Breaking News

ಬೆಳಗಾವಿಯಲ್ಲೇ ಉದಯವಾಗಿದೆ RCB….!

ಬೆಳಗಾವಿ-ಈಗ ಐಪಿಎಲ್ ಕ್ರಿಕೆಟ್ ನಡೆಯುತ್ತಿದೆ ಗಡಿ ಭಾಗದ ಬೆಳಗಾವಿಯಲ್ಲಿ IPL ನಶೆ ಯಾವ ರೀತಿ ಏರಿದೆ ಅಂದ್ರೆ RCB ರಾಯಲ್ ಚಾಲೇಂಜ್ ಬೆಂಗಳೂರು ತಂಡದ ಹೆಸರಿನಲ್ಲಿ ಧಾಬಾ ಶುರುವಾಗಿದೆ

ಈ RCB ಧಾಭಾ ಶುರುವಾಗಿದ್ದು ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲ್ಲೂಕಿನ ಯಕ್ಸಂಬಾ ಗ್ರಾಮದ ಬಳಿ ಸದಲಗಾ ರಸ್ತೆಯಲ್ಲಿ, ಈ RCB ಧಾಬಾ IPL ಮ್ಯಾಚ್ ಗಳು ಶುರುವಾದ ದಿನವೇ ಉದ್ಘಾಟನೆಯಾಗಿದೆ.

ಕರ್ನಾಟಕದ ಪರವಾಗಿ ಆಟವಾಡುವ RCB ತಂಡ ಈ ಬಾರಿ ಕಪ್ ಗೆಲ್ಲಲಿ,ಈ ಬಾರಿ ಕಪ್ ನಮ್ಮದಾಗಲಿ ಎನ್ನುವ ಅಭಿಮಾನದಿಂದ ದಶರಥ ಎಂಬ ಯುವಕ ಈ ಧಾಭಾ ಶುರು ಮಾಡಿದ್ದಾನೆ.

ನಮ್ಮ ನಾಡಿನ ತಂಡ ಈ ಬಾರಿ ಗೆಲುವು ಸಾಧಿಸಲಿ,ತಂಡ ನಮ್ದು,ಕಪ್ ನಮ್ದು ಅಂತಾನೆ ಈ ಅಭಿಮಾನಿ,

IPL ಶುರುವಾದಾಗಿನಿಂದ RCB ತಂಡ ಸೋಲುತ್ತಲೇ ಬಂದಿದೆ ಬೆಳಗಾವಿ ಜಿಲ್ಲೆಯಲ್ಲಿ ಹೊರಹೊಮ್ಮಿದ ಅಭಿಮಾನದಿಂದಾದರೂ ಈ ಬಾರಿ RCB ತಂಡ ವಿಜಯ ಸಾಧಿಸಲಿ,ಜೊತೆಗೆ ಬೆಳಗಾವಿ ಜಿಲ್ಲೆಯಲ್ಲಿ ಶುರುವಾಗಿರುವ RCB ಧಾಭಾ ಚನ್ನಾಗಿ ನಡೆಯಲಿ,ಯಶಸ್ಸು ಸಾಧಿಸಲಿ ಅನ್ನೋದೆ ನಮ್ಮ ಆಶಯ.

ಯಕ್ಸಂಬಾ ಗ್ರಾಮದ ಸಮೀಪದಲ್ಲೇ ಉದಯವಾಗಿರುವ RCB ಧಾಭಾ ನೋಡಲು ಕ್ರಿಕೆಟ್ ಅಭಿಮಾನಿಗಳು ಹೋಗುತ್ತಿದ್ದಾರೆ,ಈ ಧಾಭಾ ದಲ್ಲಿ ಅಡುಗೆಯ ರುಚಿ ನೋಡುತ್ತಿರುವದು ವಿಶೇಷ.

Check Also

ವೀರ ಮದಕರಿ ಪುತ್ಥಳಿ ಸ್ಥಾಪನೆ- ಸ್ಥಳ ಪರಿಶೀಲಿಸಿ ವರದಿ ನೀಡಲು ಸೂಚನೆ:

ಪರಿಶಿಷ್ಟರ ದೂರು ನಿವಾರಣೆಗೆ ತ್ವರಿತ ಕ್ರಮ ಕೈಗೊಳ್ಳಲು ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್ ಸೂಚನೆ ಬೆಳಗಾವಿ, -: ಪರಿಶಿಷ್ಟ ಜಾತಿ/ವರ್ಗಗಳ ದೌರ್ಜನ್ಯ …

Leave a Reply

Your email address will not be published. Required fields are marked *