ಬೆಳಗಾವಿ: ಸಪ್ನಾ ಬುಕ್ ಹೌಸ್ ನ 19 ನೇ ಶಾಖೆ ಬೆಳಗಾವಿಯಲ್ಲಿ ಆರಂಭಗೊಂಡಿದ್ದು , ಡಿ 12 ರಂದು ನಗರದ ಕೊಲ್ಲಾಪುರ ವೃತ್ತದ ಬಳಿ ಉದ್ಘಾಟನೆ ನಡೆಯಲಿದೆ ಎಂದು ಸಪ್ನಾ ವ್ಯವಸ್ಥಾಪಕ ನಿರ್ದೇಶಕ ದೊಡ್ಡೇಗೌಡ ಹೇಳಿದರು. ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅಂದು ಬೆಳಗ್ಗೆ 11 ಗಂಟೆಗೆ ತೋಂಟದ ಡಾ. ಸಿದ್ದರಾಮ ಸ್ವಾಮೀಜಿ ಉದ್ಘಾಟನೆ ಮಾಡುವರು ಎಂದು ಹೇಳಿದರು. ಬೆಳಗಾವಿ ಯಲ್ಲಿ 11 ಸಾವಿರ ಚದರ ಅಡಿಗಳಲ್ಲಿ ಹವಾನಿಯಂತ್ರಿತ ಪುಸ್ತಕ ಮಳಿಗೆ ಸ್ಥಾಪಿಸಲಾಗಿದೆ ಎಂದು ಹೇಳಿದರು
