ಬೆಳಗಾವಿ ಕೆಎಸ್‍ಸಿಎ ಮೈದಾನದಲ್ಲಿ ಗುರುವಾರ ನಡೆದ ಪಂದ್ಯದಲ್ಲಿ ಗುಜರಾತ್ ಮೊದಲ ಇನ್ನಿಂಗ್ಸ್‍ನಲ್ಲಿ 112 ಓವರ್‍ಗಳಲ್ಲಿ ಎಲ್ಲ ವಿಕೆಟ್ ಕಳೆದುಕೊಂಡು 307 ರನ್ ಗಳಿಸಿದೆ. ನಂತರ ಬ್ಯಾಟಿಂಗ್‍ಗೆ ಇಳಿದ ತಮಿಳುನಾಡು ತಮಿಳುನಾಡು ದಿನದ ಅಂತ್ಯಕ್ಕೆ 66 ಓವರ್‍ಗಳಲ್ಲಿ 2ಕ್ಕೆ 154 ರನ್ ಗಳಿಸಿದೆ.
ಪಂದ್ಯದ ಮೊದಲ ದಿನ ಏಳು ವಿಕೆಟ್‍ಗೆ 267 ರನ್ ಗಳಿಸಿದ್ದ ಗುಜರಾತ್, ಎರಡನೇ ದಿನ 26 ಓವರ್‍ಗಳಲ್ಲಿ 40 ರನ್ ಗಳಿಸಿದೆ. ನಂತರ ಬ್ಯಾಟಿಂಗ್ ನಡೆಸಿದ ತಮಿಳುನಾಡು ಆರಂಭದಲ್ಲಿ ಸೂರ್ಯಪ್ರಕಾಶ (6) ವಿಕೆಟ್ ಕಳೆದುಕೊಂಡಿತು. ನಂತರ ಅಭಿನವ ಮುಕುಂದ್ ಹಾಗೂ ಕೌಶಿಕ್ ಗಾಂಧಿ ತಾಳ್ಮೆಯ ಆಟ ಪ್ರದರ್ಶಿಸಿ 142 ರನ್‍ಗಳ ಜತೆಯಾಟ ನೀಡಿದರು. ಈ ಮಧ್ಯೆ 99 ರನ್ ಗಳಿಸಿದ್ದ ಅಭಿನವ ಮುಕುಂದ್ ಬೋಲ್ಡ್ ಆಗುವ ಮೂಲಕ ಶತಕ ವಂಚಿತರಾದರು. ಕೌಶಿಕ್ ಗಾಂಧಿ (43), ಇಂಧ್ರಜಿತ್ (0) ಬ್ಯಾಟಿಂಗ್ ಕಾಯ್ದುಕೊಂಡಿದ್ದಾರೆ. ಗುಜರಾತ್ ಪರ ರುಶ್ ಕಲಾರಿಯಾ ಎರಡು ವಿಕೆಟ್ ಪಡೆದರು
Check Also
ವೀಕ್ಲಿ ಮ್ಯಾರೇಜ್,ಇದು ಲಕ್ಷ ಲಕ್ಷ ರೂಗಳ ಪ್ಯಾಕೇಜ್ ಹುಡುಗರ ಲೈಫ್ ಡ್ಯಾಮೇಜ್ …..!!!
ಬೆಳಗಾವಿ – ಹೆಣ್ಣು ಮಕ್ಕಳ ಮಾರಾಟ ಆಯ್ತು,ಹನಿ ಟ್ರ್ಯಾಪ್ ಗೋಳಾಟ ಆಯ್ತು ಈಗ ಹೊಸದೊಂದ ಆಟ ಶುರುವಾಗಿದೆ ಇದು ಮದ್ಯ …