ಬೆಳಗಾವಿ- ಬೆಳಗಾವಿ ಜಿಲ್ಲೆಯಲ್ಲಿ ಮುಗಿಲ ಹರಿದು ಬಿದ್ದಿದೆಯೋ ಗೊತ್ತಿಲ್ಲ ಮಳೆ ನಿಲ್ಲುವ ಸ್ಥಿತಿಯಲ್ಲಿ ಇಲ್ಲ ನಿನ್ನೆ ರಾತ್ರಿಯಿಂದ ಧಾರಾಕಾರವಾಗಿ ಸುರುತ್ತಿರುವ ಮಳೆಯಿಂದಾಗಿ ಬೆಳಗಾವಿ ನಗರದ ಜನಜೀವನ ಸಂಪೂರ್ಣವಾಗಿ ಅಸ್ಥವ್ಯೆಸ್ಥವಾಗಿದೆ
ಬೆಳಗಾವಿ ನಗರದ ಚನ್ನಮ್ಮ ವೃತ್ತ ಅಶೋಕ ವೃತ್ತ ಸೇರಿದಂತೆ ಹಲವಾರು ವೃತ್ತಗಳು ಕೆರೆಯ ಸ್ವರೂಪ ಪಡೆದಿವೆ ರಸ್ತೆಗಳು ಹಳ್ಳದ ಸ್ವರೂಪ ಪಡೆದಿವೆ ತಗ್ಗು ಪ್ರದೇಶದ ಬಡಾವಣೆಗಳಲ್ಲಿ ಮನೆಗೆ ನೀರು ನುಗ್ಗಿ ಬೆಳಗಾವಿಯಲ್ಲಿ ಮಳೆ ಅನಾಹುತ ಸೃಷ್ಟಿಸಿದೆ
ಬೆಳಗಾವಿಯ ಪಾಂಗುಳ ಗಲ್ಲಿ ವಡಗಾಂವ ಶಹಾಪೂರ ಸೇರಿದಂತೆ ಹಲವಾರು ಬಡಾವಣೆಗಳಲ್ಲಿ ಮನೆಗೆ ನೀರು ನುಗ್ಗಿದ ಪರಿಣಾಮ ಜನಜೀವನ ಅಸ್ತವ್ಯೆಸ್ಥವಾಗಿದೆ
ನಗರದ ಪ್ರಮುಖ ರಸ್ತೆಗಳಲ್ಲಿ ನೀರು ಹಳ್ಳ ಹರಿದಂತೆ ಹರಿಯುತ್ತಿದೆ ನಿನ್ನೆ ರಾತ್ರಿಯಿಂದ ಸುರಿಯುತ್ತಿರುವ ನಿರಂತರ ಮಳೆಯದಾಗಿ ಕುಂದಾನಗರಿ ನೀರು.. ನೀರಾಗಿದೆ
ಬೆಳಗಾವಿ ಸುದ್ದಿ | Belagavi Suddi | Belagavi News ಸಮಸ್ಯಗೆ ಸ್ಪಂದನೆ