Breaking News

ಬೆಳಗಾವಿ :22 ಸೇತುವೆಗಳು ಮುಳುಗಡೆ, 160 ಮನೆಗಳು ಕುಸಿತ…

ಬೆಳಗಾವಿ ಜಿಲ್ಲೆಯಲ್ಲಿ ವ್ಯಾಪಕವಾಗಿ ಮಳೆ ಸುರಿಯುತ್ತಿದೆ.ಜಿಲ್ಲೆಯ ನದಿಗಳು ಅಪಾಯದ ಮಟ್ಡದಲ್ಲಿ ಹರಿಯುತ್ತಿವೆ. ಜಲಾಶಯಗಳು ಭರ್ತಿಯಾಗುತ್ತಿವೆ. ನದಿ ಪಾತ್ರದ ಹೊಲಗದ್ದೆಗಳಿಗೆ ನೀರು ನುಗ್ಗಿ ಬೆಳೆಗಳು ಜಲಾವ್ರತಗೊಂಡಿವೆ. ಜಿಲ್ಲೆಯಾದ್ಯಂತ 22 ಸೇತುವೆಗಳು ಮುಳುಗಡೆಯಾಗಿದ್ದು 160 ಮನೆಗಳು ಬಾಗಶ ಕುಸಿದು ಬಿದ್ದಿವೆ.

ಬೆಳಗಾವಿ
ಪಶ್ಚಿಮ ಘಟ್ಟ ಪ್ರದೇಶದಲ್ಲಿ ಹಾಗೂ ಜಿಲ್ಲೆಯಲ್ಲಿ ಧಾರಾಕಾರಮಳೆ ಮುಂದುವರೆದಿದೆ. ಕೃಷ್ಣಾ,ಮಲಪ್ರಬಾ,ಘಟಪ್ರಭಾ ಸೇರಿದಂತೆ ಜಿಲ್ಲೆಯನದಿಗಳು, ಹಳ್ಳಕೊಳ್ಳಗಳು ಉಕ್ಕಿಹರಿಯುತ್ತಿವೆ. ಜಿಲ್ಲೆಯಲ್ಲಿ 22 ಸೇತುವೆ ಮುಳುಗಡೆಯಾಗಿವೆ. ಜನಜೀವನ ಅಸ್ತವ್ಯಸ್ತಗೊಂಡಿದೆ.

ಖಾನಾಪುರ, ಗೋಕಾಕ, ಮೂಡಲಗಿ, ಹುಕ್ಕೇರಿ, ಚಿಕ್ಕೋಡಿ, ನಿಪ್ಪಾಣಿ ತಾಲ್ಲೂಕುಗಳಲ್ಲಿ 22 ಸೇತುವೆ ಮುಳುಗಡೆಯಾಗಿವೆ. ದೂಧಗಂಗಾ ನದಿ ಮೇಲಿನ ಭೋಜ- ಕಾರದಗಾ ಸೇತುವೆ ಮೇಲೆ 16 ಅಡಿ ಅಡಿ, ಮಲ್ಲಿಕವಾಡ- ದಾನವಾಡ ಸೇತುವೆ ಮೇಲೆ 13 ಅಡಿ ಹಾಗೂ ಭೋಜ ಜನವಾಡ- ನಿಪ್ಪಾಣಿ ಕೆಳಸೇತುವೆ ಮೇಲೆ 12 ಅಡಿಗಿಂತ ಹೆಚ್ಚು ನೀರು ಹರಿಯುತ್ತಿದೆ.

ಚಿಕ್ಕಹಟ್ಟಿಹೊಳಿ– ಚಿಕ್ಕಮುನವಳ್ಳಿ, ಚಿಗಡೊಳ್ಳಿ– ನಲ್ಲಾನಟ್ಟಿ, ಗೋಕಾಕ– ಲೋಳಸೂರ, ಮುನ್ಯಾಳ– ಹುಣಶ್ಯಾಳ ಪಿ.ಜಿ, ಪಟಗುಂದಿ– ತಿಗಡಿ, ಸುಣಧೋಳಿ–ಮೂಡಲಗಿ, ಅವರಾದಿ– ಮಹಾಲಿಂಗಪುರ, ಉದಗಟ್ಟಿ– ವಡೇರಹಟ್ಟಿ, ಅರ್ಜುನವಾಡ– ಕೋಚರಿ, ಯರನಾಳ– ಹುಕ್ಕೇರಿ, ಕುರಣಿ– ಕೋಚರಿ, ಭೋಜ– ಕಾರದಗಾ, ಭೋಜವಾಡಿ– ನಿಪ್ಪಾಣಿ, ಮಲ್ಲಿಕವಾಡ– ದಾನವಾಡ, ಸಿದ್ನಾಳ– ಅಕ್ಕೋಳ, ಭಾರವಾಡ– ಕುನ್ನೂರ, ಭೋಜ– ಕುನ್ನೂರ, ಜತ್ರಾಟ– ಭೀವಶಿ, ಬಾವನಸೌಂದತ್ತಿ–ಮಾಂಜರಿ ಸೇತುವೆಗಳು ಮುಳುಗಿವೆ.

