ ಕ್ಯಾಶ್ ಅಂತ ಬೋರ್ಡ ಹಾಕ್ತಾರೆ ಇನ್ನು ಕೆಲವು ಕಡೆಗಳಲ್ಲಿ ಎಟಿಎಂ ಗಳಿಗೆ ದೊಡ್ಡ ಕೀ ಹಾಕಿರುವ ದೃಶ್ಯ ನಾವು ಬೆಳಗಾವಿ ನಗರದಲ್ಲಿ ದಿನ ನಿತ್ಯ ಕಾಣಬಹುದಾಗಿದೆ

ಇತ್ತಿಚಿಗಷ್ಟೇ ಎಟಿಎಂ ಗಳಿಗೆ ವಾಯರಸ್ ತಗಲಿ ಎಟಿಎಂ ಗ್ರಾಹಕರು ಒಂದೆರಡು ದಿನ ಪರಾದಾಡಿದರು ವಾಯರಸ್ ಕ್ಲಿಯರ್ ಆದ ಬಳಿಕ ಈಗ ಎಟಿಎಂ ಗಳಿಗೆ ನೋ ಕ್ಯಾಶ್ ಎನ್ನುವ ವಾಯರಸ್ ತಗಲಿದೆ ಎಟಿಎಂ ಗಳಿಗೆ ತಗಲಿರುವ ರೋಗಕ್ಕೆ ಔಷಧಿ ನೀಡುವವರು ಯಾರು ಎನ್ನುವ ಪ್ರಶ್ನೆ ಎಲ್ಲ ರಲ್ಲಿ ಕಾಡುತ್ತಿದೆ

Check Also

ಮಂತ್ರಿಗಿರಿ ರೇಸ್ ನಲ್ಲಿ ಬೆಳಗಾವಿಯ ಜಾತ್ಯಾತೀತ ಕುಟುಂಬದ, ಶಾಸಕ!

ಬೆಳಗಾವಿ ಯಾರಿಗೆ ಸೇರಿದ್ದು ಎಂದು ವಿಚಾರಣೆ ಮಾಡಲು ಕೇಂದ್ರ ಸರ್ಕಾರಗಳು ರಚಿಸಿದ ಫಜಲ್ ಅಲಿ,ಆಯೋಗ,ಮಹಾಜನ್ ಆಯೋಗ ಬೆಳಗಾವಿಗೆ ಬಂದಾಗ ಎಲ್ಲ …

Leave a Reply

Your email address will not be published. Required fields are marked *