ಬೆಳಗಾವಿ:3 ರಾಮದುಗ೯ ತಾಲೂಕಿನ ಮುದೇನೂರ ಗ್ರಾಪಂ ವ್ಯಾಪ್ತಿಗೆ ಬರುವ ಆರು ಹಳ್ಳಿಗಳಲ್ಲಿ ಬ್ರಷ್ಟಾಚಾರ ನಡೆದಿದೆ ಎಂದು ಲಂಚ ಮುಕ್ತ ಕರ್ನಾಟಕ ಸಂಘಟನೆ ಆರೋಪಿಸಿದೆ
ಬೆಳಗಾವಿ ನಗರದ ಕನ್ನಡ ಸಾಹಿತ್ಯ ಭವನದಲ್ಲಿ ಪತ್ರಿಕಾ ಗೋಷ್ಠಿ ನಡೆಸಿದ ಸಂಘಟನೆಯ ಪದಾಧಿಕಾರಿಗಳು ಆರು ಹಳ್ಳಿಗಳಲ್ಲಿ ಸರಕಾರದ ಯೋಜನೆಗಳನ್ನು ತಲುಪಿಸದೆ ಕಳೆದ ಮೂರು ವಷ೯ಗಳಿಂದ ಕುಡಿಯುವ ನೀರು ನೀಡದೆ ಸಾವ೯ಜನಿಕರಿಗೆ ಪಂಚಾಯತಿ ಅಧಿಕಾರಿಗಳು ಕಿರುಕುಳ ನೀಡುತ್ತಿದ್ದಾರೆ ಅಲ್ಲದೆ 13 ಕೋಟಿ ಹಣ ದುಬ೯ಳಕೆ ಮಾಡಿಕೊಂಡಿದ್ದಾರೆ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿ ಸೋಮವಾರದಿಂದ ಲಂಚಮುಕ್ತ ಕನಾ೯ಟಕ ನಿಮಾ೯ಣ ವೇದಿಕೆಯಿಂದ ಉಪವಾಸ ಸತ್ಯಾಗ್ರಹ ನಡೆಸಲಾಗುವುದು ಎಂದು ವೇದಿಕೆಯ ಮುಖಂಡ ಶ್ರೀನಿವಾಸಗೌಡ ಪಾಟೀಲ ಹೇಳಿದರು.
ಅವರು ಶುಕ್ರವಾರ ನಗರದ ಕನ್ನಡ ಸಾಹಿತ್ಯ ಭವನದಲ್ಲಿ ಕರೆಯಲಾದ ಸುದ್ದಿಗೋಷ್ಠಿಯಲ್ಲಿ ಮಾತನಾಡುತ್ತ, ಉದ್ಯೋಗ ಖಾತ್ರಿ ಯೋಜನೆಗಳ ಬಗ್ಗೆ ಮಾಹಿತಿ ನೀಡದೆ ಜಾಬ್ ಕಾಡ೯ಗಳನ್ನು ಜನತೆಗೆ ಕೊಡದೆ, ಕೆಲಸ ನಿವ೯ಹಿಸದೆ ಮುದೇನೂರು ಗ್ರಾಮ ಪಂಚಾಯತಿ ಆಡಳಿತ ವಗ೯ವು ಮೃತಪಟ್ಟವರ, ಅನಕ್ಷರಸ್ಥ, ಸರಕಾರಿ ನೌಕರರ, ಬಡಕೂಲಿಕಾರರ ಹೆಬ್ಬಟ್ಟ ಸಹಿಗಳನ್ನು ತಾವೇ ನಮೂದಿಸಿ ಕೊಂಡು ಹಣ ಪಡೆದು ಅಕ್ರಮವೆಸಗಿದ್ದು, ಕಾನೂನು ಬಾಹಿರ ಬೊಗಸ್ ಬಿಲ್ ಗಳನ್ನು ಸೃಷ್ಠಿಸಿ ಕೋಟ್ಯಾಂತರ ರೂ.ಗಳನ್ನು ದುಬ೯ಳಕೆ ಮಾಡಿಕೊಂಡಿದ್ದಾರೆ ಎಂದು ಅವರು ಆರೋಪಿಸಿದರು.
ವಸತಿ ಯೋಜನೆಗಳ ಅಹ೯ ಬಡ ವಸತಿ ರಹಿತರಿಗೆ ದೊರಕದೆ ಗ್ರಾಪಂ ಸದಸ್ಯರ ಸೊಸೆಯಂದಿರು, ಪತ್ನಿ, ಸಂಬಂಧಿಕರು ಹಾಗೂ ಎಸ್ಸಿ,ಎಸ್ಟಿ ವಗ೯ದವರ ಹೆಸರಿನಲ್ಲಿ ಸೂಚಿಸಿ, ವಂಚಿಸಿ ಮನೆಗಳನ್ನು ಕಟ್ಟದೆ ಪಂಚಾಯತಿ ಆಡಳಿತ ವಗ೯ವು ವ್ಯಾಪಕ ಬ್ರಷ್ಡಾಚಾರ ನಡೆಸಿ ದುರುಪಯೋಗ ಪಡೆಸಿಕೊಂಡಿರುವುದು ಸಮಗ್ರ ತನಿಖೆಯಾಗಬೇಕೆಂದು ಅವರು ಆಗ್ರಹಿಸಿದರು.
ಕುಡಿಯುವ ನೀರಿನ ಪೊರೈಕೆಯಂದು ಅಸಾಧ್ಯವಾದ 10 ಸಾವಿರ ಲೀ. ಟ್ಯಾಂಕರ್ ಎಂಜಿನ ಸಂಖ್ಯೆ ತೋರಿಸಿ ನಕಲಿ ಬಿಲ್ ಸೃಷ್ಠಿಸಿ ಕಂದಾಯ ಇಲಾಖೆಯಲ್ಲಿ 17,66,566 ರೂ, ತಾಲೂಕಾ ಪಂಚಾಯತಿಯಲ್ಲಿ 5,85,100 ಹಣವನ್ನು ಒಟ್ಟು 23,51,666,ರೂಗಳ ಬೋಗಸ ಬಿಲ್ ಸೃಷ್ಠಿಸಿ ಸರಕಾರಕ್ಕೆ ವಂಚನೆ ಮಾಡಿದ್ದಾರೆ ಇದರ ಸಮಗ್ರ ತನಿಖೆ ನಡೆಸುವಂತೆ ಆಮರಣ ಉಪವಾಸ ಸತ್ಯಾಗ್ರಹ ನಡೆಸುವುದಾಗಿ ಪಾಟೀಲ ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಎಂ.ಎಸ್.ವೆಂಕಟೇಶ ಪ್ರಸಾದ, ಶ್ರೀಧರ ಪಾಟೀಲ, ಮಲ್ಲಿಕಾಜು೯ನ ಜಕಾತಿ ಹಾಜರಿದ್ದರು.