ಖಾನಾಪುರದಲ್ಲಿ 55.4 ಎಂಎಂ, ನಿಪ್ಪಾಣಿಯಲ್ಲಿ 37.4 ಎಂಎಂ, ಬೆಳಗಾವಿಯಲ್ಲಿ 22.7 ಎಂಎಂ, ಚಿಕ್ಕೋಡಿಯಲ್ಲಿ 21.0 ಎಂಎಂ, ಕಾಗವಾಡದಲ್ಲಿ 15.0 ಎಂಎಂ,ರಾಯಬಾಗದಲ್ಲಿ 14.7 ಎಂಎಂ ಮಳೆಯಾಗಿದೆ.ಜಿಲ್ಲೆಯಲ್ಲಿ ಒಟ್ಟಾರೆ 16.5 ಎಂಎಂ ಮಳೆ ಆಗಿದೆ.

ಮಳೆಯಿಂದಾಗಿ ಒಟ್ಟು 160 ಮನೆಗಳು ಭಾಗಶಃ ಕುಸಿದು ಬಿದ್ದಿವೆ. ಖಾನಾಪುರ- 27, ಹುಕ್ಕೇರಿ- 11, ಬೈಲಹೊಂಗಲ- 2,ಕಿತ್ತೂರು- 22, ಸವದತ್ತಿ- 26,ರಾಮದುರ್ಗ 41, ಗೋಕಾಕ- 3,ಮೂಡಲಗಿ- 4, ಚಿಕ್ಕೋಡಿ- 1, ಯರಗಟ್ಟಿ- 20, ಅಥಣಿ- 2, ನಿಪ್ಪಾಣಿ- 2 ಮನೆಗಳು ಭಾಗಶಃ ಕುಸಿದು ಬಿದ್ದಿವೆ. ಖಾನಾಪುರ ಮತ್ತು ಸವದತ್ತಿಯಲ್ಲಿ ಎರಡು ಮನೆ ಸಂಪೂರ್ಣವಾಗಿ ಕುಸಿದುಬಿದ್ದಿವೆ. 7 ಜಾನುವಾರುಗಳ ಶೆಡ್‌ ಕುಸಿದುಬಿದ್ದಿವೆ. 51 ಹೆಕ್ಟೇರ್‌ ಪ್ರದೇಶದಲ್ಲಿನ ಕೃಷಿ ಹಾಗೂ 21.24 ಹೆಕ್ಟೇರ್‌ ಪ್ರದೇಶದಲ್ಲಿನ ತೋಟಗಾರಿಕೆ ಬೆಳೆ ಹಾನಿಗೀಡಾಗಿದೆ.

Check Also

ನಾಲ್ಕು ಕೋಟಿ ವಸೂಲಿ ಮಾಡಲು ಮಕ್ಕಳನ್ನು ಕಿಡ್ನ್ಯಾಪ್ ಮಾಡಿ ಜೈಲಿಗೆ ಹೋದ್ರು…..

ಹಣ ಡಬಲ್ ಆಗುತ್ತದೆ ಎಂದು ಕೋಟಿ,ಕೋಟಿ ಹಣವನ್ನು ಇನ್ವೆಸ್ಟ್ ಮಾಡಿ ಮೋಸ ಹೋದವರು ಕೊನೆಗೆ ಹಣವನ್ನು ವಸೂಲಿ ಮಾಡಲು ವಂಚಕನ …

Leave a Reply

Your email address will not be published. Required fields are marked *

Sahifa Theme License is not validated, Go to the theme options page to validate the license, You need a single license for each domain name.