Breaking News

ಬೆಳಗಾವಿ ನಗರದ ಒಳ ರಸ್ತೆಗಳ ಅವನತಿ ,ಸೋಶಿಯಲ್ ಮಿಡಿಯಾದಲ್ಲಿ ವ್ಯಂಗ್ಯಚಿತ್ರ ಬಿಡುಗಡೆ

ಬೆಳಗಾವಿ ರಸ್ತೆಗಳ ಅವನತಿ ಸೋಸಿಯಲ್ ಮಿಡಿಯಾದಲ್ಲಿ ವ್ಯಂಗ್ಯ ಮಾಡಿದ್ದು ಹೀಗೆ…..!!!

ಬೆಳಗಾವಿ – ನಗರದ ಪ್ರಮುಖ ರಸ್ತೆ ಅಭಿವೃದ್ಧಿ ಕಾಮಗಾರಿಗಳು ನಡೆಯುತ್ತಿವೆ ಆದ್ರೆ ಒಳ ಸಂಪರ್ಕ ರಸ್ತೆಗಳು ಸಂಪೂರ್ಣವಾಗಿ ಹಾಳಾಗಿದ್ದು ಬೆಳಗಾವಿಯ ಜನ ಬೆಳಗಾವಿ ರಸ್ತೆಗಳ ಅವನತಿಯ ಕುರಿತು ಶೋಲೆ ಚಿತ್ತದ ಸಂಭಾಷಣೆ ಯನ್ನು ತಿರುಚಿ ಈ ರೀತಿ ವ್ಯಂಗ್ಯವಾಡಿದ್ದಾರೆ

ಶೋಲೆ ಚಿತ್ರದಲ್ಲಿ ಅಮೀತಾ ಬಚ್ಚನ್ ಗೆ ಗುಂಡು ತಗುಲಿ ಗಾಯಗೊಂಡಾಗ ಧರ್ಮೇಂದ್ರ ಅಮೀತಾಬ ಗೆ ಜಯ ಚೋಟ್ ಕೈಸೆ ಲಗಿ ಅಂದಾಗ ಆತ ಚಿತ್ರದಲ್ಲಿ ಹೇಳಿದ್ದೇ ಬೇರೆ ,ಆದ್ರೆ ಬೆಳಗಾವಿಯ ಕ್ರಿಯೇಟಿವ್ ಜನ ಅದನ್ನು ತಿರುಚಿ ತಾವುದೇ ಕೆಲಸದಿಂದ ಬೆಳಗಾವಿಗೆ ಹೋಗಿದ್ದೆ ಅಲ್ಲಿಯ ರಸ್ತೆಯ ತಗ್ಗಿನಲ್ಲಿ ಬಿದ್ದು ಗಾಯ ಆಗಿದೆ ಎಂದು ಸಂಭಾಷಣೆಯನ್ನು ತಿರುಚಿ ತಮ್ಮ ಆಕ್ರೋಶ ಹೊರಹಾಕಿದ್ದಾರೆ.

ಬೆಳಗಾವಿ ಮಹಾನಗರ ಪಾಲಿಕೆಗೆ ಬರಬೇಕಾಗಿದ್ದ ಈ ವರ್ಷದ ನೂರು ಕೋಟಿ ಅನುದಾನ ಇನ್ನುವರೆಗೆ ಬಂದಿಲ್ಲ ಈ ವರ್ಷ ಮುಗಿಯಲು ಕೇವಲ 48 ಘಂಟೆ ಮಾತ್ರ ಬಾಕಿ ಇದ್ದು ನೂರು ಕೋಟಿ ಅನುದಾನ ಬಿಡುಗಡೆಗೆ ಒತ್ತಾಯಿಸಿ ಶಾಸಕ ಅಭಯ ಪಾಟೀಲ ಮತ್ತು ಅನೀಲ ಬೆನಕೆ ಬೆಂಗಳೂರಿನಲ್ಲಿ ಮಂತ್ರಿಗಳ ದುಂಬಾಲು ಬಿದ್ದರೂ ಸರ್ಕಾರ ನಗರೋಥ್ಥಾನ ಯೋಜನೆ ಯ ನೂರು ಕೋಟಿ ಅನುದಾನ ಬಿಡುಗಡೆ ಮಾಡದೇ ಇರುವದು ದುರ್ದೈವ

ಸ್ಮಾರ್ಟ್ ಸಿಟಿ ಯೋಜನೆಯಲ್ಲಿ ನಗರದ ಪ್ರಮುಖ ರಸ್ತೆಗಳು ಮಾತ್ರ ಕಾಂಕ್ರೀಟ್ ರಸ್ತೆಗಳಾಗುತ್ತಿವೆ ಆದ್ರೆ ಬೆಳಗಾವಿಯ ಒಳ ರಸ್ತೆಗಳು ಸ್ವರೂಪ ಕಳೆದುಕೊಂಡಿವೆ ಈ ರಸ್ತೆಗಳು ಸುಧಾರಣೆ ಆಗಬೇಕಾದರೆ ಸರ್ಕಾರ ನೂರು ಕೋಟಿ ರೂ ಅನುದಾನ ತಕ್ಷಣ ಬಿಡುಗಡೆ ಮಾಡಬೇಕಾಗಿದೆ ಅದಕ್ಕೆ ಬೆಳಗಾವಿ ಜಿಲ್ಲಾ ಉಸ್ತುವಾರಿ ಸಚಿವ ಜಗದೀಶ ಶೆಟ್ಟರ್ ತಮ್ಮ ಇಚ್ಛಾಶಕ್ತಿ ತೀರಿಸಬೇಕಾಗಿದೆ

ಈ ವಿಷಯದಲ್ಲಿ ನಿರ್ಲಕ್ಷ್ಯ ಮಾಡಿದ್ರೆ ಬೆಳಗಾವಿಯ ಜನ ಸೋಸಿಯಲ್ ಮಿಡಿಯಾದಲ್ಲಿ ಜನಪ್ರತಿನಿಧಿಗಳಿಗೆ,ಸರ್ಕಾರಕ್ಕೆ ಇದೇ ರೀತಿ ವ್ಯಂಗ್ಯ ಮಾಡುತ್ತಾರೆ.

Check Also

ನಾಳೆ ಬುಧವಾರವೂ ಜಿಲ್ಲೆಯ ಎಲ್ಲ ತಾಲ್ಲೂಕುಗಳ ಶಾಲೆಗಳಿಗೆ ರಜೆ ಘೋಷಣೆ

ಬೆಳಗಾವಿ- ಬೆಳಗಾವಿ ಜಿಲ್ಲೆಯಾದ್ಯಂತ ಧಾರಾಕಾರವಾಗಿ ಮಳೆ ಸುರಿಯುತ್ತಿದ್ದು ಜಿಲ್ಲೆಯ ಜನಜೀವನ ಅಸ್ತವ್ಯಸ್ತವಾಗಿದೆ. ನಾಳೆ ಬುಧವಾರ ಬೆಳಗಾವಿ ಜಿಲ್ಲೆಯ ಎಲ್ಲ ಶಾಲಾ …

Leave a Reply

Your email address will not be published. Required fields are marked *