ಬೆಳಗಾವಿ:
ನಗರದ ಬೆಳಗಾವಿ ಖಾನಾಪೂರ ರಸ್ತೆಯಲ್ಲಿತುವ ಅತ್ಯಂತ ಹಳೆಯದಾದ ರೈಲ್ವೈ ಸೇತುವೆ ಶಿಥಿಲಗೊಂಡು ಅಪಾಯದ ಮಟ್ಟದಲ್ಲಿದ್ದು, ಬುಧವಾರ ರೈಲ್ವೈ ಇಲಾಖೆಯ ಹಿರಿಯ ಅಧಿಕಾರಿಗಳು ಹಾಗೂ ಮಹಾನಗರ ಪಾಲಿಕೆಯ ಅಧಿಕಾರಿಗಳು ಸೇತುವೆಯ ಪರಿಶೀಲನೆ ನಡೆಸಿದರು.
ರೈಲ್ವೆ ಇಲಾಖೆ ಇಂಜಿನಿಯರ್ ಅಮರಗುಂಡಪ್ಪ ಹಾಗೂ ಪಾಲಿಕೆ ಆಯುಕ್ತ ಶಶೀಧರ್ ಕುರೇರ್, ಹಿರಿಯ ಅಭಿಯಂತರ ಆರ್.ಎಸ್. ನಾಯಕ, ಲಕ್ಷ್ಮೀ ನಿಪ್ಪಾಣಿಕರ್ ಸೇರಿದಂತೆ ಅನೇಕ ತಾಂತ್ರಿಕ ತಜ್ಞರು ಸೇತುವೆಯ ಪರಿಶೀಲನೆ ಮಾಡಿದರು.
ಪರಿಶೀಲನೆಯ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಪಾಲಿಕೆ ಆಯುಕ್ತ ಶಶೀಧರ್ ಕುರೇರ್ ಅವರು, ಗೋಗಟೆ ಸರ್ಕಲ್ ಬಳಿಯ ಸೇತುವೆಯನ್ನು 1934 ರಲ್ಲಿ ನಿರ್ಮಿಸಲಾಗಿದೆ. ಸೇತುವೆ ಈಗ ಸಂಪೂರ್ಣವಾಗಿ ಶಿಥೀಲಗೊಂಡಿರುವ ಹಿನ್ನಲೆ ರೈಲ್ವೆ ಇಲಾಖೆ ಈ ಸೇತುವೆಯನ್ನು ನೆಲಸಮ ಮಾಡಿ, ಚತುಷ್ಪದ ರಸ್ತೆಯ ದೊಡ್ಡ ಸೇತುವೆಯನ್ನು ನಿರ್ಮಾಣ ಮಾಡಲು ನಿರ್ಧರಿಸಲಾಗಿದೆ.
12 ಕೋಟಿ 30 ಲಕ್ಷ ರೂ ವೆಚ್ಚದಲ್ಲಿ ಈ ಸೇತುವೆಯನ್ನು ನಿರ್ಮಿಸಲಾಗುತ್ತಿದೆ. ರೈಲ್ವೆ ಇಲಾಖೆಯ ಅನುದಾನದಲ್ಲಿ ಇದನ್ನು ನಿರ್ಮಿಸಲಾಗುತ್ತಿದ್ದು, ಸೇತುವೆ ನಿರ್ಮಾಣಕ್ಕೆ ಶೀಘ್ರದಲ್ಲಿಯೇ ಟೆಂಡರ್ ಪ್ರಕ್ರೀಯೆ ಆರಂಭವಾಗಲಿದೆ. ಇದರ ಜೊತೆಗೆ ಟಿಳಕವಾಡಿಯ ಥರ್ಡ ಗೇಟ್ ರೈಲ್ವೆ ಮೇಲ್ಸೇತುವೆ ಕಾಮಗಾರಿಯು ನಡೆಯಲಿದೆ ಎಂದು ತಿಳಿಸಿದರು.
ಈ ಎರಡು ಸೇತುವೆಗಳ ಕಾಮಗಾರಿಗಳು ಏಕಕಾಲಕ್ಕೆ ನಡೆಯಲಿದ್ದು, ವಾಹನಗಳ ಸಂಚಾರಕ್ಕೆ ಪರ್ಯಾಯ ಮಾರ್ಗ ಗುರುತಿಸಲು ಜಿಲ್ಲಾಧಿಕಾರಿ ಹಾಗೂ ಹಿರಿಯ ಪೊಲೀಸ್ ಅಧಿಕಾರಿಗಳ ಜೊತೆ ಚರ್ಚಿಸಲಾಗುವುದು. ಅಲ್ಲದೇ, ಈ ಒಂದು ಸೇತುವೆಯ ಕಾಮಗಾರಿಯನ್ನು 11 ತಿಂಗಳ ಅವಧಿಯಲ್ಲಿ ಮುಗಿಸುವ ಯೋಜನೆ ಇದೆ ಎಂದು ಹೇಳಿದರು.
ಮುಂದಿನ ದಿನಗಳಲ್ಲಿ ನಗರದ 3ನೇ ರೈಲ್ವೆ ಗೇಟ್ ನವೀಕರಣದ ಅಂಗವಾಗಿ 23 ಕೋಟಿ ವೆಚ್ಚದಲ್ಲಿ ಕಾಮಗಾರಿಗೆ ರಾಜ್ಯ ಸರ್ಕಾರದ ಶೇ.50 ಹಾಗೂ ಕೇಂದ್ರ ಸಕಾರದ ಶೇ. 50 ರಷ್ಟು ಅನುದಾನದಲ್ಲಿ ನಿರ್ಮಿಸುವ ಯೋಜನೆ ಇದೆ. ಈ ಎರಡು ಕಾಮಗಾರಿಗಳು ಮುಗಿದ ಬಳಿಕ ನಗರದ ಪಸ್ಟ್ ಗೇಟ್ ಹಾಗೂ ಸೆಕೆಂಡ್ ಗೇಟ್ ಕಾಮಗಾರಿಗಳನ್ನು ಆರಂಭಿಸಲಾಗುವುದು ಎಂದು ತಿಳಿಸಿದರು.
Check Also
ವೀಕ್ಲಿ ಮ್ಯಾರೇಜ್,ಇದು ಲಕ್ಷ ಲಕ್ಷ ರೂಗಳ ಪ್ಯಾಕೇಜ್ ಹುಡುಗರ ಲೈಫ್ ಡ್ಯಾಮೇಜ್ …..!!!
ಬೆಳಗಾವಿ – ಹೆಣ್ಣು ಮಕ್ಕಳ ಮಾರಾಟ ಆಯ್ತು,ಹನಿ ಟ್ರ್ಯಾಪ್ ಗೋಳಾಟ ಆಯ್ತು ಈಗ ಹೊಸದೊಂದ ಆಟ ಶುರುವಾಗಿದೆ ಇದು ಮದ್ಯ …