ಬೆಳಗಾವಿ- ಇಂದು ಮಧ್ಯಾಹ್ನ ಎರಡು ಘಂಟೆಗೆ ಬೆಳಗಾವಿಯಲ್ಲಿ ಏಕಾ ಏಕಿ,ಗುಡುಗು ಸಿಡಿಲಿನ ಜೊತೆಗೆ ಮಳೆ ಶುರುವಾಯಿತು,ವಾತಾವರಣ ತಂಪಾಗುವದರ ಜೊತೆಗೆ ತಂಗಾಳಿ ಬೀಸಿತು ಸುಮಾರು ಮೂರು ಗಂಟೆಗಳ ಕಾಲ ನಿರಂತರವಾಗಿ ಮಳೆ ಸುರಿಯಿತು.
ಬೆಳಗಾವಿಯಲ್ಲಿಂದು ಗುಡುಗು, ಸಿಡಿಲಿನ ಆರ್ಭಟದೊಂದಿಗೆ ಅಬ್ಬರದ ಮಳೆ ಸುರಿದಿದ್ದು, ಜನಜೀವನ ಅಸ್ತವ್ಯಸ್ತವಾಗಿದೆ. ಬಿಸಿಲಿನ ಬೇಗೆಯಿಂದ ತತ್ತರಿಸಿದ ಜನತೆಗೆ ಮಳೆ ತಂಪೇರೆದಿದೆ.
ಮಳೆ ಜೊತೆಗೆ ತಂಗಾಳಿಯೂ ಬಿಸತೊಡಗಿದ್ದರಿಂದ ಇಡೀ ನಗರದಲ್ಲಿ ತಂಪಿನ ವಾತಾವರಣ ಸೃಷ್ಟಿಯಾಗಿದೆ.
ಬಿಸಿಲಿನ ನಡುವೆಯೇ ಮಧ್ಯಾಹ್ನ ದಟ್ಟವಾದ ಮೋಡ ಕವಿದಿತ್ತು. ಮಧ್ಯಾಹ್ನ 2 ಗಂಟೆಗೆ ಜಿಟಿ ಜಿಟಿಯಾಗಿ ಆರಂಭವಾದ ಮಳೆ ಜೋರಾಗಿ ಸುರಿದಿದೆ. ತರಕಾರಿ ವ್ಯಾಪಾರಸ್ಥರು,ಸಾರ್ವಜನಿಕರು ಮಳೆಯಿಂದಾಗಿ ಪರದಾಡಿದರು. ಬೀದಿ ಬದಿಯ ವ್ಯಾಪಾರಸ್ಥರು ಮಳೆಯಿಂದ ತೀವ್ರ ತೊಂದರೆಗೆ ಸಿಲುಕುವಂತಾಯಿತು.
ಮಾರುಕಟ್ಟೆಗೆ ಆಗಮಿಸಿದ ಜನರು ಜಿಟಿ ಜಿಟಿ ಮಳೆಯಲ್ಲೇ ತೊಯಿಸಿಕೊಂಡು ಹೋಗುತ್ತಿರುವ ದೃಶ್ಯಸಾಮಾನ್ಯವಾಗಿತ್ತು.
ಕೆಲವರು ಕೊಡೆ ಆಶ್ರಯದಲ್ಲಿ ತೆರಳುತ್ತಿದ್ದರು. ಪದೇ ಪದೆ ಜೋರಾಗಿ ಅಬ್ಬರಿಸುತ್ತಿದ್ದ ಮಳೆ ನಿರಂತರವಾಗಿ ಜಿಟಿ ಜಿಟಿಯಾಗಿ ಸುರಿಯುತ್ತಿತ್ತು. ಒಟ್ಟಾರೆ ಇವತ್ತಿನ ಅಕಾಲಿಕ ಮಳೆಯಿಂದ ಬೆಳಗಾವಿಯ ಜನಜೀವನ ಥಂಡಾ ಹೊಡೆಯಿತು..
ಮಳೆ ಕೇವಲ ಬೆಳಗಾವಿ ನಗರ ವ್ಯಾಪ್ತಿಗೆ ಸೀಮೀತವಾಗಿತ್ತು ಜಿಲ್ಲೆಯಾದ್ಯಂತ ಕೇವಲ ಮೋಡ ಕವಿದಿತ್ತು.