ಬೆಳಗಾವಿ- ಕಳೆದ ಎರಡು ವಾರಗಳಿಂದ ವಿಶ್ರಾಂತಿ ಪಡೆದಿದ್ದ ಮಳೆರಾಯ ಇಂದು ಮಧ್ಯಾಹ್ನದ ಹೊತ್ತಿಗೆ ಅವಾಂತರ ಸೃಷ್ಟಿಸಿದೆ,ಇಂದು ಮಧ್ಯಾಹ್ನ ದಿಂದ ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದಾಗಿ ಬೆಳಗಾವಿಯ ಹೋಲ್ ಸೇಲ್ ಹಣ್ಣಿನ ಮಾರುಕಟ್ಟೆ ಸಂಪೂರ್ಣವಾಗಿ ಜಲಾವೃತಗೊಂಡಿದೆ.
ಬೆಳಗಾವಿ ಮಹಾನಗರದ ಕೋಟೆ ಕೆರೆಯ ಪಕ್ಕದಲ್ಲೇ ಇರುವ ಹೋಲ್ ಸೇಲ್ ಹಣ್ಣಿನ ಮಾರುಕಟ್ಟೆ ಪ್ರತಿಸಲ ಮಳೆಗಾಲದಲ್ಲಿ ಜಲಾವೃತಗೊಳ್ಳುವದು ಸಾಮಾನ್ಯ ಆದ್ರೆ ಇವತ್ತು ಈ ಮಾರುಕಟ್ಟೆಯ ಬಹುತೇಕ ಎಲ್ಲ ಮಳಿಗೆಗಳಲ್ಲಿ ನೀರು ನುಗ್ಗಿದ ಪರಿಣಾಮ ಹಣ್ಣಿನ ಬಾಕ್ಸ್ ಗಳು ನೀರಿನಲ್ಲಿ ಮುಳುಗಿ ಲಕ್ಷಾಂತರ ರೂಗಳ ನಷ್ಡವಾಗಿದೆ.
ಮಾರುಕಟ್ಟೆಯಲ್ಲಿ ನಿಲ್ಲಿಸಿದ ದ್ವಿಚಕ್ರವಾಹನಗಳು, ಹಣ್ಣು ತುಂಬಿಕೊಂಡು ಮಾರುಕಟ್ಟೆಗೆ ಬಂದಿದ್ದ ಲಾರಿ,ಸೇರಿದಂತೆ ಇತರ ವಾಹನಗಳು ಅರ್ದಭಾಗ ನೀರಿನಲ್ಲೇ ಮುಳುಗಿದ್ದವು.ಹಣ್ಣು ಖರೀಧಿಸಲು ಮಾರುಕಟ್ಟೆಗೆ ಬಂದಿದ್ದ ಗ್ರಾಹಕರು,ಇವತ್ತು ಪರದಾಡುವ ಪರಿಸ್ಥಿತಿ ಎದುರಾಯಿತು.
ಬೆಳಗಾವಿ ಸುದ್ದಿ | Belagavi Suddi | Belagavi News ಸಮಸ್ಯಗೆ ಸ್ಪಂದನೆ