ಬೆಳಗಾವಿ-ಕಳೆದ ಆರು ದಿನಗಳಿಂದ ಮಹಾರಾಷ್ಟ್ರದ ಪಶ್ಚಿಮಘಟ್ಟ ಪ್ರದೇಶದಲ್ಲಿ ಧಾರಾಕಾರ ಮಳೆ ನಿರಂತರವಾಗಿ ಸುರಿಯುತ್ತಿದೆ. ಜೊತೆಗೆ ಬೆಳಗಾವಿ ಜಿಲ್ಲೆಯಾದ್ಯಂತ ವರುಣನ ಅಬ್ಬರ ಹೆಚ್ಚಾಗಿದ್ದು,ಜಿಲ್ಲೆಯ ಸಪ್ತನದಿಗಳಿಗೆ ನೀರಿನ ಒಳಹರಿವು ಹೆಚ್ಚಳವಾಗಿದ್ದು ಸಂತಸದ ಸಂಗತಿಯಾಗಿದೆ.
ಘಟಪ್ರಭಾ ನದಿಯಲ್ಲಿ 25765 ಕ್ಯೂಸೆಕ್ ಒಳಹರಿವು ಇದೆ.ಮಾರ್ಕಂಡೇಯ ನದಿಗೆ 1454 ಕ್ಯೂಸೆಕ್ ಒಳಹರಿವುಇದೆ.ಹಿಪ್ಪರಗಿ ಬ್ಯಾರೆಜ್ ನಿಂದ 91200ಕ್ಯೂಸೆಕ್ ಒಳಹರಿವು,ಅಷ್ಟೇ ಪ್ರಮಾಣದಲ್ಲಿ ಹೊರಹರಿವು ಕೂಡಾ ಇದೆ.ಮಲಪ್ರಭಾ ನದಿಗೆ 11930ಕ್ಯೂಸೆಕ್ ಒಳಹರಿವು ಇದ್ದು ಮಲಪ್ರಭೆ ಸಪ್ತ ನದಿಗಳಲ್ಲಿ ಅತ್ಯಂತ ವೇಗವಾಗಿ ಹರಿಯುತ್ತಿದೆ.
ಆಲಮಟ್ಟಿ ಡ್ಯಾಮ್ ಗೆ ಒಳಹರಿವು 8,3945,ಇದ್ದು 64201 ಕ್ಯೂಸೆಕ್ ನೀರು ಹೊರಕ್ಕೆ ಬಿಡಲಾಗುತ್ತಿದೆ.ಬೆಳಗಾವಿ ಜಿಲ್ಲಾಧ್ಯಂತ ಒಟ್ಟು 15ಕೆಳಹಂತದ ಸೇತುವೆಗಳು ಜಾಲವೃತಗೊಂಡಿದ್ದು ಹಲವಾರು ಹಳ್ಳಿಗಳಿಗೆ ಈ ಸೇತುವೆಗಳ ಸಂಪರ್ಕ ಕಡಿತಗೊಂಡಿದ್ದು ಪರ್ಯಾಯ ಮಾರ್ಗಗಳಿಂದ ಸಂಪರ್ಕ ಸಾಧಿಸಲಾಗಿದೆ.
ಧೂದಗಂಗಾ ನದಿಗೆ ಅಡ್ಡಲಾಗಿ ನಿರ್ಮಿಸಿರುವ ಭೋಜವಾಡಿ ಕಣ್ಣೂರ,ದೂಧಗಂಗಾ ನದಿ ಅಡ್ಡಲಾಗಿ ನಿರ್ಮಿಸಿರುವ ಕಾರದಗಾ ಭೋಜ ಸೇತುವೆ,ವೇದಗಂಗಾ ನದಿಗೆ ಅಡ್ಡಲಾಗಿ ನಿರ್ಮಿಸಿರುವ ಜತ್ರಾಟ ಭೀವಶಿ ಸೇತುವೆ,ವೇದಗಂಗಾ ನದಿ ಅಡ್ಡಲಾಗಿ ನಿರ್ಮಿಸಿರುವ ಕಣ್ಣೂರ ಬಾರವಾಡ ಅಕ್ಕೋಳ- ಸಿದ್ನಾಳ ಸೇತುವೆ,ವೇದಗಂಗಾ ನದಿಗೆ ಅಡ್ಡಲಾಗಿ ನಿರ್ಮಿಸಿರುವ ಹುಣ್ಣರಗಿ- ಮಮದಾಪುರ ಸೇತುವೆ,ಚಿಕ್ಕೋಡಿ ತಾಲೂಕಿನ ಮಲಿಕವಾಡ ದತ್ತವಾಡ ಸೇತುವೆಗಳು ಮುಳುಗಡೆಯಾಗಿವೆ.ಹಿರಣ್ಯಕೇಶಿ ನದಿಗೆ ಅಡ್ಡಲಾಗಿ ನಿರ್ಮಿಸಿರುವ ಕುರಣಿ ಕೋಚರಿ ಸಂಪರ್ಕ ಕಲ್ಪಿಸುವ ಸೇತುವೆ,ಕೃಷ್ಣಾ ನದಿಗೆ ಅಡ್ಡಲಾಗಿ ನಿರ್ಮಿಸಿರುವ ಮಾಂಜರಿ ಭಾವನಸೌಂದತ್ತಿ ಸೇತುವೆ,ಹಾಲಾತ್ರಿ ಹಳ್ಳಕ್ಕೆ ಅಡ್ಡಲಾಗಿ ನಿರ್ಮಿಸಿರುವ ಖಾನಾಪುರ ಹೆಮ್ಮಡಗಾ ಸೇತುವೆ,ಕೃಷ್ಣಾ ನದಿಗೆ ಅಡ್ಡಲಾಗಿ ನಿರ್ಮಿಸಿರುವ ಮಾಂಗಾವತಿ ರಾಜಾಪುರ ಸೇತುವೆ,ವೇದಗಂಗಾ ನದಿಗೆ ಅಡ್ಡಲಾಗಿ ನಿರ್ಮಸಿಸಿರುವ ಭೋಜವಾಡಿ ನಿಪ್ಪಾಣಿ ಸೇತುವೆ.,ಘಟಪ್ರಭಾ ನದಿಗೆ ಅಡ್ಡಲಾಗಿ ನಿರ್ಮಿಸಿರುವ ಶೆಟ್ಟಿಹಳ್ಳಿ ಮಾರನಹೊಳ್ಳ ಸೇತುವೆ,ಹೀಗೆ ಒಟ್ಟು 15 ಸೇತುವೆಗಳು ಮುಳುಗಡೆಯಾಗಿದ್ದರಿಂದ ಅನ್ಯ ಮಾರ್ಗ ಬಳಸಿ ಪ್ರಯಾಣಿಕರ ಸಂಚಾರ ಮಾಡುತ್ತಿದ್ದಾರೆ.
ನದಿ ತೀರಕ್ಕೆ ಇಳಿಯದಂತೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಂಜೀವ ಪಾಟೀಲ ಎಚ್ಚರಿಕೆ ನೀಡಿದ್ದು ಮುಳುಗಡೆಯಾದ ಎಲ್ಲ ಸೇತುವೆಗಳಿಗೆ ಬ್ಯಾರಿಕೇಡ್ ಹಾಕಿ,ಜನ ಈ ಸೇತುವೆಗಳ ಮೂಲಕ ಸಂಚಾರ ಮಾಡದಂತೆ ಸೂಕ್ತ ಪೋಲೀಸ್ ಬಂದೋಬಸ್ತಿ ನಿಯೋಜಿಸಲಾಗಿದೆ.