ಬೆಳಗಾವಿ ನಗರದ ಕೇಶವ ನಗರ ಹಾಗೂ ಅಣ್ಣಪೂರ್ಣ ನಗರದಲ್ಲಿ ಮನೆಗಳಿಗೆ ನುಗ್ಗಿದ ನೀರು
ಕಣಬರ್ಗಿಯಲ್ಲಿ ರಸ್ತೆಯ ಮೇಲಿನ ದೃಶ್ಯ
ಮನೆಗಳಿಗೆ ನುಗ್ಗಿದ ನೀರು ಜನ ಹೈರಾಣು…
ಬೆಳಗಾವಿ ಮಹಾನಗರದ ವಡಗಾವಿ ಪ್ರದೇಶದಲ್ಲಿರುವ ಅಣ್ಣಪೂರ್ಣೇಶ್ವರಿ ನಗರ,ಹಾಗು ಕೇಶವ ನಗರದಲ್ಲಿ ಮನೆಗಳಿಗೆ ನೀರು ನುಗ್ಗಿದ್ದು ಜನ ಪರದಾಡುತ್ತಿದ್ದಾರೆ.
ಸ್ಥಳೀಯ ನಗರ ಸೇವಕರು ನಾಲೆಯನ್ನು ಸ್ವಚ್ಛ ಗೊಳಿಸಿ ಬಡವಾಣೆಗಳಿಗೆ ನುಗ್ಗಿದ ನೀರನ್ನು ತಡರವುಗೊಳಿಸುವ ಕಾರ್ಯಾಚರಣೆ ನಡೆಸಿದ್ದು ಪಾಲಿಕೆ ಅಧಿಕಾರಿಗಳು ಸ್ಥಳಕ್ಕೆ ದೌಡಾಯಿಸಿದ್ದಾರೆ.
ಈ ಭಾಗದ ಒಂದೇ ಅಂತಸ್ತಿನ ಮನೆ ಇದ್ದವರು ಮನೆ ಖಾಲಿ ಮಾಡಿದ್ದಾರೆ.ಎರಡು ಮೂರು ಅಂತಸ್ತಿನ ಮನೆ ಇದ್ದವರು ಗ್ರೌಂಡ್ ಫ್ಲೋರ್ ಖಾಲಿ ಮಾಡಿ ಎರಡು,ಮತ್ತು ಮೂರನೇಯ ಫ್ಲೋರ್ ಗೆ ಶಿಪ್ಟ್ ಆಗಿದ್ದಾರೆ.
ಹೆಮ್ಮಡಗಾ ಹೆದ್ದಾರಿ ಬಂದ್..
ಖಾನಾಪುರ ತಾಲ್ಲೂಕಿನ ಭೀಮಗಡ ವನ್ಯಧಾಮ ವ್ಯಾಪ್ತಿಯಲ್ಲಿ ಮಳೆ ಅಬ್ಬರ ಮುಂದುವರಿದಿದ್ದು, ಕರ್ನಾಟಕ–ಗೋವಾ ಸಂಪರ್ಕ ಕಡಿತವಾಗಿದೆ.
ಕರ್ನಾಟಕದಿಂದ ಗೋವಾಕ್ಕೆ ಸಂಪರ್ಕ ಕಲ್ಪಿಸುವ ಸಿಂಧನೂರು-ಹೆಮ್ಮಡಗಾ ರಾಜ್ಯ ಹೆದ್ದಾರಿ ಮುಳುಗಡೆಯಾಗಿದೆ. ಈ ಹೆದ್ದಾರಿ ಮೇಲಿನ ಅಲಾತ್ರಿ ಹಳ್ಳದ ಮೇಲೆ ನಾಲ್ಕು ಅಡಿಗಳಷ್ಟು ನೀರು ಹರಿಯುತ್ತಿದೆ. ಪರಿಣಾಮ ಈ ಹೆದ್ದಾರಿಯಲ್ಲಿ ರಸ್ತೆ ಸಂಚಾರ ಸ್ಥಗಿತಗೊಂಡಿದೆ.
ಪಕ್ಕದ ಮಹಾರಾಷ್ಟ್ರಲ್ಲಿ ವಿಪರೀತ ಮಳೆ ಸುರಿಯುತ್ತಿದೆ. ಪಂಚಗಂಗಾ ನದಿ ಅಪಾಯದ ಮಟ್ಟದಲ್ಲಿ ಹರಿಯುತ್ತಿದ್ದು ಈ ನದಿಯ ನೀರು ನರಸಿಂಹ ವಾಡಿಯ ಬಳಿ ಕೃಷ್ಣಾ ನದಿಗೆ ಸೇರುತ್ತದೆ. ನರಸಿಂಹವಾಡಿಯ ದೇವಸ್ಥಾನ ಸಂಪೂರ್ಣವಾಗಿ ಜಲಾವೃತ ವಾಗಿದೆ.
ಕೃಷ್ಣೆಯ ಒಳಹರಿವು ಒಂದು ಲಕ್ಷ 19 ಸಾವಿರ ಕ್ಯಸೆಕ್ಸ್ ಇದೆ.ಅಲಮಟ್ಟಿ ಜಲಾಶಯದಿಂದ ಒಂದು ಲಕ್ಷ 25 ಸಾವಿರ ಕ್ಯುಸೆಕ್ಸ್ ನೀರು ಬಿಡುಗಡೆ ಮಾಡಲಾಗಿದ್ದು,ಕೃಷ್ಣೆಯ ಪ್ರವಾಹಕ್ಕಿಂತ ಹೆಚ್ಚಾಗಿ ನೀರು ಬಿಡುಗಡೆ ಆಗುತ್ತಿರುವದರಿಂದ ಕೃಷ್ಣೆಯ ತೀರದಲ್ಲಿ ಪ್ರವಾಹದ ಸಾಧ್ಯತೆ ಅತ್ಯಂತ ಕಡಿಮೆ.